ಮುಖ್ಯ ಸುದ್ದಿ
ಬತ್ತಿ ಹೋಗಿದ್ದ ಸೂಳೆಕೆರೆಗೆ ಭದ್ರಾ ನೀರು | ಕುಡಿಯುವ ನೀರಿಗೆ ತಪ್ಪಲಿದೆ ತೊಂದರೆ

CHITRADURGA NEWS | 6 APRIL 2024
ಚಿತ್ರದುರ್ಗ: ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರಿನ ಮೂಲ ಸೆಲೆಯಾಗಿರುವ ಸೂಳೆಕೆರೆಗೆ ಭದ್ರಾನಾಲೆಯ ನೀರು ಹರಿಯುತ್ತಿದೆ. ಇದರಿಂದ ಜನರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಬಸವಾಪಟ್ಟಣ ಸಮೀಪದ ಸೂಳೆಕೆರೆಗೆ ಈ ಬಾರಿ ಮಳೆ ಕೊರತೆಯಿಂದಾ ಸೂಳೆಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಿಲ್ಲ. ಬಿಸಿಲಿನಿಂದಾಗಿ ಸೂಳೆಕೆರೆಯ ನೀರು ಬತ್ತಿ ಹೋಗಿ ಅಲ್ಲಲ್ಲಿ ಒಣಗಿದ್ದು, ಈಗ ಕೆರೆಯಲ್ಲಿ 9.5 ಅಡಿ ನೀರು ಉಳಿದಿದೆ.
ಕ್ಲಿಕ್ ಮಾಡಿ ಓದಿ: ಮಳೆಯ ಆಗಮನಕ್ಕೆ ವಾತಾವರಣ ಸಜ್ಜು | ಕೊನೆಗೂ ಮುನಿಸು ತೊರೆದ ಮಳೆರಾಯ
ಮೂರು ದಿನಗಳ ಕಾಲ ಭದ್ರಾ ನಾಲೆಯಿಂದ ನೀರು ಹರಿಸುವುದರಿಂದ ಅರ್ಧ ಅಡಿ ನೀರು ಹೆಚ್ಚಾಗಲಿದೆ. ವೇಳಾ ಪಟ್ಟಯಂತೆ ಏಪ್ರಿಲ್ 22 ರಿಂದ ಮತ್ತೆ ಭದ್ರಾನಾಲೆಗೆ ನೀರು ಹರಿಸುವಾಗ ಸೂಳೆಕೆರೆಗೆ ನೀರು ಬಿಡಲಾಗುತ್ತದೆ.
ಭದ್ರಾನಾಲೆಯಿಂದ ನೀರು ಹರಿದು ಬರುತ್ತಿರುವರಿಂದ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ತಪ್ಪಲಿದೆ ಎನ್ನುತ್ತಾರೆ ತ್ಯಾವಣಿಗೆ ನೀರಾವರಿ ಇಲಾಖೆ ಎ.ಇ. ತಿಪ್ಪೇಸ್ವಾಮಿ.
ಕ್ಲಿಕ್ ಮಾಡಿ ಓದಿ: ಎಚ್ಚರ…ಮನೆಯಿಂದ ಹೊರ ಬರಬೇಡಿ | ಹೆಚ್ಚಿದೆ ಸೂರ್ಯನ ಆರ್ಭಟ
ವೇಳಾಪಟ್ಟಿಯಂತೆ ಭದ್ರಾನಾಲೆಗೆ ನೀರು ಬಿಡುವ ಮೊದಲು ಮತ್ತು ಕೊನೆಯಲ್ಲಿ ಉಪ ಕಾಲುವೆಗಳನ್ನು ಮುಚ್ಚಿ ತಲಾ ಮೂರು ದಿನಗಳ ಕಾಲ ಸೂಳೆಕೆರೆಗೆ ಮಾತ್ರ ಭದ್ರಾನಾಲೆಯಿಂದ ನೀರು ಹರಿಸಿದರೆ ಅವಳಿ ಜಿಲ್ಲೆಗಳಿಗೆ ಕುಡಿಯುವ ನೀರಿನ ತೊಂದರೆಯಾಗುವುದಿಲ್ಲ. ಈ ಬಗ್ಗೆ ಕಾಡಾ ಸಮಿತಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ ರಾಜ್ಯ ರೈತ ಮುಖಂಡ ತೇಜಸ್ವಿ ಪಟೇಟ್.
