ಸಂಡೆ ಸ್ಪಷಲ್
ಬಾಲ ರಾಮನಿಗೆ ಭಾವ ತುಂಬಿದ ಭಾವನಾ | ಚಿತ್ರದುರ್ಗದ ಯುವತಿಯ ಕುಂಚದಲ್ಲಿ ಅರಳಿದ ಸುಂದರ ಕಲಾಕೃತಿ
CHITRADURGA NEWS | 11 FEBRUARY 2024
ಚಿತ್ರದುರ್ಗ: ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಕೈಯಲ್ಲಿ ಅರಳಿದ ಬಾಲರಾಮ ಅಯೋಧ್ಯೆಯ ಭವ್ಯ ಮಂದಿರದಲ್ಲಿ ವಿರಾಜಮಾನರಾಗಿದ್ದಾರೆ. ಕನ್ನಡಿಗ ಅರುಣ್ ಯೋಗಿರಾಜ್ ಕೈಚಳಕಕ್ಕೆ ಇಡೀ ದೇಶ ತಬ್ಬಿಬ್ಬಾಗಿದೆ.
ಬಾಲ ರಾಮನನ್ನು ಅಷ್ಟು ಸುಂದರವಾಗಿ ಕಲ್ಲಿನಲ್ಲಿ ಹಿಡಿದಿಡುವ ಕೆಲಸವನ್ನು ಮೈಸೂರಿನ ಅರುಣ್ ಯೋಗಿರಾಜ್ ಮಾಡಿದ್ದಾರೆ.
ಇದನ್ನೂ ಓದಿ: ತರಳಬಾಳು ಹುಣ್ಣಿಮೆ ಸರಳ ಆಚರಣೆ | ಅಡ್ಡ ಪಲ್ಲಕ್ಕಿ ಉತ್ಸವ ಬೇಡವೆಂದ ಸಿರಿಗೆರೆ ಶ್ರೀ
ಇನ್ನೂ ಅದೇ ಬಾಲ ರಾಮನನ್ನು ಕುಂಚದಲ್ಲಿ ಸೆರೆ ಹಿಡಿಯುವ ಕೆಲಸವನ್ನು ಚಿತ್ರದುರ್ಗದ ಯುವತಿ ಮಾಡಿದ್ದಾರೆ.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿ ಬಯೋ ಕೆಮಿಸ್ಟ್ರಿ ಅಧ್ಯಯನ ಮಾಡುತ್ತಿರುವ ಚಿತ್ರದುರ್ಗದ ಪ್ರತಿಭೆ ಭಾವನಾ ಪೆನ್ಸಿಲ್ ಸ್ಕೆಚ್ ಆರ್ಟ್ ಮೂಲಕ ಧನುರ್ಧಾರಿಯಾಗಿರುವ ಬಾಲರಾಮನನ್ನು ಚಿತ್ರಿಸಿದ್ದಾರೆ.
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿರುವ ಬಾಲರಾಮನನ್ನೇ ಹೋಲುವ ಕೈಯಲ್ಲಿ ಬಿಲ್ಲು ಬಿಲ್ಲು ಹಿಡಿದು, ಭುಜದಲ್ಲಿ ಭಾಣಗಳನ್ನು ಧರಿಸಿರುವ ಕಲಾಕೃತಿ ಇದಾಗಿದೆ.
ಇಲ್ಲಿ ಕ್ಲಿಕ್ ಮಾಡಿ ರಾಮನನ್ನು ಚಿತ್ರಿಸಿದ ವೀಡಿಯೋ ನೋಡಿ:
ತಲೆಯಲ್ಲಿ ತುರುಬು, ಅರಳಿದ ಕಣ್ಣುಗಳನ್ನು ಹೊಂದಿರುವ, ಹಣೆಯಲ್ಲಿ ನಾಮ, ಮುದ್ದಾದ ಮೂಗು, ತುಟಿಗಳು, ಗಲ್ಲ, ಕೆನ್ನೆಗಳು, ತಲೆ ಎತ್ತಿ ಧಿಟ್ಟಿಸುತ್ತಿರುವಂತೆ ಕಾಣುವ ಬಾಲರಾಮನ ಈ ಚಿತ್ರ ಮನಮೋಹಕವಾಗಿದೆ.
