Connect with us

    ಸರ್ಕಾರಿ ನೌಕರರ ಅಭಿನಂದನಾ ಸಮಾರಂಭಕ್ಕೆ NPS ನೌಕರರ ಬಹಿಷ್ಕಾರ

    Dr.S.R.Lepaksha

    ಮುಖ್ಯ ಸುದ್ದಿ

    ಸರ್ಕಾರಿ ನೌಕರರ ಅಭಿನಂದನಾ ಸಮಾರಂಭಕ್ಕೆ NPS ನೌಕರರ ಬಹಿಷ್ಕಾರ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 16 AUGUST 2024

    ಚಿತ್ರದುರ್ಗ: ರಾಜ್ಯ ಸರ್ಕಾರಿ ನೌಕರರ ಸಂಘ ನಾಳೆ ಆಗಸ್ಟ್ 17 ರಂದು ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭವನ್ನು ಸಮಸ್ತ ಸರ್ಕಾರಿ NPS ನೌಕರರು ಬಹಿಷ್ಕಾರ ಮಾಡಿದ್ದೇವೆ ಎಂದು ಎನ್‍ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಸ.ರಾ.ಲೇಪಾಕ್ಷ ತಿಳಿಸಿದ್ದಾರೆ.

    ಎನ್‍ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶಾಂತರಾಮ ಹಾಗೂ ಸಂಘದ ಪದಾಧಿಕಾರಿಗಳು ಕಳೆದ ಸುಮಾರು ಎಂಟು ವರ್ಷಗಳಿಂದ ನೂರಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ NPSಗೆ ಸಂಬಂಧಿಸಿದಂತೆ ಕಾರ್ಯಗಾರ ಮಾಡಿದ್ದು, ಎನ್‍ಪಿಎಸ್ ರದ್ದತಿಯ ವಿಷಯವು ಕ್ಯಾಬಿನೆಟ್ ಹಂತದಲ್ಲಿ ಅನುಮೋದನೆ ಪಡೆಯಲು ಬಾಕಿ ಇದೆ.

    ಇದನ್ನೂ ಓದಿ: ಮಾಜಿ ಶಾಸಕ SKB ಅಭಿಮಾನಿ ಬಳಗದಿಂದ ಸಂಸದ ಗೋವಿಂದ ಕಾರಜೋಳಗೆ ಅಭಿನಂದನೆ

    ಈ ಸಂದರ್ಭದಲ್ಲಿ NPS ನೌಕರರ OPS ಬೇಡಿಕೆಯ ದಿಕ್ಕನ್ನು ತಪ್ಪಿಸಲು ಹಾಗೂ ಸಮಾವೇಶಗಳಿಗೆ NPS ನೌಕರರನ್ನು ಸೆಳೆಯುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಆಯೋಜಿಸಿರುವ NPS ನೌಕರರ ಕಾರ್ಯಾಗಾರವನ್ನು ವಿರೋಧಿಸುವುದು ಹಾಗೂ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ.

    ಮುಂದಿನ ದಿನಗಳಲ್ಲಿ ಯಾವುದೇ ಸಂಘಟನೆಗಳು OPS ರದ್ದತಿಯ ಹಂತದಲ್ಲಿ ಇರುವಾಗ ಕಾರ್ಯಾಗಾರಗಳನ್ನು ಏರ್ಪಡಿಸಿದ್ದಲ್ಲಿ ಅಂತಹ ಎಲ್ಲಾ ಕಾರ್ಯಾಗಾರಗಳನ್ನು ಬಹಿಷ್ಕರಿಸುವುದು ಹಾಗೂ ವಿರೋಧಿಸುವ ನಿರ್ಣಯವನ್ನು ಇತ್ತಿಚೆಗೆ ನಡೆದ ರಾಜ್ಯ NPS ನೌಕರರ ಸರ್ವ ಸದಸ್ಯರ ಸಭೆಯಲ್ಲಿ ತಿರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ | ಚಿತ್ರದುರ್ಗದಲ್ಲಿ ಜಯದೇವ ಹಾಸ್ಟೆಲ್ ಪುನರಾರಂಭ 

    ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ತಾಲ್ಲೂಕು ಅಧ್ಯಕ್ಷರು, ಮತ್ತು ಜಿಲ್ಲೆಯ ಹಾಗೂ ರಾಜ್ಯದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು ಎಂದು ಪ್ರಕಟಣೆಯಲ್ಲಿ ಡಾ.ಸ.ರಾ.ಲೇಪಾಕ್ಷ ವಿವರಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top