Connect with us

    ಚಳ್ಳಕೆರೆ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ | ₹ 30 ಲಕ್ಷಕ್ಕೆ ಮುಕ್ತಿ ಬಾವುಟ ಪಡೆದ ಶಾಸಕ ವೀರೇಂದ್ರ ಪಪ್ಪಿ

    CLK

    ಮುಖ್ಯ ಸುದ್ದಿ

    ಚಳ್ಳಕೆರೆ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ | ₹ 30 ಲಕ್ಷಕ್ಕೆ ಮುಕ್ತಿ ಬಾವುಟ ಪಡೆದ ಶಾಸಕ ವೀರೇಂದ್ರ ಪಪ್ಪಿ

    CHITRADURGA NEWS | 22 MAY 2024
    ಚಿತ್ರದುರ್ಗ: ಚಳ್ಳಕೆರೆ ನಗರದ ಆರಾಧ್ಯ ದೈವ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ ಬುಧವಾರ ವೈಭವದಿಂದ ನೆರವೇರಿತು.

    ರಥೋತ್ಸವದ ಅಂಗವಾಗಿ ಮುಂಜಾನೆ ಕೆಂಡೋತ್ಸವ ನೆರವೇರಿತು. ಸಂಜೆ 4.30ಕ್ಕೆ ಪಲ್ಲಕ್ಕಿಯಲ್ಲಿ ದೇವರನ್ನು ತಂದು ರಥದಲ್ಲಿ ಪ್ರತಿಷ್ಠಾಪಿಸುತ್ತಿದ್ದಂತೆ ಜಯಘೋಷ ಮೊಳಗಿದವು. ಶಾಸಕ ಕೆ.ಸಿ.ವೀರೇಂದ್ರಪಪ್ಪಿ ₹ 30 ಲಕ್ಷಕ್ಕೆ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ಪಡೆದರು. ಬಳಿಕ ಮಂಗಳಾರತಿ ನಡೆಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಟಿ.ರಘುಮೂರ್ತಿ ದೇವರ ದರ್ಶನ ಪಡೆದರು.

    ಕ್ಲಿಕ್ ಮಾಡಿ ಓದಿ: ಚಿತ್ರದುರ್ಗಕ್ಕೂ ಬಂತು ಡ್ರೋನ್‌ | ಔಷಧ ಸಿಂಪರಣೆಗೆ ರೈತರಿಗೆ ನೆರವು

    ನಂದಿಕೋಲು, ಡೊಳ್ಳು, ಸೋಮನಕುಣಿತ, ಭಜನೆ, ಕೋಲಾಟ ಮುಂತಾದ ಜನಪದ ಕಲಾ ಮೇಳಗಳು ಮೆರಗು ತಂದವು. ಭಕ್ತರು ಚೂರುಬೆಲ್ಲ, ಮೆಣಸು, ಮಂಡಕ್ಕಿ, ಶೇಂಗಾ, ವೀಳ್ಯದೆಲೆ, ಮಲ್ಲಿಗೆ, ಕನಕಾಂಬರ ಹೂವು ಮತ್ತು ಬಾಳೆಹಣ್ಣನ್ನು ರಥಕ್ಕೆ ಅರ್ಪಿಸಿದರು.

     

    CLK

    ವೀರಭದ್ರಸ್ವಾಮಿ ದೊಡ್ಡ ರಥೋತ್ಸವ ವೈಭವ

    ಜಾತ್ರೆ ಪ್ರಯುಕ್ತ ಪಾವಗಡ ರಸ್ತೆಯ ಸಿಂಚಲ ಲಕ್ಷ್ಮೀ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿ ಕರೆಕಾಟ್ಲಹಟ್ಟಿ, ಬೊಮ್ಮದೇವರಹಟ್ಟಿ, ಗಡ್ಡಾರಹಟ್ಟಿ, ವರವಿನೋರಹಟ್ಟಿ, ಬಂಗಾದೇವರಹಟ್ಟಿ, ಪೆತ್ತಮ್ಮನೋರಹಟ್ಟಿ ಸೇರಿ 20 ಕ್ಕೂ ಹೆಚ್ಚು ಹಟ್ಟಿಯ ಜನರು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

    ಗುರುವಾರ ನಗರದೇವತೆ ಚಳ್ಳಕೇರಮ್ಮ ಮತ್ತು ಉಡುಸಲಮ್ಮ ದೇವಿಯ ಉತ್ಸವ ಮೂರ್ತಿಗಳನ್ನು ಭಕ್ತರು ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಾರೆ. ಕಡುಬಿನ ಕಾಳಗ, ವೀರಭದ್ರಸ್ವಾಮಿ ಹಾಗೂ ಕಾಳಮ್ಮ ದೇವಿಗೆ ವಾಗ್ವಾದ ಕಾರ್ಯಕ್ರಮ ನಡೆಯಲಿದೆ. ಮೇ 24ರಂದು ಕಂಕಣ ವಿಸರ್ಜನೆ, ಹೋಮ, ಶಾಂತಿ, ಓಕಳಿ ನಡೆಯಲಿದೆ.

    ಕ್ಲಿಕ್ ಮಾಡಿ ಓದಿ: ಕಂಟೇನರ್ ಲಾರಿಯಲ್ಲಿ ಎತ್ತುಗಳ ಸಾಗಾಣೆ | ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರಿಂದ ರಕ್ಷಣೆ

     

    MLA PUPPY

    ರಥೋತ್ಸವದ ವೇಳೆ ಜನರಿಗೆ ನಮಸ್ಕರಿಸಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

    ದಾವಣಗೆರೆ, ಬಳ್ಳಾರಿ, ತುಮಕೂರು, ಬೆಂಗಳೂರು, ಶಿವಮೊಗ್ಗ, ಅನಂತಪುರ ಮುಂತಾದ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಬರುತ್ತಾರೆ. ಈ ಜಾತ್ರೆ ಮುಗಿದ ನಂತರವೇ ಈ ಭಾಗದಲ್ಲಿ ಮಾಗಿಯ ಉಳುಮೆ ಹಾಗೂ ಬಿತ್ತನೆ ಕಾರ್ಯಗಳು ಆರಂಭವಾಗುತ್ತವೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top