ಹಿರಿಯೂರು
BESCOM negligence: ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ | ಸುಟ್ಟು ಹೋಯಿತು 9 ಕ್ವಿಂಟಲ್ ಹತ್ತಿ
CHITRADURGA NEWS | 28 AUGUST 2024
ಚಿತ್ರದುರ್ಗ: ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ 9 ಕ್ವಿಂಟಲ್ ಬೀಜೋತ್ಪಾದನೆಯ ಹತ್ತಿ ಸುಟ್ಟು ಹೋಗಿರುವ ಘಟನೆ ಹಿರಿಯೂರು ತಾಲ್ಲೂಕು ಧರ್ಮಪುರ ಸಮೀಪದ ಹರಿಯಬ್ಬೆಯಲ್ಲಿ ನಡೆದಿದೆ.
ಹರಿಯಬ್ಬೆ ರೈತ ಎಂಜಾರಪ್ಪ ಅವರು ಮೂರು ಎಕರೆ ಭೂಮಿಯಲ್ಲಿ ರಾಶಿ 555 ಕಂಪನಿಯ ಬೀಜೋತ್ಪಾದನೆಯ ಹತ್ತಿಯನ್ನು ಸಮೃದ್ಧವಾಗಿ ಬೆಳೆದಿದ್ದರು. ಮಂಗಳವಾರ ಮನೆಯ ಮುಂದೆ ಬಿಸಿಲಿಗೆ ಹಾಕಿದ್ದರು.
ಕ್ಲಿಕ್ ಮಾಡಿ ಓದಿ: ಹೂಕೋಸು ತುಂಬಿದ್ದ ಲಾರಿ ಪಲ್ಟಿ | ಚಳ್ಳಕೆರೆಯಲ್ಲಿ ಹೆದ್ದಾರಿಯಲ್ಲಿ ಘಟನೆ
ಬೆಸ್ಕಾಂ ಸಿಬ್ಬಂದಿ ಜಂಗಲ್ ತೆಗೆಯುವಾಗ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕದ ತಂತಿ ಮೇಲೆ ಕೊಂಬೆ ಬಿದ್ದಿದೆ. ಇದರಿಂದ ವಿದ್ಯುತ್ ಶಾರ್ಟ್ ಸರ್ಕೀಟ್ ಉಂಟಾಗಿ ಮನೆಯ ಮುಂದೆ ಬಿಸಿಲಿಗೆ ಹಾಕಿದ್ದ 9 ಕ್ವಿಂಟಲ್ ಬೀಜೋತ್ಪಾದನೆಯ ಹತ್ತಿ ಸುಟ್ಟು ಅಪಾರ ನಷ್ಟ ಉಂಟಾಗಿದೆ. ಅಷ್ಟೇ ಅಲ್ಲದೆ 40 ಮನೆಗಳಲ್ಲಿ ಟಿವಿ, ಫ್ಯಾನ್, ರೆಫ್ರಿಜರೇಟರ್‌ಗಳು ಸುಟ್ಟು ಹೋಗಿವೆ.
ಕ್ಲಿಕ್ ಮಾಡಿ ಓದಿ: ಜಾನುವಾರು ಗಣತಿಗೆ ಕೌಂಟ್‌ಡೌನ್ | ಮನೆ– ಮನೆಗೆ ಬರಲಿದ್ದಾರೆ ಗಣತಿದಾರರು
ಬೆಸ್ಕಾಂ ಸಿಬ್ಬಂದಿ, ಜಂಗಲ್ ತೆಗೆಯಲು ಪಂಪ್‌ಸೆಟ್ ಲೈನ್ ಮಾತ್ರ ಎಲ್‌ಸಿ ತೆಗೆದುಕೊಂಡಿದ್ದಾರೆ. ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕದ ಎಲ್‌ಸಿ ತೆಗೆದುಕೊಳ್ಳದೆ ಕಾಮಗಾರಿ ಮಾಡುತ್ತಿದ್ದಾಗ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.