ಮಾರುಕಟ್ಟೆ ಧಾರಣೆ
ಲೋಕಸಭೆಗೆ ನಾನೂ ಟಿಕೇಟ್ ಆಕಾಂಕ್ಷಿ | ಬಿ.ಎನ್.ಚಂದ್ರಪ್ಪ

Published on

ಚಿತ್ರದುರ್ಗ ನ್ಯೂಸ್.ಕಾಂ: ನಾನೂ ಕೂಡಾ ಚಿತ್ರದುರ್ಗ ಲೋಕಸಭಾ ಟಿಕೇಟ್ ಆಕಾಂಕ್ಷಿ. ಆದರೆ, ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿರುವುದರಿಂದ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಹಲವು ಆಕಾಂಕ್ಷಿಗಳಿದ್ದಾರೆ. ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ನಾನು ಕಾರ್ಯಾಧ್ಯಕ್ಷನಾಗಿ ಈ ಬಗ್ಗೆ ಮಾತನಾಡುವುದಿಲ್ಲ. ನಮಗೆ ವ್ಯಕ್ತಿಗಿಂತ ಗೆಲುವು ಮುಖ್ಯ ಎಂದರು.
ನಾನು ಕೂಡಾ ಆಕಾಂಕ್ಷಿ. ಆದರೆ, ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಪುನರುಚ್ಚರಿಸಿದರು.

Continue Reading
Related Topics:B.N.chandrappa, Chitradurga Latest News, congress, lokasabhe, MP, parliment, ಕನ್ನಡ ಲೇಟೆಸ್ಟ್ ಸುದ್ದಿ, ಕಾಂಗ್ರೆಸ್, ಚಿತ್ರದುರ್ಗ, ಬಿ.ಎನ್.ಚಂದ್ರಪ್ಪ, ಲೋಕಸಭೆ

Click to comment