Connect with us

    Kannada Rajyothsava: ಕೋಟೆ ನಾಡಿನಲ್ಲಿ ಕನ್ನಡದ ಕಂಪು | ಭುವನೇಶ್ವರಿ ತಾಯಿ ಭಾವಚಿತ್ರದ ಮೆರವಣಿಗೆ

    kannada rajyothsava chitradurga

    ಮುಖ್ಯ ಸುದ್ದಿ

    Kannada Rajyothsava: ಕೋಟೆ ನಾಡಿನಲ್ಲಿ ಕನ್ನಡದ ಕಂಪು | ಭುವನೇಶ್ವರಿ ತಾಯಿ ಭಾವಚಿತ್ರದ ಮೆರವಣಿಗೆ

    CHITRADURGA NEWS | 01 NOVEMBER 2024

    ಚಿತ್ರದುರ್ಗ: ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ (Kannada Rajyothsava) ಹಿನ್ನೆಲೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲೂ ಕನ್ನಡದ ಕಂಪು ಎಲ್ಲೆಲ್ಲೂ ಪಸರಿಸಿತ್ತು.

    ಚಿತ್ರದುರ್ಗ ಜಿಲ್ಲಾ ಆಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ತಾಯಿ ಭವನೇಶ್ವರಿಯ ವಿಜೃಂಭಣೆಯ ಮೆರವಣಿಗೆ ನಡೆಯಿತು.

    ಇದನ್ನೂ ಓದಿ: ನಾಲ್ವರು ಪತ್ರಕರ್ತರಿಗೆ ರಾಜ್ಯೋತ್ಸವ ಪ್ರಶಸ್ತಿ

    ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳಿಂದ ಕನ್ನಡ ನಾಡು, ನುಡಿಗೆ ಸಂಬಂಧಿಸಿದ ಸ್ಥಬ್ದಚಿತ್ರಗಳನ್ನು ತಯಾರಿಸಿ ತರಲಾಗಿತ್ತು. ‘ಹೊನ್ನ ಬಿತ್ತೇವು ಹೊಲಕೆಲ್ಲಾ’ ಎಂಬ ನಾಣ್ನುಡಿಯಂತೆ ಜೋಡೆತ್ತುಗಳೊಂದಿಗೆ ಹೊಲದಲ್ಲಿ ಬಿತ್ತನೆ ಮಾಡುತ್ತಿರುವ ರೈತನ ಪ್ರತಿಮೆ ಇರುವ ಕೃಷಿ ಇಲಾಖೆಯ ಸ್ತಬ್ದಚಿತ್ರ ಮೆರವಣಿಗೆಯಲ್ಲಿ ಜನರ ಗಮನ ಸೆಳೆಯುತು.

    ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ | 28 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

    ಕನ್ನಡಗರ ಅಸ್ಮಿತೆ ಹಣತೆ ಹಚ್ಚಿ ವಿಶಾಲ ಕನ್ನಡ ಸಾಮ್ರಾಜ್ಯ ಸ್ಥಾಪನೆಗೆ ನಾಂದಿ ಹಾಡಿದ ಕದಂಬ ರಾಜ ಮಯೂರ ವರ್ಮನ ಪುತ್ಥಳಿ ಜೊತೆಗೆ, ಜಿಲ್ಲೆಯ ತೋಟಗಾರಿಕೆ ಬೆಳೆಗಳ ಮಾಹಿತಿ ನೀಡುವ ತೋಟಗಾರಿಕೆ ಇಲಾಖೆ ಸ್ತಬ್ದಚಿತ್ರ ನೋಡುಗರಲ್ಲಿ ಕನ್ನಡ ಅಭಿಮಾನವನ್ನು ಮೂಡಿಸಿತು.

    ಮಹಿಳೆಯರ ಸಬಲೀಕರಣಕ್ಕೆ ಇಂಬಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗೃಹಲಕ್ಷ್ಮೀ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಪುμÁ್ಪಲಂಕೃತಗೊಂಡ ಕೆ.ಎಸ್.ಆರ್.ಟಿ.ಸಿ ಶಕ್ತಿ ಸ್ತಬ್ದಚಿತ್ರಗಳು ಯೋಜನೆಗಳ ಮಹತ್ವ ಸಾರಿದವು.

    kannada rajyothsava

    ಕನ್ನಡ ರಾಜ್ಯೋತ್ಸವ

    ಸಾರಿಗೆ ಇಲಾಖೆ ಸ್ಥಬ್ದಚಿತ್ರಕ್ಕೆ ಪ್ರಥಮ ಬಹುಮಾನ:

    ಸಾರಿಗೆ ಇಲಾಖೆಯ ಪ್ರಾದೇಶಿಕ ಕಚೇರಿಯಿಂದ ರಸ್ತೆ ಸುರಕ್ಷತೆ ಹಾಗೂ ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳ ಬಳಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸ್ತಬ್ದಚಿತ್ರ ಎಲ್ಲರ ಮೆಚ್ಚುಗೆ ಗಳಿಸುವುದರೊಂದಿಗೆ ಪ್ರಥಮ ಬಹುಮಾನಕ್ಕೆ ಭಾಜವಾಯಿತು.

