Connect with us

    BJP; ಮೊಳಕಾಲ್ಮೂರು | ಪಟ್ಟಣ ಪಂಚಾಯಿತಿ ಗದ್ದುಗೆ ಏರಿದ ಬಿಜೆಪಿ 

    ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಲೀಲಾವತಿ ಸಿದ್ದಣ್ಣ, ಉಪಾಧ್ಯಕ್ಷರಾಗಿ ತಿಪ್ಪೇಸ್ವಾಮಿ ಆಯ್ಕೆಯಾಗಿದ್ದಾರೆ

    ಮೊಳಕಾಳ್ಮೂರು

    BJP; ಮೊಳಕಾಲ್ಮೂರು | ಪಟ್ಟಣ ಪಂಚಾಯಿತಿ ಗದ್ದುಗೆ ಏರಿದ ಬಿಜೆಪಿ 

    CHITRADURGA NEWS | 23 AUGUST 2024

    ಮೊಳಕಾಲ್ಮುರು: ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ(BJP) ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

    ಕ್ಲಿಕ್ ಮಾಡಿ ಓದಿ: Prison Authorities: ಕೋರ್ಟ್ ಆವರಣದಲ್ಲಿ ಆರೋಪಿ ಹೈಡ್ರಾಮ | ಕಿಟಕಿ ಗುದ್ದಿದ ಸಮ್ಮು | ಜೈಲು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ

    ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಲೀಲಾವತಿ ಸಿದ್ದಣ್ಣ, ಉಪಾಧ್ಯಕ್ಷರಾಗಿ ತಿಪ್ಪೇಸ್ವಾಮಿ ಆಯ್ಕೆಯಾಗಿದ್ದಾರೆ.

    ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾಗಿತ್ತು. ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ 2 ನೇ ವಾರ್ಡಿನ ಬಿಜೆಪಿ ಸದಸ್ಯ ಲೀಲಾವತಿ ಸಿದ್ದಣ್ಣ, ಕಾಂಗ್ರೆಸ್ಸಿನ 5ನೇ ವಾರ್ಡಿನ ಸದಸ್ಯೆ ವಿಜಯಮ್ಮ. ಉಪಾಧ್ಯಕ್ಷ ಸ್ಥಾನಕ್ಕೆ ಓಬಣ್ಣ ಮತ್ತು 10ನೇ ವಾರ್ಡಿನ ಬಿಜೆಪಿ ಸದಸ್ಯ ತಿಪ್ಪೇಸ್ವಾಮಿ. ಕಾಂಗ್ರೆಸಿನ 14ನೇ ವಾರ್ಡಿನ ಸದಸ್ಯ ಅಬ್ದುಲ್ ನಾಮಪತ್ರ ಸಲ್ಲಿಸಿದ್ದರು.

    ಬಿಜೆಪಿಯ ಲೀಲಾವತಿ ಸಿದ್ದಣ್ 11 ಮತ, ತಿಪ್ಪೇಸ್ವಾಮಿ 11 ಮತ, ಕಾಂಗ್ರೆಸ್ಸಿನ ವಿಜಿಯಮ್ಮ 6 ಮತ, ಅಬ್ದುಲ್ 6 ಮತ ಪಡೆದಿದ್ದರು.

    ಕ್ಲಿಕ್ ಮಾಡಿ ಓದಿ: taluk committee; ರೈತ ಸಂಘದ ನೂತನ ತಾಲ್ಲೂಕು ಸಮಿತಿ ರಚನೆ

    ಅಂತಿಮವಾಗಿ ಬಿಜೆಪಿಯ ಲೀಲಾವತಿ ಸಿದ್ದಣ್ಣ, ತಿಪ್ಪೇಸ್ವಾಮಿ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಜಗದೀಶ್ ಅಧಿಕೃತವಾಗಿ ಘೋಷಿಸಿದರು.

    ಇದೇ ಸಂದರ್ಭದಲ್ಲಿ ಸಂಸದರಾದ ಗೋವಿಂದ ಕಾರಜೋಳ ಮಾತನಾಡಿ, 16 ವಾರ್ಡುಗಳು ನಿಮ್ಮವೆ ಭೇದಭಾವ ಮಾಡದೆ 16 ವಾರ್ಡುಗಳು ಹಾಗೂ ಮೊಳಕಾಲ್ಮೂರು ಅಭಿವೃದ್ಧಿಪಡಿಸಿ ಎಂದು ಹೇಳಿದರು.

    ತುಂಗಭದ್ರ ಕುಡಿಯುವ ನೀರಿನ ಯೋಜನೆಗೆ ನಮ್ಮ ಸರ್ಕಾರವಿದ್ದಾಗ ಹಣವನ್ನು ನೀಡಿದ್ದೇವೆ ಕೆಲವು ಕಾರಣದಿಂದ ಕಾಮಗಾರಿ ವಿಳಂಬವಾಗಿದೆ, ಕೆಲವು ಕೆಲಸಗಳು ಬಾಕಿ ಇದೆ, ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಗ ಪೂರ್ಣಗೊಳಿಸಲು ತಿಳಿಸಿದ್ದೇನೆ. ಶಾಶ್ವತವಾದ, ಸುರಕ್ಷತವಾದ ಶುದ್ಧ ಕುಡಿಯುವ ನೀರು ತಾಲೂಕಿಗೆ ಒದಗಿಸಲು ಕ್ರಮ ವಹಿಸುತ್ತೇನೆ ಎಂದರು.

    ಭಾರತೀಯ ಜನತಾ ಪಕ್ಷ 2ನೇ ಅವಧಿಗೂ ಅಧಿಕಾರದ ಗದ್ದುಗೆ ಏರುವ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

    ಕ್ಲಿಕ್ ಮಾಡಿ ಓದಿ: Rain Damage; ಜಿಲ್ಲೆಯಲ್ಲಿ ಹೆಚ್ಚಿನ ಮಳೆ | ಈರುಳ್ಳಿ, ತೋಟಗಾರಿಕೆ ಬೆಳೆ ನಾಶ | ಪರಿಹಾರಕ್ಕೆ ರೈತರ ಆಗ್ರಹ

    ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಸಂಸದ ಗೋವಿಂದ ಕಾರಜೋಳ ಭಾಗೀ:

    ಸಂಸದರು ಗೋವಿಂದ ಕಾರಜೋಳ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗಿ, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

    ಈ ಸಂದರ್ಭದಲ್ಲಿ ಮಾಜಿ ಶಾಸಕರು ಎಸ್. ತಿಪ್ಪೇಸ್ವಾಮಿ, ಜಿಲ್ಲೆ ಮಂಡಲ ಅಧ್ಯಕ್ಷ ಮುರಳಿ, ತಾಲೂಕು ಮಂಡಲ ಅಧ್ಯಕ್ಷ ಮಂಜುನಾಥ್, ಕಿರಣ್ ಗಾಯಕ್ವಾಡ್, ಸಿದ್ದಣ್ಣ, ರಾಜು, ರಘು ಹಲವು ಮುಖಂಡರು, ಕಾರ್ಯಕರ್ತರು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮೊಳಕಾಳ್ಮೂರು

    To Top