ಚಳ್ಳಕೆರೆ
Cricket: ಚಳ್ಳಕೆರೆ ವಾರಿಯರ್ಸ್ ಸಿಪಿಎಲ್ ಚಾಂಪಿಯನ್
CHITRADURGA NEWS | 05 OCTOBER 2024
ಚಳ್ಳಕೆರೆ: ಚಳ್ಳಕೆರೆ ಪ್ರಿಮಿಯರ್ ಲಿಗ್ ಸಿಸನ್-3(CPL) 2024ರ ಫೈನಲ್ ಪಂದ್ಯದಲ್ಲಿ ಲೆಜೆಂಡ್ ತಂಡದ ವಿರುದ್ಧ ಚಳ್ಳಕೆರೆ ವಾತಿಯರ್ಸ್ 6 ವಿಕೆಟ್ ಅಂತರದ ಗೆಲುವು ದಾಖಲಿಸುವ ಮೂಲಕ ಚಳ್ಳಕೆರೆ ವಾರಿಯರ್ಸ್ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಕ್ಲಿಕ್ ಮಾಡಿ ಓದಿ: KEB: ವಿದ್ಯುತ್ ತಗುಲಿ ಎರಡು ಎಮ್ಮೆ ಸಾವು
ಇಲ್ಲಿನ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಭಗತ್ ಕ್ರಿಕೆಟ್(Cricket) ಕ್ಲಬ್ ವತಿಯಿಂದ ಚಳ್ಳಕೆರೆ ಪ್ರಿಮಿಯರ್ ಲಿಗ್ ಸಿಸನ್ 3 ಕ್ರಿಕೆಟ್ ಪದ್ಯಾವಳಿ ಆಯೋಜಿಸಲಾಗಿತ್ತು.
ಚಳ್ಳಕೆರೆ ವಾರಿಯರ್ ತಂಡ ನಿರಂಜನ್, ತರುಣ್, ಮುತ್ಯಂಜಯ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ 8 ಓವರ್ ಗಳಲ್ಲಿ 55 ರನ್ ಲೆಜೆಂಡ್ ತಂಡವನ್ನು ಕಟ್ಟಿ ಹಾಕಿದ್ರು.
ಚಳ್ಳಕೆರೆ ವಾರಿಯರ್ಸ್ ತಂಡದ ಆರಂಭಿಕ ಆಟಗಾರ ಪ್ರಶಾಂತ್, 15 ಬಾಲಿಗೆ 22 ರನ್, ನಾಯಕ ಶಾಂತರಾಜ್ 9 ಬಾಲಿಗೆ 13 ರನ್ ಕಲೆ ಹಾಕಿದ್ರು. ಮುತ್ತು 5 ಬಾಲಿಗೆ 10 ರನ್ ಹೊಡೆಯುವ ಮೂಲಕ 5.3 ಓವರ್ ಗೆ ಗೆಲುವು ತಂದು ಕೊಟ್ಟರು.
ಕಳೆದ ಬಾರಿ ನಾವು ಪ್ಲೇ ಆಪ್ ಬರಲು ಸಾಧ್ಯವಾಗಿರಲಿಲ್ಲ. ಆದ್ರೆ ಈ ಬಾರಿ ತಂಡ ಒಗ್ಗಟ್ಟಿನಿಂದ ಉತ್ತಮ ಪ್ರದರ್ಶನ ನೀಡಿದ್ದೇವೆ. ನಿರಂಜನ್, ಮುತ್ತು, ತರುಣ್ ವೆಂಕಟೇಶ ಸೇರಿದಂತೆ ಎಲ್ಲಾ ಆಟಗಾರರ ಶ್ರಮದಿಂದ ನಾವು ಟ್ರೋಪಿ ಪಡೆದ ಸಂಭ್ರಮ ಇದೆ. ಫ್ರಾಂಚೈಸಿ ಗಳಾದ ಜಾಂಟಿ, ಮುತ್ತುರಾಜು, ಮಂಜುನಾಥ್, ಮಹೇಂದ್ರ ಆಟಗಾರರಿಗೆ ಸಾಥ್ ನೀಡಿ ಬೆಂಬಲಿಸಿದರಿಂದ ತಂಡಕ್ಕೆ ಶಕ್ತಿ ತುಂಬಿದ್ದಾರೆ.
| ಶಾಂತರಾಜ್, ಚಳ್ಳಕೆರೆ ವಾರಿಯರ್ಸ್ ತಂಡದ ನಾಯಕ.