ವಾಟ್ಸಪ್, ಸ್ಟೇಟಸ್, ಫೇಸ್ಬುಕ್, ಇನ್‍ಸ್ಟಾಗ್ರಾಂ ಸೇರಿದಂತೆ ಈ ಭಾವಚಿತ್ರ ವೈರಲ್ ಆಗುತ್ತಿದೆ.
ಭಾವನಾ ಕುಂಚದಲ್ಲಿ ಅರಳಿವೆ ಮತ್ತಷ್ಟು ಕಲಾಕೃತಿಗಳು:
ಭಾವನಾ ಕೈಯಲ್ಲಿ ಈ ಹಿಂದೆಯೂ ಸಾಕಷ್ಟು ಅತ್ಯುತ್ತಮ ಕಲಾಕೃತಿಗಳು ಅರಳಿವೆ. ಡಾ.ರಾಜ್‍ಕುಮಾರ್ ಹೆಗಲ ಮೇಲೆ ಪಾರಿವಾಳ ಕುಳಿತಿರುವಂತೆ ಬರೆದಿರುವ ಚಿತ್ರವೊಂದು ಆಕರ್ಷಕವಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ಬಿಜೆಪಿಗೆ ಬಂಡಾಯದ ಬಿಸಿ
ಇನ್ನೂ ನಟ ಕಿಚ್ಚ ಸುದೀಪ್, ನಟ ಸೃಜನ್ ಲೋಕೇಶ್, ರಾಧಾ ಕೃಷ್ಣರ ಧಾರವಾಹಿಯಲ್ಲಿ ಮನೆ ಮಾತಾಗಿದ್ದ ರಾಧಾ ಕೃಷ್ಣರ ಚಿತ್ರ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು, ಬೆಣ್ಣೆ ಕದಿಯುತ್ತಿರುವ ಬಾಲಕೃಷ್ಣ, ಚಿತ್ರದುರ್ಗದ ಕೋಟೆ, ಕುದುರೆ ಸೇರಿದಂತೆ ಹಲವು ಕಲಾಕೃತಿಗಳು ಭಾವನಾ ಅವರ ಕುಂಚದಲ್ಲಿ ಅರಳಿವೆ.
ರಾಮನಿಗೆ ಭಾವ ತುಂಬಿದ ಭಾವನಾ ಯಾರು ಗೊತ್ತಾ:
ಭಾವನಾ ಚಿತ್ರದುರ್ಗದಲ್ಲಿ ಚಿರಪರಿಚಿತರಾಗಿದ್ದ ಚಂದ್ರವಳ್ಳಿ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿದ್ದ ಎಚ್.ಎನ್.ತಿಪ್ಪೇರುದ್ರಪ್ಪ ಅವರ ಮೊಮ್ಮಗಳು.
ಇದನ್ನೂ ಓದಿ: ತೀವ್ರ ಸ್ವರೂಪಕ್ಕೆ ಬಯಲು ಸೀಮೆ ಭದ್ರಾ ಹೋರಾಟ
ಪತ್ರಕರ್ತರು, ಎಬಿವಿಪಿ, ಬಿಜೆಪಿಯಲ್ಲಿ ಸಕ್ರೀಯರಾಗಿದ್ದ ಸಿ.ಟಿ.ಪ್ರತಾಪ್‍ರುದ್ರದೇವ ಅವರ ಮಗಳು ಭಾವನಾ.
ಸದ್ಯ ದಾವಣಗೆರೆಯಲ್ಲಿ ಎಂಎಸ್ಸಿಯಲ್ಲಿ ಬಯೋ ಕೆಮಿಸ್ಟ್ರಿ ಅಧ್ಯಯನ ಮಾಡುತ್ತಿದ್ದಾರೆ.
ಕೋವಿಡ್‍ನಲ್ಲಿ ಶುರುವಾದ ಚಿತ್ರಕಲೆ:
ಭಾವನಾ ಮೂಲಕತಃ ಕಲಾವಿಧೆ ಅಲ್ಲ. ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ಬಗ್ಗೆ ತರಬೇತಿಯನ್ನೂ ಪಡೆದಿಲ್ಲ. ಕೋವಿಡ್ ಸಂದರ್ಭದಲ್ಲಿ ಬಿಡುವಿನಲ್ಲಿದ್ದಾಗ ಚಿತ್ರಕಲೆಯ ಬಗ್ಗೆ ಒಲವು ಮೂಡಿದೆ.
