ಮುಖ್ಯ ಸುದ್ದಿ
FARMERS; ಸಾಸಿವೆಹಳ್ಳಿ ಏತ ನೀರಾವರಿ ಕಾಮಗಾರಿ ವೀಕ್ಷಿಸಿದ ಭೀಮಸಮುದ್ರ ರೈತರು
CHITRADURGA NEWS | 15 JULY 2024
ಚಿತ್ರದುರ್ಗ: ಭೀಮಸಮುದ್ರ ಹಾಗೂ ಸುತ್ತಮುತ್ತ ಹಳ್ಳಿಯ ರೈತ ಸಂಘದವರು ಸಾಸಿವೆಹಳ್ಳಿ ಏತ ನೀರಾವರಿ ಜಂಕ್ಷನ್ ವಿದ್ಯುತ್ 48 ಟವರ್ ನಿರ್ಮಾಣ ಕಾಮಗಾರಿ ವೀಕ್ಷಿಸಿದರು.
ಇದನ್ನೂ ಓದಿ: Murugh matha; ಕಳ್ಳತನವಾಗಿದ್ದ ಮುರುಘಾ ಶರಣರ ಬೆಳ್ಳಿ ವಿಗ್ರಹ ದಿಢೀರ್ ಪ್ರತ್ಯಕ್ಷ | ಮುರುಘಾ ಮಠಕ್ಕೆ ಶ್ವಾನ ದಳ ದೌಡು
ಈ ವೇಳೆ ರೈತ ಮುಖಂಡ ಜೆ. ಮೇಘರಾಜ್ ಹಳಿಯೂರು ಮಾತನಾಡಿ, ಸಾಸಿವೆಹಳ್ಳಿ ಸರ್ಕಾರಿ ಶಾಲೆಯವರು ಟವರ್ ನಿರ್ಮಾಣಕ್ಕೆ ತಡೆಯಾಗ್ನೇ ತಂದಿದ್ದರು, ಹೈಕೋರ್ಟ್ ವಜಾ ಗೊಳಿಸಿ 48ನೇ ಟವರ್ ನಿರ್ಮಾಣಕ್ಕೆ ಚಾಲನೆ ನೀಡಿದೆ ಎಂದು ತಿಳಿಸಿದರು.
ಟಿ.ಎಸ್.ಮಹೇಶ್ವರಪ್ಪ ಮಾತನಾಡಿ, 12 ವರ್ಷಗಳಿಂದ ಸಾಸವೆಹಳ್ಳಿ ಇಂದ ಭೀಮಸಮುದ್ರದ ಕೆರೆಯವರಿಗೆ ಕಾಮಗಾರಿ ಪ್ರಗತಿಯಲ್ಲಿ ಸಾಗಿದೆ, ಎರೆಡು, ಮೂರು ತಿಂಗಳಲ್ಲಿ ಸಾಸಿವೆಹಳ್ಳಿಯಿಂದ ಬರುವ ಎಲ್ಲಾ ಕೆರೆಗಳಲ್ಲಿ ನೀರು ತುಂಬಿಸುವ ಯೋಜನೆ ಇದಾಗಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ ಎಂದರು.
ಇದನ್ನೂ ಓದಿ: AGNIVEER; ಅಗ್ನಿವೀರ ವಾಯು ಸೇವೆಗೆ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ಎಸ್.ಎಂ.ಶಿವಕುಮಾರ್, ಎಂ.ಸಿದ್ದಪ್ಪ, ಪಿ.ಗಾದ್ರಪ್ಪ, ವಿ.ಪ್ರಕಾಶ್, ಬಿ. ಶ್ರೀಕಂಠಪ್ಪ, ಕೆ.ಆರ್, ಮಂಜು, ಆರ್, ಈಶ್ವರ್ ಸೇರಿದಂತೆ ರೈತರು ಇದ್ದರು.