    ಇದನ್ನೂ ಓದಿ: ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣಕ್ಕೆ ಮೂಲಭೂತ ಸೌಕರ್ಯ ಒದಗಿಸಿ, ಶುಲ್ಕ ನಿಗದಿಪಡಿಸಿ | ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೂಚನೆ 

    ತೋಟಗಾರಿಕೆ ಹಾಗೂ ksrtc ಸ್ಥಬ್ದ ಚಿತ್ರಗಳು ಅನುಕ್ರಮವಾಗಿ ದ್ವೀತಿಯ ಹಾಗೂ ತೃತೀಯ ಬಹುಮಾನ ಗಳಿಸಿದವು. ಶಿಕ್ಷಣ ಹಾಗೂ ಕೃಷಿ ಇಲಾಖೆ ಸ್ತಬ್ದಚಿತ್ರಗಳು ಸಮಾದಾನಕರ ಬಹುಮಾನ ಪಡೆದವು. ಜಿಲ್ಲಾ ಕೈಗಾರಿಕೆ ತರಬೇತಿ ಕೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅರಣ್ಯ, ಪ್ರವಾಸೋದ್ಯಮ ಇಲಾಖೆಗಳ ಸ್ತಬ್ದಚಿತ್ರಗಳು ಸರ್ಕಾರದ ಯೋಜನೆಗಳನ್ನು ಪ್ರಚುರ ಪಡಿಸಿದವು.

    ಮೆರವಣಿಗೆಯಲ್ಲಿ ಸೇವಾದಳ, ಶಾಲಾ ಮಕ್ಕಳ ವಾದ್ಯ ತಂಡ, ಗೊಂಬೆ ಹಾಗೂ ಪಟ ಕುಣಿತ, ಡೊಳ್ಳು, ವೇಷಗಾರ, ಬ್ಯಾಂಡ್ ಸೇರಿದಂತೆ ಇತರೆ ಸಾಂಸ್ಕøತಿಕ ಕಲಾ ತಂಡಗಳು ಪಾಲ್ಗೊಂಡಿದ್ದವು. ಮೆರವಣಿಗೆಯು ನಗರದ ಮಹಾತ್ಮ ಗಾಂಧಿ, ಎಸ್.ಬಿ.ಎಂ, ಅಂಬೇಡ್ಕರ್ ಹಾಗೂ ಓಬವ್ವ ವೃತ್ತದ ಮೂಲಕ ಪೆÇಲೀಸ್ ಕವಾಯತು ಮೈದಾನ ತಲುಪಿದವು.

    ಇದನ್ನೂ ಓದಿ: ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ | ವಿದೇಶಿ ಕರೆನ್ಸಿ ಪತ್ತೆ | 45 ಲಕ್ಷ ಸಂಗ್ರಹ 

    Halmidi shasana

    ಹಲ್ಮಿಡಿ ಶಾಸನದ ಪ್ರತಿಕೃತಿ

    ಹಲ್ಮಿಡಿ ಶಾಸನದ ಪ್ರತಿಕೃತಿಯ ಅನಾವರಣ

    ಕರ್ನಾಟಕ ಸಂಭ್ರಮ-50, ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ ಅಭಿಯಾನದಡಿ, ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅನಾವರಣಗೊಳಿಸಿದರು.

    ಇದನ್ನೂ ಓದಿ:  ಅತ್ತೆ ಮಾವನ ಕೊಲೆ ಮಾಡಿದ್ದ ಅಳಿಯನ ಬಂಧನ | ತೆಲಂಗಾಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ತಲಾಶ್..!

    ಕನ್ನಡದ ಮೊದಲ ಶಿಲಾ ಶಾಸನ ಬೇಲೂರು ತಾಲೂಕಿನ ಹಲ್ಮಿಡಿಯಲ್ಲಿ 1936ರಲ್ಲಿ ಪತ್ತೆಯಾದ ಶಾಸನವನ್ನು ಕನ್ನಡ ಲಿಪಿಯಲ್ಲಿ ಲಭ್ಯವಾದ ಮೊಟ್ಟ ಮೊದಲ ಶಾಸನವೆಂದು ಪರಿಗಣಿಸಲಾಗಿದೆ. 16 ಸಾಲುಗಳ ಬರಹ ಇದರಲ್ಲಿತ್ತು.

    ಇದು ಕ್ರಿ.ಶಕ 450ರ ಸುಮಾರಿನದ್ದು ಎಂದು ಅಂದಾಜಿಸಲಾಗಿದೆ. ಇದರ ಬಗ್ಗೆ ಸಾಕಷ್ಟು ಅಧ್ಯಯನ-ಅವಲೋಕನಗಳು ನಡೆದಿದೆ. ಹೀಗಾಗಿ ಈ ಶಿಲಾ ಶಾಸನದ ಮಹತ್ವವನ್ನು ಶಾಶ್ವತವಾಗಿ ಜನರ ನೆನಪಿನಲ್ಲಿ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಪ್ರತಿಕೃತಿ ಸ್ವರೂಪದಲ್ಲಿ ಇದನ್ನು ಕನ್ನಡ ಸಂಸ್ಕøತಿ ಇಲಾಖೆಯಿಂದ ಸ್ಥಾಪಿಸಲಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top