Connect with us

    ಪ್ರೊ.ಅಂಜಿನಪ್ಪ ನುಡಿನಮನ | ದಲಿತ ನಾಯಕ ಎಂ.ಜಯಣ್ಣ, ಅಂಜಿನಪ್ಪ ಕುರಿತ ಕೃತಿಗಳು ಬರಬೇಕು

    ಪ್ರೊ.ಅಂಜಿನಪ್ಪ

    ಮುಖ್ಯ ಸುದ್ದಿ

    ಪ್ರೊ.ಅಂಜಿನಪ್ಪ ನುಡಿನಮನ | ದಲಿತ ನಾಯಕ ಎಂ.ಜಯಣ್ಣ, ಅಂಜಿನಪ್ಪ ಕುರಿತ ಕೃತಿಗಳು ಬರಬೇಕು

    CHITRADURGA NEWS | 10 MARCH 2024

    ಚಿತ್ರದುರ್ಗ: ವಚನ ಚಳುವಳಿ ಒಂದು ಅರ್ಥದಲ್ಲಿ ಮಾದಿಗರ ಚಳುವಳಿಯೇ ಆಗಿತ್ತು. ಮಾದರ ಚೆನ್ನಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗಪೆದ್ದಿ, ಮರುಳ ಸಿದ್ದರು ಮುಂತಾದ ಮಾದಿಗ ಸಮುದಾಯದ ದೊಡ್ಡ ಪರಂಪರೆ ಇರುವುದೇ ಇದಕ್ಕೆ ಸಾಕ್ಷಿ ಎಂದು ಸಾಹಿತಿ ಪ್ರೊ.ಲಿಂಗಪ್ಪ ಹೇಳಿದರು.

    ನಗರದ ಕೋಟೆ ನಾಡು ಬುದ್ದ ವಿಹಾರದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿದ್ದ ಪ್ರೊ. ಅಂಜನಪ್ಪ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಇದನ್ನೂ ಓದಿ: ಪಿ.ಆರ್.ತಿಪ್ಪೇಸ್ವಾಮಿ ಸ್ಮಾರಕ ಹಾಗೂ ಪುತ್ಥಳಿ ಅನಾವರಣ

    ಪ್ರೊ.ಅಂಜನಪ್ಪ ವಚನಗಳನ್ನು ಭಿನ್ನವಾಗಿ ವ್ಯಾಖ್ಯಾನಿಸುತ್ತಿದ್ದರು. ಆ ಮಟ್ಟದ ಬೌದ್ಧಿಕ ಶಕ್ತಿ ಅವರದಾಗಿತ್ತು. ಸಾಹಿತ್ಯ ಬಗೆಗಿನ ಅವರ ಅಧ್ಯಯನ. ಸಾಹಿತ್ಯ ಹೇಗೆ ಇರಬೇಕು? ಎಂಬುದನ್ನು ಬರೆದದ್ದು ವಿಶೇಷವಾಗಿತ್ತು. ಭಾಷೆಯ ಅತ್ಯಂತ ಪ್ರಭುತ್ವ ಸಂಪಾದಿಸಿದ ಈ ಜನಾಂಗದ ಅತ್ಯಂತ ಪ್ರಮುಖ ನಾಯಕ. ಅವರ ಸಾಹಿತ್ಯವನ್ನು ಎಲ್ಲಾರು ಅಧ್ಯಯನ ಮಾಡಬೇಕು ಎಂದರು.

    ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡಿ, ಅಂಜನಪ್ಪ ದೈತ್ಯ ಪ್ರತಿಭೆ. ನೇರ, ನಿಷ್ಟುರವಾದಿ. ಬಹಳಷ್ಟು ಸಂದರ್ಭದಲ್ಲಿ ಟೀಕೆ ಮಾಡುತ್ತಿದ್ದರು. ಬಡತನದಲ್ಲಿ ಅರಳಿದ ಪ್ರತಿಭೆ. ಈ ಪರಿಸರದಲ್ಲಿ ಇಂಥದ್ದೊಂದು ಪ್ರತಿಭೆ ಹುಟ್ಟಿದ್ದು ಮಹತ್ವದ ಸಂಗತಿ. ಒಂದು ಸಣ್ಣ ಕಾಯಿಲೆ ಅವರ ಜೀವವನ್ನೇ ಬಲಿತೆಗೆದುಕೊಂಡಿದ್ದು, ನೋವಿನ ಸಂಗತಿ ಎಂದು ಭಾವುಕರಾದರು.