ಕ್ಲಿಕ್ ಮಾಡಿ ಓದಿ: AdikeRate: ಅಡಿಕೆ ಧಾರಣೆ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್ ?
ಪ್ರಥಮ ಸ್ಥಾನ ಚಳ್ಳಕೆರೆ ವಾತಿಯರ್ಸ್, ದ್ವಿತೀಯ ಸ್ಥಾನ ಲೆಜೆಂಡ್, ಮೂರನೇ ಸ್ಥಾನ ಜಿಜೆ ಕ್ರಿಕೆಟರ್ಸ್, ನಾಲ್ಕನೇ ಸ್ಥಾನ ಆಯುಷ್ ಲಯನ್ ಪಡೆದುಕೊಂಡವು.
ಸಿಪಿಎಲ್ ಸಿಸನ್ 3ರಲ್ಲಿ 12 ಮ್ಯಾಚ್ ನಲ್ಲಿ 208 ರನ್ ಕಳೆಹಾಕಿದ ಲೆಜೆಂಡ್ ತಂಡದ ಆಟಗಾರ ಬೆಸ್ಟ್ ಬ್ಯಾಟ್ಸ್ ಮಾನ್ ಆಗಿ ಮುರುಘ, 12 ಇನಿಂಗ್ಸ್ ನಲ್ಲಿ 25 ವಿಕೆಟ್ ಪಡೆದ ಲೆಜೆಂಡ್ ತಂಡದ ಆಟಗಾರ ಬೆಸ್ಟ್ ಬೌಲರ್ ಆಗಿ ಅಪ್ಪಯ್ಯ, ಎರಡನೇ ಸ್ಥಾನದಲ್ಲಿ ಚಳ್ಳಕೆರೆ ವಾರಿಯ್ಸ್ ತಂಡದ ಆಟಗಾರ ಮುತ್ತು 11 ಇನಿಂಗ್ಸ್ ನಲ್ಲಿ 19 ವಿಕೆಟ್ ಪಡೆದಿದ್ದಾರೆ. ಬೆಸ್ಟ್ ಪಿಲ್ಡರ್ ಪ್ರಶಸ್ತಿ ವಂಶಿ ಪಡೆದುಕೊಂಡಿದ್ದಾರೆ.
ಎರಡು ಸಿಜನ್ ನಲ್ಲಿ ಯೂಟ್ಯೂಬ್ ಲೈವ್ ಇರಲಿಲ್ಲ. ಈ ಸಲ ಯೂಟ್ಯೂಬ್ ಇದಿದ್ದರಿಂದ ಸಾಕಷ್ಟು ಕ್ರೀಡಾಪಟುಗಳು, ಕ್ರೀಡಾಸಕ್ತರಿಗೆ ಅನುಕೂಲವಾಗಿದೆ. ಒಂದು ರೀತಿಯಲ್ಲಿ ಚಳ್ಳಕೆರೆಯಲ್ಲಿ ಸಿಪಿಎಲ್ ಸಿಜನ್ 3 ಹಬ್ಬದ ವಾತಾವರಣ ಸೃಷ್ಟಿ ಮಾಡಿತ್ತು. ಪ್ರಾಚೈಸಿಗಳು, ಕ್ರೀಡಾಪಟುಗಳು ಸಾಥ್ ಕೊಟ್ಟಿದ್ದರಿಂದ ಸಿಪಿಎಲ್ ಯಶಸ್ವಿಯಾಗಿದೆ.
| ರವಿನಾಯಕ, ಆಯೋಜಕರು