ಕ್ರೈಂ ಸುದ್ದಿ
ಬೈಕಿಗೆ ಬಸ್ ಡಿಕ್ಕಿ | ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ | ಜೆಸಿಆರ್ ಬಳಿ ಘಟನೆ
CHITRADURGA NEWS 23 MARCH 2025
ಚಿತ್ರದುರ್ಗ: ನಗರದ ಜೆಸಿಆರ್ ಬಡಾವಣೆಯಿಂದ ಹೊಸಪೇಟೆ ರಸ್ತೆ ಸಂಪರ್ಕಿಸುವ NH4 ಅಂಡರ್ ಪಾಸ್ ಬಳಿ ನಸುಕಿನಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದು, ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೃತರನ್ನು ಯಾಸೀನ್ (21 ), ಅಲ್ತಾಫ್ ಎಂ(21) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗದ ಹುಂಡೈ ಕಾರ್ ಶೋ ರೂಂನಲ್ಲಿ ಉದ್ಯೋಗಾವಕಾಶ
ಗಾಯಗೊಂಡ ವಿದ್ಯಾರ್ಥಿ ನಬೀಲ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಂಗಳೂರು ಕಡೆಯಿಂದ ಚಿತ್ರದುರ್ಗ ಮಾರ್ಗವಾಗಿ ಮುಂಡರಗಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಹೊಸಪೇಟೆ ರಸ್ತೆಗೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಕೆಳಗಿನ ಸರ್ವೀಸ್ ರಸ್ತೆಯಲ್ಲಿ ಬೈಕ್ ಗೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಯಾಸೀನ್ ಎಂಬ ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅಲ್ತಾಫ್ ಮೃತಪಟ್ಟಿರುತ್ತಾನೆ.
ಇದನ್ನೂ ಓದಿ: ನೀರು ಹಾಯಿಸಲು ಹೋಗಿದ್ದ ರೈತರ ಮೇಲೆ ಕರಡಿ ದಾಳಿ | ಗಂಭೀರ ಗಾಯ
ಚಿತ್ರದುರ್ಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.