Connect with us

    ಬಬ್ಬೂರು ಫಾರ್ಮ್‌ ಕಾಮಗಾರಿ | ಎಇಇ, ಲೆಕ್ಕ ಸಹಾಯಕ ಲೋಕಾಯುಕ್ತ ಬಲೆಗೆ

    ಮುಖ್ಯ ಸುದ್ದಿ

    ಬಬ್ಬೂರು ಫಾರ್ಮ್‌ ಕಾಮಗಾರಿ | ಎಇಇ, ಲೆಕ್ಕ ಸಹಾಯಕ ಲೋಕಾಯುಕ್ತ ಬಲೆಗೆ

    CHITRADURGA NEWS | 16 APRIL 2024
    ಚಿತ್ರದುರ್ಗ: ಹಿರಿಯೂರು ತಾಲ್ಲೂಕು ಬಬ್ಬೂರು ಫಾರ್ಮ್‌ನ ಕೃಷಿ ವಿಜ್ಞಾನ ಕೇಂದ್ರದ ಆಡಳಿತ ಕಚೇರಿಯ ಚಾವಣಿ ನಿರ್ಮಾಣ ಕಾಮಗಾರಿಯ ಭದ್ರತಾ ಹಣ (ಎಫ್‌ಡಿ) ವಾಪಸ್ ಕೊಡಲು ಗುತ್ತಿಗೆದಾರನಿಂದ ₹ 30,000 ಲಂಚ ಪಡೆಯುತ್ತಿದ್ದ ಎಇಇ, ಲೆಕ್ಕ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಎಇಇ ಲೋಹಿತ್ ಪ್ರಶಾಂತಕುಮಾರ್‌ ಹಾಗೂ ಲೆಕ್ಕ ಶಾಖೆಯ ಸಹಾಯಕ ಜಿ.ಆರ್.ಗಿರೀಶ್ ಲೋಕಾಯುಕ್ತ ಬಲೆಗೆ ಬಿದ್ದವರು.

    ಕ್ಲಿಕ್ ಮಾಡಿ ಓದಿ: ಸಚಿವ ಜಮೀರ್ ಅಹಮ್ಮದ್ ಆರೋಗ್ಯದಲ್ಲಿ ವ್ಯತ್ಯಾಸ | ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ

    ವಿಶ್ವವಿದ್ಯಾಲಯ ವ್ಯಾಪ್ತಿಯ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಬಬ್ಬೂರು ಫಾರ್ಮ್‌ನಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಆಡಳಿತ ಕಚೇರಿಯ ಚಾವಣಿ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದ ಶಿವಮೊಗ್ಗದ ಗುತ್ತಿಗೆದಾರ ಸತೀಶ ಚಂದ್ರ ಕೆಲ ದಿನದ ಹಿಂದ ಕಾಮಗಾರಿ ಪೂರ್ಣಗೊಳಿಸಿದ್ದರು. ಜತೆಗೆ ಬಿಲ್ ಕೂಡ ಗುತ್ತಿಗೆದಾರರಿಗೆ ‍ಪಾವತಿಯಾಗಿತ್ತು.

    ಕ್ಲಿಕ್ ಮಾಡಿ ಓದಿ: ಆಟೊ ಅಪಘಾತ; ಚಾಲಕ ಮೃತ | ಆರು ಜನರಿಗೆ ಗಾಯ

    ಕಾಮಗಾರಿಗೆ ಸಂಬಂಧಿಸಿದಂತೆ ವ್ಯತ್ಯಾಸ ಮೊತ್ತದ ಎಫ್‌ಡಿ ₹ 63,946 ಮರಳಿಸುವಂತೆ ಗುತ್ತಿಗೆದಾರ ಸತೀಶ ಚಂದ್ರ ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಅದು ಬಿಡುಗಡೆ ಆಗಿರಲಿಲ್ಲ. ಆ ಬಗ್ಗೆ ಎಇಇ ಲೋಹಿತ್‌ ಪ್ರಶಾಂತ ಕುಮಾರ್‌ ಬಳಿ ಕೇಳಿದ್ದರು. ಆ ಹಣ ಪಡೆಯಲು ಲೆಕ್ಕ ಸಹಾಯಕ ಗಿರೀಶ್‌ ಅವರಿಗೆ ₹ 40,000 ಲಂಚ ತಲುಪಿಸುವಂತೆ ಅವರು ಹೇಳಿದ್ದರು. ಲಂಚ ನೀಡಿದರೆ ಮಾತ್ರ ಎಫ್‌ಡಿ ಮೊತ್ತ ಬಿಡುಗಡೆ ಆಗಲಿದೆ ಎಂದು ಹೇಳಿದ್ದರು. ಇದರಿಂದ ಬೇಸತ್ತು ಸತೀಶ ಚಂದ್ರ ಶಿವಮೊಗ್ಗದ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

    ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಪೂರ್ವ ನಿಗದಿಯಂತೆ ವಿಶ್ವವಿದ್ಯಾಲಯದಲ್ಲಿ ಸತೀಶ ಚಂದ್ರ ಅವರಿಂದ ಆರೋಪಿಗಳು ₹ 30,000 ಲಂಚ ಪಡೆಯುವಾಗ ದಾಳಿ ನಡೆಸಿ ಬಂಧಿಸಿದ್ದಾರೆ. ಇನ್‌ಸ್ಪೆಕ್ಟರ್‌ಗಳಾದ ಪ್ರಕಾಶ್ ಹಾಗೂ ವೀರಬಸಪ್ಪ ಎಲ್‌.ಕುಸುಲಾಪುರ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top