ಕ್ರೈಂ ಸುದ್ದಿ
ಸೀಬಾರ ಬಳಿ ಡಿವೈಡರಿಗೆ ಕಾರು ಡಿಕ್ಕಿ | ಇಬ್ಬರು ಮೃತ

Published on
CHITRADURGA NEWS | 22 MAY 2024
ಚಿತ್ರದುರ್ಗ: ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಹೊರವಲಯದ ಸೀಬಾರ ಬಳಿ ನಡೆದಿದೆ.
ಬೆಂಗಳೂರು ಮೂಲದ ಸುಚಿತ್ರಾ(35) ಹಾಗೂ ಕಾರು ಚಾಲಕ ರಘು(40) ಮೃತರು.
ಸುಚಿತ್ರಾ ಸ್ಥಳದಲ್ಲೇ ಮೃತಪಟ್ಟಿದ್ದರೆ, ರಘು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಬೆಂಗಳೂರು ಮೂಲದ ಅರುಣ್ ಹಾಗೂ ಅವರ ಪತ್ನಿ ಸುಚಿತ್ರಾ, ಪುತ್ರ ಯಶಸ್, ಸ್ನೇಹಿತ ರಘು ಸೇರಿದಂತೆ ನಾಲ್ವರು ಬೆಂಗಳೂರಿನಿಂದ ಶಿರಸಿಯ ದೇಗುಲಕ್ಕೆ ತಡರಳಿದ್ದರು.
ಶಿರಸಿಯಿಂದ ವಾಪಾಸು ಬೆಂಗಳೂರಿಗೆ ತೆರಳುವಾಗ ಕಾರುಬಸೀಬಾರ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಮೃತಪಟ್ಟಿದ್ದಾರೆ.
ಅರುಣ್ ಹಾಗೂ ಪುತ್ರ ಯಶಸ್‌ಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Continue Reading
Related Topics:Car accident, Chitradurga, crime, Kannada Updates, Police, Seebara, ಅಪರಾಧ, ಕನ್ನಡ ಸುದ್ದಿ, ಕಾರು ಅಪಘಾತ, ಚಿತ್ರದುರ್ಗ, ಪೊಲೀಸ್

Click to comment