Connect with us

Blood: ಅಯೋಧ್ಯ ಬಲಿದಾನ ದಿವಸ್ | ಬಜರಂಗದಳದಿಂದ ರಕ್ತದಾನ ಶಿಬಿರ 

ಬಜರಂಗದಳದಿಂದ ರಕ್ತದಾನ ಶಿಬಿರ

ಮುಖ್ಯ ಸುದ್ದಿ

Blood: ಅಯೋಧ್ಯ ಬಲಿದಾನ ದಿವಸ್ | ಬಜರಂಗದಳದಿಂದ ರಕ್ತದಾನ ಶಿಬಿರ 

CHITRADURGA NEWS | 23 NOVEMBER 2024

ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಹಾಗೂ ವಿಶ್ವ ಹಿಂದೂ ಪರಿಷತ್ ವೀರ ಮದಕರಿ ಸೇವಾ ಟ್ರಸ್ಸ್ ವತಿಯಿಂದ ಅಯೋಧ್ಯ ಬಲಿದಾನ ದಿವಸ್ ಅಂಗವಾಗಿ ನಗರದ ವಿ.ಪಿ.ಬಡಾವಣೆಯಲ್ಲಿನ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಶನಿವಾರ ರಕ್ತ(Blood)ದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಕ್ಲಿಕ್ ಮಾಡಿ ಓದಿ: ವಿವಿ ಸಾಗರಕ್ಕೆ ಹೆಚ್ಚಾದ ಒಳಹರಿವು | ಕೋಡಿ ಬೀಳಲು ಇನ್ನೆಷ್ಟು ಬಾಕಿ

ಶಿಬಿರದಲ್ಲಿ ಕಬೀರನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಭಾಗವಹಿಸಿ ಮಾತನಾಡಿ,  ರಕ್ತ ಕೃತಕವಾಗಿ ತಯಾರು ಮಾಡಲು ಬರುವುದಿಲ್ಲ, ಅಲ್ಲದೆ ಯಾವ ಪ್ರಾಣಿಗಳ ರಕ್ತ ಸಹಾ ಮಾನವನಿಗೆ ಹಾಕಲು ಬರುವುದಿಲ್ಲ, ಈ ಹಿನ್ನಲೆಯಲ್ಲಿ ಮಾನವ ರಕ್ತವನ್ನು ಮಾನವನಿಗೆ ಮಾತ್ರ ಹಾಕಲು ಬರುತ್ತದೆ, ಇದರಿಂದ ರಕ್ತವನ್ನು ದಾನ ಮಾಡಲು ಮುಂದಾಗುವುಂತೆ ಶ್ರೀಗಳು ತಿಳಿಸಿದರು.

ಹೆರಿಗೆ, ಅಪಘಾತ, ಶಸ್ತ್ರಚಿಕಿತ್ಸೆ ನಡೆಸುವಾಗ ಮಾನವನಿಗೆ ರಕ್ತದ ಅವಶ್ಯಕತೆ ಬಹಳ ಇರುತ್ತದೆ, ಈ ಹಿನ್ನಲೆಯಲ್ಲಿ ಸರ್ಕಾರ ಮತ್ತು ಖಾಸಗಿಯಾಗಿ ರಕ್ತ ನಿಧಿ ಕೇಂದ್ರಗಳು ಕೆಲಸವನ್ನು ಮಾಡುತ್ತಿವೆ, ಮಾನವನಿಗೆ ಅಗತ್ಯವಾದ ರಕ್ತವನ್ನು ಸಂಗ್ರಹ ಮಾಡಿ ಅವಶ್ಯಕತೆ ಇರುವವರಿಗೆ ನೀಡುವ ಕಾರ್ಯ ಮಾಡಲಾಗುತ್ತದೆ. ಇದಕ್ಕೆ ನಾವೆಲ್ಲ ಸಹಕಾರ ನೀಡಬೇಕಿದೆ ಎಂದರು.

ತಮ್ಮ ಮನೆಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳು ಇದ್ದಾಗ ಅದರ ಅಂಗವಾಗಿ ರಕ್ತ ದಾನ ಮಾಡುವ ಸಂಪ್ರದಾಯವನ್ನು ಬೆಳಸಿಕೊಂಡರೆ ಬೇರೆಯವರಿಗೆ ಅನುಕೂಲವಾಗಲಿದೆ.

ಕ್ಲಿಕ್ ಮಾಡಿ ಓದಿ: ರಾಗಿ ಖರೀಧಿಗೆ 4290 ಬೆಲೆ ನಿಗಧಿ | ಡಿಸೆಂಬರ್ 1 ನೊಂದಣಿ ಆರಂಭ

ಈ ಸಂಸ್ಥೆಯು ಉತ್ತಮವಾದ ಜನಪಯೋಗಿ ಕಾರ್ಯ ಮಾಡುತ್ತಿದೆ, ರಕ್ತವನ್ನು ದಾನಿಗಳಿಂದ ಸಂಗ್ರಹ ಮಾಡಿ ಬೇರೆಯವರಿಗೆ ನಿಡುವ ಕಾರ್ಯ ಉತ್ತಮವಾಗಿದೆ, ಇದೆ ರೀತಿ ಬೇರೆ ಸಂಘ ಸಂಸ್ಥೆಗಳು ಸಹಾ ಮಾಡುವುದರ ಮೂಲಕ ಮಾದರಿಯಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸುಮಾರು 30 ಯೂನಿಟ್ ರಕ್ತವನ್ನು ದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪತರಿಷತ್‌ನ ಉಪಾಧ್ಯಕ್ಷ ಮಂಜುನಾಥ್, ಜಂಟಿ ಕಾರ್ಯದರ್ಶಿಗಳಾದ ವಿಠಲ್, ಚನ್ನಕೇಶವ, ನಗರ ಕಾರ್ಯದರ್ಶಿ ಆಶೋಕ್, ನಗರ ಸಹ ಕಾರ್ಯದರ್ಶಿ ರಂಗನಾಥ್, ಜಿಲ್ಲಾ ಸೇವಾ ಪ್ರಮುಖ್ ರಘುನಾಥ್, ನಗರ ಸಂಯೋಜಕರಾದ ಕೇಶವ, ರಾಜು, ವಿನಯಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version