ಮುಖ್ಯ ಸುದ್ದಿ
ಅಯೋಧ್ಯೆ ಭವ್ಯ ಮಂದಿರದಲ್ಲಿ ಬಾಲರಾಮ ವಿರಾಜಮಾನ | ಪ್ರಧಾನಿ ನರೇಂದ್ರ ಮೋದಿ ಯಜಮಾನಿಕೆಯಲ್ಲಿ ಪ್ರಾಣ ಪ್ರತಿಷ್ಠಾಪನೆ
CHITRADURGA NEWS | 22 JANUARY 2024
ಚಿತ್ರದುರ್ಗ: 500 ವರ್ಷಗಳ ಸುಧೀರ್ಘ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ತಲೆ ಎತ್ತಿದ್ದು, ಇಂದು ಆ ಮಂದಿರದಲ್ಲಿ ಶ್ರೀ ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ನಡೆದಿದೆ.
ನಮ್ಮ ಹೆಮ್ಮೆಯ ಕರುನಾಡಿನ ಎಚ್.ಡಿ.ಕೋಟೆಯಿಂದ ತೆಗೆದುಕೊಂಡು ಹೋಗಿರುವ ಶಿಲೆಯಲ್ಲಿ, ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೈಯಲ್ಲಿ ಅರಳಿದ ಶ್ರೀ ಮಾಲ ರಾಮನ ವಿಗ್ರಹ ವಿರಾಜಮಾನವಾಗಿದೆ.
ಇದನ್ನೂ ಓದಿ: ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದ ಎದುರಿನಲ್ಲಿ ಕರುನಾಡಿನ ಶ್ರೀಗಳು
ನೂರಾರು ಋತ್ವಿಜರೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ ಶ್ರೀಬಾಲರಾಮ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಯಜಮಾನಿಕೆಯಲ್ಲಿ ಪ್ರಾಣ ಪ್ರತಿಷ್ಠಾಪನೆ
ಪ್ರಾಣ ಪ್ರತಿಷ್ಠಾಪನೆಯಾಗಿ ದೃಷ್ಟಿಯನ್ನೂ ನೀಡಿರುವ ಶ್ರೀ ಬಾಲರಾಮನ ಅಧಿಕೃತ ಭಾವಚಿತ್ರ ಚಿತ್ರದುರ್ಗನ್ಯೂಸ್ ಓದುಗರಿಗಾಗಿ ಇಲ್ಲಿ ಒದಗಿಸಲಾಗಿದೆ.