Connect with us

    Suspended; ಕರ್ತವ್ಯ ಲೋಪ | ಭರಮಸಾಗರ ಪಿಡಿಓ ಶ್ರೀದೇವಿ ಅಮಾನತು

    ಚಿತ್ರದುರ್ಗ ಜಿಲ್ಲಾ ಪಂಚಾಯತ್ ಕಚೇರಿ

    ಮುಖ್ಯ ಸುದ್ದಿ

    Suspended; ಕರ್ತವ್ಯ ಲೋಪ | ಭರಮಸಾಗರ ಪಿಡಿಓ ಶ್ರೀದೇವಿ ಅಮಾನತು

    CHITRADURGA NEWS | 30 JULY 2024

    ಚಿತ್ರದುರ್ಗ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಭರಮಸಾಗರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(PDO) ಶ್ರೀದೇವಿ ಅವರನ್ನು ಅಮಾನತು(Suspended) ಮಾಡಲಾಗಿದೆ.

    ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಾರ್ವಜನಿಕರ ಮಾತಿಗೆ ಮನ್ನಣೆ ನೀಡದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಲಾಗಿತ್ತು.

    ಇದನ್ನೂ ಓದಿ: ವಾಣಿ ವಿಲಾಸ ಸಾಗರಕ್ಕೆ ಭದ್ರಾ ನೀರು | ಶುರುವಾಯ್ತು ಕೌಂಟ್‌ಡೌನ್‌ 

    ಗ್ರಾಮ ಪಂಚಾಯಿತಿಯ ವಿವಿಧ ಕೆಲಸಗಳಿಗೆ ಸಾರ್ವಜನಿಕರು ಸಂದಾಯ ಮಾಡುವ ಹಣಕ್ಕೆ ರಸೀದ ಹಾಕದೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಗ್ರಾಪಂ ಅಧ್ಯಕ್ಷರು, ಸದಸ್ಯರು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ನೀಡಿದ್ದರು.

    ಗ್ರಾಮ ಪಂಚಾಯಿತಿಯ ತೆರಿಗೆ, ಶುಲ್ಕ ಸಂಗ್ರಹಣೆ ಹಾಗೂ ಇತರೆ ಸೇವೆಗಳನ್ನು ಪಡೆಯಲು ಆನ್‌ಲೈನ್ ಮೂಲಕವೇ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ್ದರೂ, ಮ್ಯಾನ್ಯುಯೆಲ್ ಆಗಿ ರಸೀದಿ ನೀಡಿದ್ದಾರೆ.

    ಇದನ್ನೂ ಓದಿ: ಮೈದುಂಬಿದ ವೇದಾವತಿ | ವಿವಿ ಸಾಗರಕ್ಕೆ ಬರೋಬ್ಬರಿ 4737 ಕ್ಯೂಸೆಕ್ ನೀರು

    ಪಂಚಾಯಿತಿಯಿAದ ನೀಡಿರುವ ಬೇರೆ ಬೇರೆ ಸೇವೆಗಳ ದಾಖಲೆಗಳ ಪ್ರಕಾರ 96 ಸಾವಿರ ರೂ.ಗಳಿಗೆ ಆನ್‌ಲೈನ್ ಹಾಗೂ ರಸೀದಿಗಳಲ್ಲಿ ಸೂಕ್ತ ದಾಖಲೆಗಳು ಪರಿಶೀಲನೆ ವೇಳೆ ಲಭ್ಯವಾಗಿಲ್ಲ. ಈ ಎಲ್ಲಾ ಅಂಶಗಳಿAದ ಸಾರ್ವಜನಿಕರ ಹಣ ದುರುಪಯೋಗ ಆಗಿರುವುದು ಕಂಡು ಬಂದಿದೆ ಎಂದು ವಿಶೇಷ ತನಿಖಾ ವರದಿ ಸಲ್ಲಿಸಲಾಗಿತ್ತು.

    ಗ್ರಾಪಂ ಅಧ್ಯಕ್ಷರು, ಸದಸ್ಯರ ದೂರು ಹಾಗೂ ತನಿಖಾ ವರದಿ ಆಧರಿಸಿ ಜಿಲ್ಲಾ ಪಂಚಾಯಿತಿ ಸಿಇಓ ಎಸ್.ಜೆ.ಸೋಮಶೇಖರ್ ಭರಮಸಾಗರ ಪಿಡಿಓ ಶ್ರೀದೇವಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top