ಮುಖ್ಯ ಸುದ್ದಿ
ಕ್ಯಾನ್ಸರ್ ಬೇಗ ಪತ್ತೆ ಮಾಡಿದರೆ ತಡೆಯುವುದು ಸುಲಭ | ಡಾ.ಅಶ್ವಿನಿ
CHITRADURGA NEWS | 05 FEBRUARY 2025
ಚಿತ್ರದುರ್ಗ: ಕ್ಯಾನ್ಸರ್ ಇರುವುದನ್ನು ಬೇಗ ಪತ್ತೆ ಮಾಡಿದರೆ ಅದನ್ನು ತಡೆಯುವುದು ಸುಲಭ ಆದರೆ ಸಮಯ ಮೀರಿ ಹೋದಾಗ ವೈದ್ಯರ ಚಿಕಿತ್ಸೆ ನಾಟುವುದು ಕಷ್ಟವಾಗುತ್ತದೆ ಎಂದು ಬಸವೇಶ್ವರ ಮೆಡಿಕಲ್ ಕಾಲೇಜಿನ ಡಾ.ಜಿ.ಎಸ್.ಅಶ್ವಿನಿ ತಿಳಿಸಿದರು.
Also Read: ತರಳಬಾಳು ಹುಣ್ಣಿಮೆ ಮಹೋತ್ಸವ | 9 ದಿನಗಳ ಕಾಲ ಭರಮಸಾಗರದಲ್ಲಿ ಹಬ್ಬದ ಸಂಭ್ರಮ
ನಗರದ ಎಸ್‍ಜೆಎಂ ಫಾರ್ಮಸಿ ಕಾಲೇಜಿನಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಗೆ ಸ್ತನದ ಕ್ಯಾನ್ಸರ್ ಮತ್ತು ಸರ್ವೈಕಲ್ ಕ್ಯಾನ್ಸರ್ ತೀವ್ರವಾಗಿ ಕಾಡುತ್ತಿವೆ. ಇದರ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ನಮ್ಮೆಲ್ಲರ ಹೊಣೆ.
ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆ ಮೂರು ವರ್ಷದ ಮಟ್ಟಿಗೆ ಕ್ಯಾನ್ಸರ್ ಅನ್ನು ತಡೆಯಲು ಮತ್ತು ನಿರ್ವಹಣೆಗಾಗಿ ವೇದವಾಕ್ಯವನ್ನು ಸೂಚಿಸಿದೆ “ಯುನೈಟೆಡ್ ಬೈ ಯೂನಿಕ್” ಅಂದರೆ ಒಬ್ಬ ರೋಗಿಗಿಂತ ಇನ್ನೊಬ್ಬ ರೋಗಿಯು ವಿಭಿನ್ನವಾಗಿ ರೋಗ ಚಿಕಿತ್ಸಾ ನಿರ್ವಹಣೆ ಮಾಡಬೇಕಾಗುತ್ತದೆ.
Also Read: ಗಂಡನ ಮೇಲಿನ ದ್ವೇಷಕ್ಕೆ ಮಗುವಿಗೆ ಬರೆಹಾಕಿದ ಮಹಾತಾಯಿ
ಕ್ಯಾನ್ಸರ್ ರೋಗ ಎರಡನೇ ಮಹಾಮಾರಿ ರೋಗವಾಗಿ ಹೊರಹೊಮ್ಮುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
ಭಾರತದಲ್ಲಿ ಸರಿಸುಮಾರು ಗರ್ಭಕಂಠದ ಕ್ಯಾನ್ಸರ್ ಗೆ (ಸರ್ವೈಕಲ್ ಕ್ಯಾನ್ಸರ್) ವರ್ಷಕ್ಕೆ 67,000 ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಸರಾಸರಿ ಪ್ರತಿ ಎಂಟು ನಿಮಿಷಕ್ಕೆ ಒಬ್ಬ ಮಹಿಳೆ ಈ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾಳೆ.
ಇದಕ್ಕೆ ಕಾರಣ HPV ವೈರಾಣು, ರೋಗಲಕ್ಷಣಗಳು ಇದ್ದರೂ ವೈದ್ಯರ ಸಲಹೆ ಮತ್ತು ಸೂಚನೆಗೆ ಬರದೇ ಇರುವುದು. ಕ್ಯಾನ್ಸರ್ ಬಾರದಂತೆ ತಡೆಯಲು ಲಸಿಕೆಗಳು ಇದ್ದರು ತೆಗೆದುಕೊಳ್ಳದೆ ಇರುವುದು ಹಾಗೂ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸಲು ಆಗದೆ ಹೋಗುವುದು ಸರ್ವೇಸಾಮಾನ್ಯವಾಗಿದೆ.
Also Read: ಸಮಾಧಿಯಿಂದ ದೇಹ ಹೊರ ತೆಗೆದು ತನಿಖೆ | ನಾಲ್ಕು ತಿಂಗಳ ಹಿಂದೆ ಅಂತ್ಯಕ್ರಿಯೆ
ಗರ್ಭಕಂಠದಲ್ಲಿ ಮತ್ತು ಸ್ತನಗಳಲ್ಲಿ ಯಾರಿಗಾದರೂ ತೊಂದರೆಗಳು ಕಂಡುಬಂದಲ್ಲಿ ಹೇಳಿಕೊಳ್ಳಲು ಮುಜುಗರ ಪಡಬೇಡಿ ಎಂದು ಕಿವಿಮಾತು ಹೇಳಿದರು.
ಎಸ್ ಜೆ ಎಂ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಟಿ.ಎಸ್.ನಾಗರಾಜ್, ಔಷಧ ವಿಭಾಗದ ಮುಖ್ಯಸ್ಥ ಡಾ.ಯೋಗಾನಂದ, ಡಾ.ಸ್ನೇಹಲತಾ, ಡಾ.ಬಸವರಾಜ ಹರ್ತಿ, ಡಾ.ನಟರಾಜ್, ಡಾ.ಅಬೂಬಕರ್ ಸಿದಿಕ್, ಡಾ.ಅರ್ಪಿತ, ಡಾ.ಸೌಮ್ಯ, ಅಕ್ಕಮ್ಮ, ಶರತ್ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು ಭಾಗವಹಿಸಿದ್ದರು.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್ ಎಷ್ಟಿದೆ?
ಕ್ಯಾನ್ಸರ್ ದಿನದ ಅಂಗವಾಗಿ ಪೋಸ್ಟರ್ ಸ್ಪರ್ಧೆ ಮತ್ತು ಕ್ವಿಜ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.