Connect with us

    ದೆಹಲಿಯಲ್ಲಿ ಭರ್ಜರಿ ಗೆಲುವು | ಚಿತ್ರದುರ್ಗದಲ್ಲಿ ಪಟಾಕಿ ಸಿಡಿಸಿದ ಬಿಜೆಪಿ ಕಾರ್ಯಕರ್ತರು

    ಮುಖ್ಯ ಸುದ್ದಿ

    ದೆಹಲಿಯಲ್ಲಿ ಭರ್ಜರಿ ಗೆಲುವು | ಚಿತ್ರದುರ್ಗದಲ್ಲಿ ಪಟಾಕಿ ಸಿಡಿಸಿದ ಬಿಜೆಪಿ ಕಾರ್ಯಕರ್ತರು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 08 FEBRUARY 2025

    ಚಿತ್ರದುರ್ಗ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಗೆಲುವು ಪಡೆದ ಹಿನ್ನಲೆಯಲ್ಲಿ ಚಿತ್ರದುರ್ಗದ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಒನಕೆ ಓಬವ್ವ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ವಿಜಯೋತ್ಸವವನ್ನು ಸಂಭ್ರಮಿಸಿದರು.

    Also Read: ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಚುನಾವಣೆ | ಕಾರೇಹಳ್ಳಿ ಉಲ್ಲಾಸ್ ಪುನರಾಯ್ಕೆ

    ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಕಳೆದ 10 ವರ್ಷಗಳಿಂದ ದೇಶದಲ್ಲಿ ಭ್ರಷ್ಠಾಚಾರವನ್ನು ಕಿತ್ತು ಹಾಕುತ್ತೇವೆಂದು ಪೂರಕೆ ಚಿಹ್ನೆ ಹಿಡಿದು ಅಧಿಕಾರಕ್ಕೆ ಬಂದ ಎಎಪಿ ಪಕ್ಷದ ಸಚಿವರೇ ಭ್ರಷ್ಠಾಚಾರದಲ್ಲಿ ಮುಳುಗಿದ ಹಿನ್ನಲೆಯಲ್ಲಿ ಅಲ್ಲಿನ ಮತದಾರರು ಎಎಪಿಯ ಆಡಳಿತವನ್ನು ಕಿತ್ತು ಹಾಕಿ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ 27 ವರ್ಷಗಳ ಬಳಿಕ ಬಜೆಪಿಗೆ ಅಧಿಕಾರವನ್ನು ನೀಡಿದ್ದಾರೆ.

    ಎಎಪಿ ಪಾರ್ಟಿಯಲ್ಲಿನ 8 ರಿಂದ 10 ಜನ ಸಚಿವರು ಸಿಎಂ, ಡಿಸಿಎಂರವರು ಸೇರಿ ಭ್ರಷ್ಠಾಚಾರದಲ್ಲಿ ಮುಳುಗಿದ್ದಿರು, ಜೈಲು ವಾಸವನ್ನು ಅನುಭವಿಸಿದವರಿಗೆ ಅಲ್ಲಿನ ಮತದಾರರು ಅವರಿಗೆ ತಕ್ಕ ಪಾಠವನ್ನು ಚುನಾವಣೆಯ ಮೂಲಕ ಕಲಿಸಿದ್ದಾರೆ ಎಂದರು.

    ನರೇಂದ್ರ ಮೋದಿಯವರು ಅಡಳಿತದ ಮೂಲಕ ಜನರ ವಿಶ್ವಾಸವನ್ನು ಗಳಿಸಿದ್ದಾರೆ, ಇದನ್ನು ಅಲ್ಲಿನ ಮತದಾರರು ಮೆಚ್ಚಿದ್ದಾರೆ. ಇದಕ್ಕೆ ಅಲ್ಲಿ ಬಿಜೆಪಿಯನ್ನು ಬಹುಮತಗಳಿಂದ ಗೆಲ್ಲಿಸಿದ್ದಾರೆ.

    Also Read: APMC: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಶನಿವಾರದ ಹತ್ತಿ ರೇಟ್ ಎಷ್ಟಿದೆ? 

    ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಮಾಡಿದ ಪಕ್ಷಕ್ಕೆ ಅಲ್ಲಿನ ಮತದಾರರು ಸೊನ್ನೆಯನ್ನು ನೀಡಿದ್ದಾರೆ. ದೇಶದ ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರವನ್ನು ಹಿಡಿಯುವಲ್ಲಿ ಹಿನ್ನಡೆಯಾಗಿದೆ. ಇದರಿಂದ ಕಾಂಗ್ರೆಸ್ ದೇಶದಿಂದ ನಿರ್ಮೂಲನೆಯಾಗುವ ಸಮಯ ದೂರ ಇಲ್ಲ, ದೇಶ ಅಭಿವೃದ್ದಿಯಾಗಬೇಕಾದರೆ ಮೋದಿಯವರ ನೇತೃತ್ವದ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಜನತೆ ತೀರ್ಮಾನ ಮಾಡಿದ್ದಾರೆ.

    ಈ ಹಿನ್ನಲೆಯಲ್ಲಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ಸಹಾ ಬಿಜೆಪಿ ಗೆಲುವನ್ನು ಸಾಧಿಸಲಿದೆ ಎಂದು ಭವಿಷ್ಯ ನುಡಿದರು.

    Also Read: ಪತ್ನಿಯನ್ನೇ ಹತ್ಯೆ ಮಾಡಿದ ಪತಿ | ಮೆದೇಹಳ್ಳಿಯಲ್ಲಿ ಘಟನೆ

    ಈ ವೇಳೆ ನಗರ ಘಟಕದ ಅಧ್ಯಕ್ಷ ಲೋಕೇಶ್, ಗ್ರಾಮಾಂತರ ಘಟಕದ ಅಧ್ಯಕ್ಷ ನಾಗರಾಜ್ ಉಪ್ಪನಾಯಕನಹಳ್ಳಿ, ಮಾಧುರಿ ಗೀರೀಶ್, ರೈತ ಮೂರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಶಂಭು, ಮಾಜಿ ಆಧ್ಯಕ್ಷ ನವೀನ್ ಚಾಲುಕ್ಯ, ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಬಸಮ್ಮ, ಛಲವಾದಿ ತಿಪ್ಪೇಸ್ವಾಮಿ, ಕಿರಣ, ಶಾಂತಮ್ಮ, ರೇಣುಕಾ, ಮಹಾಂತೇಶ್, ರಘು ಮುಂತಾದವರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top