ಆರಂಭದಲ್ಲಿ ಕುದರೆಯೊಂದರ ಭಾವಚಿತ್ರ ಬರೆದಿದ್ದಾರೆ. ಇದು ಮುಂದುವರೆದು ಪ್ರಕೃತಿ, ಮನೆ, ಮರ, ಅಜ್ಜ, ಅಪ್ಪ, ಹೀಗೆ ಕಂಡ ಕಂಡಿದ್ದನ್ನೆಲ್ಲಾ ಚಿತ್ರಿಸುತ್ತಾ ಸಾಗಿದ್ದಾರೆ.
ಕಲೆಯ ಹುಚ್ಚು ಭಾವನಾರನ್ನು ಪೂರ್ಣ ಆವಾಹನೆ ಮಾಡಿಕೊಂಡಾಗಿದೆ. ಈಗ ಪ್ರಕೃತಿ, ಮರ ಗಿಡ ಬರೆಯುವುದಕ್ಕಿಂತ ವ್ಯಕ್ತಿ ಚಿತ್ರ, ವ್ಯಕ್ತಿಯ ಮುಖ ಭಾವನೆಗಳನ್ನು ತನ್ನ ಕಲೆಯಲ್ಲಿ ತರುವತ್ತ ಭಾವನಾ ಗಮನಹರಿಸಿದ್ದಾರೆ.
ಇದನ್ನೂ ಓದಿ: ಜ್ಯೋತಿರಾಜ್‍ಗೆ ಜಾನಪದ ಲೋಕ ಪ್ರಶಸ್ತಿ ಗರಿ
ಇದರ ಪರಿಣಾಮವೇ ಚಿತ್ರನಟ, ನಟಿಯರು, ದೇವರ ವಿಗ್ರಹಗಳನ್ನು ಚಿತ್ರಿಸಿ ಆ ಕಲಾಕೃತಿಯಲ್ಲಿರುವ ಕಣ್ಣು, ಮುಖದಲ್ಲಿ ಭಾವನೆಗಳನ್ನು ತರುವತ್ತ ತನ್ನ ಗಮನಹರಿಸಿದ್ದಾರೆ.
ಪೆನ್ಸಿಲ್ ಸ್ಕೆಚ್ ಭಾವನಾ ಅವರ ಆಸಕ್ತಿಯ ವಿಷಯವಾಗಿದೆ. ಪೋರ್ಟ್‍ರೈಟ್ ಡ್ರಾಯಿಂಗ್ ಮೂಲಕ ಕುದುರೆಯನ್ನು ಬರೆಯುತ್ತಾ ಸಾಗಿದ ಕೆಲ ಶ್ರೀರಾಮನವರೆಗೆ ತಂದು ನಿಲ್ಲಿಸಿದೆ. ಈಗ ಸಾಕಷ್ಟು ಜನ ತಮ್ಮ ಹಾಗೂ ತಮಗೆ ಬೇಕಾದವರ ಭಾವಚಿತ್ರ ಬರೆದುಕೊಡುವಂತೆ ಭಾವನಾ ಅವರನ್ನು ಸಂಪರ್ಕಿಸುತ್ತಿದ್ದಾರೆ.
ಚಿತ್ರಕಲೆ ಆಕಸ್ಮಿಕವಾಗಿ ಶುರುವಾಯಿತು. ನಿಧಾನಕ್ಕೆ ಕಲೆಯ ಆಳಕ್ಕಿಳಿದೆ. ಈಗ ಮುಖ ಭಾವನೆಗಳನ್ನು ಚಿತ್ರಿಸುವುದು ಆಸಕ್ತಿಯ ವಿಷಯವಾಗಿದೆ. ಆರಂಭದಲ್ಲಿ ನಾನು ಬರೆದ ಚಿತ್ರಗಳನ್ನು ನನ್ನ ತಾತ, ತಂದೆ ಗಮನಿಸಿ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದರು. ಈಗ ಶ್ರೀರಾಮನ ಭಾವಚಿತ್ರ ನೋಡಲು ಅವರಿರಬೇಕಿತ್ತು ಅನ್ನಿಸುತ್ತಿದೆ.
| ಭಾವನಾ ಪ್ರತಾಪ್ ರುದ್ರದೇವ