ಮುಖ್ಯ ಸುದ್ದಿ
ಕು.ಬೇಬಿ ಪ್ರಿಯಾಂಕ ಭರತನಾಟ್ಯ ರಂಗ ಪ್ರವೇಶ
CHITRADURGA NEWS | 08 JUNE 2024
ಚಿತ್ರದುರ್ಗ: ನಗರದ ನಾಟ್ಯ ಪ್ರತಿಭೆ ಕು.ಬೇಬಿ ಪ್ರಿಯಾಂಕ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಜೂ.9 ಭಾನುವಾರ ಸಂಜೆ 5.30ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ನಡೆಯಲಿದೆ.
ಇದನ್ನೂ ಓದಿ: ಧವಳಗಿರಿ ಬಡಾವಣೆಯಲ್ಲಿ ಶ್ರೀ ಕ್ಷಿಪ್ರ ಪ್ರಸಾದ ಮಹಾಗಣಪತಿ ದೇವಸ್ಥಾನದ ವಾರ್ಷಿಕೋತ್ಸವ
ಲಾಸಿಕಾ ಫೌಂಡೇಶನ್ ಪ್ರಸ್ತುತಿಪಡಿಸುತ್ತಿರುವ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ವಾಸುದೇವರಾಮ ಎನ್. ಎಸ್‍ಆರ್‍ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಹಿರಿಯ ಪತ್ರಕರ್ತ ಕಾಂತರಾಜ್ ಅರಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಕಾರ್ಯಕ್ರಮದಲ್ಲಿ ನೃತ್ಯ ಗುರುಗಳಾದ ಶ್ವೇತಾ ಮಂಜುನಾಥ್ ಅವರಿಗೆ ಗುರುವಂದನೆ ಸಲ್ಲಿಸಲಾಗುತ್ತದೆ.
ಇದನ್ನೂ ಓದಿ: ವಾಣಿವಿಲಾಸ ಸಾಗರಕ್ಕೆ ಮತ್ತೆ ಹರಿದ ನೀರು | ಈಗ ಜಲಾಶಯದ ನೀರಿನ ಮಟ್ಟ ಎಷ್ಟಿದೆ
ರಂಗ ಪ್ರವೇಶಕ್ಕೆ ಸಂಗೀತ ಸಹಯೋಗ:
ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಸಂಗೀತ ಸಹಯೋಗದಲ್ಲಿ ನಟುವಾಂಗ ವಿದುಷಿ ಶ್ವೇತಾ ಮಂಜುನಾಥ್, ಹಾಡುಗಾರಿಕೆ ಬೆಂಗಳೂರಿನ ವಿದ್ವಾನ್ ರೋಹಿತ್ ಭಟ್, ಮೃದಂಗ ವಿದ್ವಾನ್ ನಾಗೇಂದ್ರ ಪ್ರಸಾದ್, ಕೊಳಲು ವಿದ್ವಾನ್ ಶಶಾಂಕ್ ಜೋಡಿದಾರ್, ಪಿಟೀಲು ವಿಭೂದೇಂದ್ರ ಸಿಂಹ, ರಿದಂ ಪ್ಯಾಡ್ ವಿದ್ವಾನ್ ಸಾಯಿ ವಂಶಿ ಇರುತ್ತಾರೆ.
ಪುಷ್ಪಾಂಜಲಿ, ಗಣೇಶ ಕೃತಿ, ಅಲರಿಪು, ಶಬ್ದಂ, ವರ್ಣ ನೃತ್ಯ ಪ್ರಕಾರಗಳು ರಂಗ ಪ್ರವೇಶದಲ್ಲಿದ್ದರೆ, ಗುರುವಂದನೆ ಹಾಗೂ ಸಭಾ ವಂದನೆಯಲ್ಲಿ ಶಿವಪದಂ, ದೇವರನಾಮ, ತಿಲ್ಲಾನ, ಮಂಗಳಂ ಇರುತ್ತದೆ.
ಇದನ್ನೂ ಓದಿ: ರಂಗಶಿಕ್ಷಣ ತರಬೇತಿ | ಅರ್ಜಿ ಆಹ್ವಾನ
ಕು.ಬೇಬಿ ಪ್ರಿಯಾಂಕ ಪರಿಚಯ:
ಚಿತ್ರದುರ್ಗದ ವಿದ್ಯಾನಗರದ ಈರುಳ್ಳಿ ಮಲ್ಲಪ್ಪ ಬಡಾವಣೆಯ ಎಸ್.ಆರ್.ಪುಷ್ಪ, ಎಂ.ಬಾಬು ದಂಪತಿಯ ಪುತ್ರಿ ಬೇಬಿ ಪ್ರಿಯಾಂಕ.
4ನೇ ವಯಸ್ಸಿನಿಂದಲೇ ವಿದುಷಿ ಶ್ವೇತಾ ಮಂಜುನಾಥ್ ಅವರ ಬಳಿ ಭರತ ನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಇದರೊಟ್ಟಿಗೆ ಚಂಪಕಾ ಶ್ರೀಧರ್ ಅವರ ಬಳಿ ಸಂಗೀತ ಅಭ್ಯಾಸವನ್ನೂ ಮಾಡುತ್ತಿದ್ದಾರೆ.
ಸದ್ಯ ಎಸ್.ಆರ್.ಎಸ್ ವಿದ್ಯಾಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಅಧ್ಯಯನ ಮಾಡುತ್ತಿದ್ದು, ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಜ್ಯೂನಿಯರ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾದ ಗೋವಿಂದ ಕಾರಜೋಳ
ಬನವಾಸಿ ಕದಂಬೋತ್ಸವ, ಹಂಪಿ ಉತ್ಸವ, ಮುರುಘಾ ಮಠದ ಶರಣ ಸಂಸ್ಕøತಿ ಉತ್ಸವ, ಕಬೀರಾನಂದ ಮಠದ ಶಿವರಾತ್ರಿ ಮಹೋತ್ಸವ ಸೇರಿದಂತೆ ಹಲವು ಬೃಹತ್ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶಿಸಿದ್ದಾರೆ.