    ಇದನ್ನೂ ಓದಿ: ವಾಗ್ವಾದಕ್ಕೆ ಕಾರಣವಾದ ಸಂವಾದ | ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ

    ಸಾಹಿತಿ ಪ್ರೊ.ಶಿವಲಿಂಗಪ್ಪ ಮಾತನಾಡಿ, ಕೃತಿ ವಿಮರ್ಶೆ ಮಾಡಲು ಅಗಾಧ ಪ್ರತಿಭೆ ಬೇಕು. ಅಂತಹ ದೈತ್ಯ ಪ್ರತಿಭಾ ಶಕ್ತಿ ಅಂಜಿನಪ್ಪ ಅವರಲ್ಲಿತ್ತು. ಅವರು ಸಾಕಷ್ಟು ಬೇರೆ-ಬೇರೆ ಕೃತಿಗಳು ಬರೆದಿದ್ದಾರೆ. ಆದರೆ, ಅವರಲ್ಲಿನ ಆಲೋಚನೆ, ಚಿಂತನೆ, ವಿರ್ಮಶಾತ್ಮಕ ದೃಷ್ಠಿಕೋನ, ವಿಚಾರ ಧಾರೆಗಳು, ಸಾಹಿತ್ಯಾಸಕ್ತಿ ಮುಂತಾದವುಗಳನ್ನು ಇಟ್ಟುಕೊಂಡು ಅವರ ಬಗ್ಗೆಯೇ ಒಂದು ಕೃತಿ ರಚನೆ ಆಗಬೇಕು ಎಂದರು.

    ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಇತ್ತಿಚೀನ ದಲಿತ ಯುವಪೀಳೆಗೆಯಲ್ಲಿ ಅಳವಾದ ಅಧ್ಯಯನ, ಕಟು ವಿಮರ್ಶೆ, ವಿಚಾರಗಳ ಭಿನ್ನತೆಯೊಂದಿಗೆ ರಾಜೀ ಮಾಡಿಕೊಳ್ಳದ ಮನಸ್ಥಿತಿ ಬೇಕಿದೆ ಎಂದರು.

    ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಶೀಘ್ರದಲ್ಲೇ ವೇಳಾಪಟ್ಟಿ

    ಜತೆಗಿದ್ದಾಗ ಅವರ ಸಾಮಥ್ರ್ಯವನ್ನು ಗುರುತಿಸಿ, ಸಮಾಜದ ಸಾಂಸ್ಕøತಿಕ ಅಭಿವ್ಯಕ್ತಿಗಳನ್ನು ದಾಖಲಿಸುವಲ್ಲಿ ಅವರನ್ನು ಬಳಸಿಕೊಳ್ಳದಿರುವುದು ರ್ದೌಬಾಗ್ಯವೆಂದರು. ಹಿತ್ತಲಗಿಡ ಮದ್ದಲ್ಲ ಎಂಬಂತೆ ಅವರ ನಿಷ್ಠುರ ನಡೆ ಬಹುತೇಕ ರನ್ನು ಅವರಿಂದ ದೂರ ಮಾಡಿತ್ತು. ದಲಿತ ಚಳುವಳಿಯ ಹಿರಿಯ ನಾಯಕ ಎಂ.ಜಯಣ್ಣ ಅವರ ದಾಖಲೆಗಳ ಕೃತಿ ಹೊರತರುವ ಪ್ರಯತ್ನ ಅರ್ಧಕ್ಕೆ ನಿಂತದ್ದು, ನೋವಿನ ಸಂಗತಿ. ಜಯಣ್ಣನವರ ಸಾಧನೆಯ ಕೃತಿ ಜತೆಗೆ ಡಿ.ಅಂಜನಪ್ಪನವರ ಅಪ್ರಕಟಿತ ಬರಹಗಳನ್ನು ಹೊರತರುವ ಪ್ರಯತ್ನ ಆಗಬೇಕಿದೆ ಎಂದರು.

    ಸಾಹಿತಿ ಪ್ರೊ..ಪರಮೇಶ್ವರಪ್ಪ, ಕಾರ್ಯಾಧ್ಯಕ್ಷ ಬಿ.ಪಿ.ಪ್ರೇಮನಾಥ್, ಜಿಲ್ಲಾ ಸ್ಕೌಟ್ ಆಂಡ್ ಗೈಡ್ಸ್‍ನ ಪ್ರಾಂಶುಪಾಲ ಮಂಜಪ್ಪ, ಪ್ರೊ.ಎಲ್.ನಾಗರಾಜ್, ಭೀಮನಕೆರೆ ತಿಪ್ಪೇಸ್ವಾಮಿ ಮಾತನಾಡಿದರು.
    ಉಪನ್ಯಾಸಕ ಈ.ನಾಗೇಂದ್ರಪ್ಪ ಸ್ವಾಗತಿಸಿದರು. ಬನ್ನಿಕೋಡ್ ರಮೇಶ್, ಶಿಕ್ಷಕಿ ಶಕುಂತಲಮ್ಮ, ಗಿರಿಜಾ, ಶಾಂತಮ್ಮ, ಉμÁ ನಾಗೇಂದ್ರಪ್ಪ ಇತರರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top