ಮುಖ್ಯ ಸುದ್ದಿ
Hindu Mahaganapathi: ಹಿಂದೂ ಮಹಾಗಣಪತಿ ಉತ್ಸವ ಸಮಿತಿಗೆ ಬಿ.ನಯನ್ ಅಧ್ಯಕ್ಷ

CHITRADURGA NEWS | 04 AUGUST 2024
ಚಿತ್ರದುರ್ಗ: ದೇಶದ ಗಮನ ಸೆಳೆದಿರುವ ಕೋಟೆನಾಡು ಚಿತ್ರದುರ್ಗದ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ತಯಾರಿಗಳು ಆರಂಭವಾಗಿವೆ.
ಸರಿಯಾಗಿ ಇನ್ನೊಂದು ತಿಂಗಳಿಗೆ ಗಣೇಶೋತ್ಸವ ಆರಂಭವಾಗಲಿದ್ದು, ಲಕ್ಷಾಂತರ ಜನ ಸೇರುವ ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವ 21 ದಿನಗಳ ಕಾಲ ಜಾತ್ರೆಯಂತೆ ನಡೆಯುತ್ತಿದೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆ ಯಶಸ್ವಿ | ಎಸ್ಪಿ ಧಮೇಂದರ್ ಕುಮಾರ್ ಮೀನಾ ಅಭಿನಂದಿಸಿದ ಮಾದಾರ ಶ್ರೀ
ವಿಶ್ವಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ನಡೆಯುವ ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವದ 2024ನೇ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಬಿ.ನಯನ್ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದಲ್ಲಿ ಸಾಯಿ ಮೊಬೈಲ್ ಸೆಂಟರ್ ಮೂಲಕ ಖ್ಯಾತಿಯಾಗಿರುವ ಬಿ.ನಯನ್ ಕಳೆದ ಐದು ವರ್ಷಗಳಿಂದ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಲ್ಲಿ ಸಕ್ರೀಯರಾಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿಗೆ ವಿದಾಯ | ಹೇಗಿತ್ತು ಗಣಪತಿಯ ವಿಸರ್ಜನೆ
ಕಳೆದ ಅವಧಿಯಲ್ಲಿ ಸಮಿತಿಯ ಉಪಾಧ್ಯಕ್ಷರಾಗಿ, ಗಣಪತಿ ಪೂಜಾ ಸಮಿತಿಯ ಉಸ್ತುವಾರಿ ವಹಿಸಿಕೊಂಡಿದ್ದರು. ಚಿತ್ರದುರ್ಗದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಾಯಿಬಾಬಾ ದೇವಸ್ಥಾನದ ಟ್ರಸ್ಟಿಯೂ ಆಗಿದ್ದಾರೆ.
2023ನೇ ಸಾಲಿನಲ್ಲಿ ಹಿಂದೂ ಮಹಾಗಣಪತಿ ಉತ್ಸವ ಸಮಿತಿಗೆ ಬಿಜೆಪಿ ಮುಖಂಡ ಜಿ.ಎಂ.ಸುರೇಶ್ ಅಧ್ಯಕ್ಷರಾಗಿದ್ದರು.
ಹಿಂದೂ ಮಹಾಗಣಪತಿ ಉತ್ಸವ ಸಮಿತಿ – 2024
ಮಾರ್ಗದರ್ಶಕರಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್, ಅಧ್ಯಕ್ಷರಾಗಿ ಸಾಯಿ ಮೊಬೈಲ್ ಬಿ.ನಯನ್, ಪ್ರಧಾನ ಕಾರ್ಯದರ್ಶಿಯಾಗಿ ಶರಣ್ ಕುಮಾರ್, ಖಜಾಂಚಿಯಾಗಿ ಕಾವೇರಿ ವಾಟರ್‌ನ ಅಜಿತ್, ಉಪಾಧ್ಯಕ್ಷರಾಗಿ ವಿ.ಎಲ್.ಪ್ರಶಾಂತ್(ಅಪ್ಪಾಜಿ ಪರಿಸರ), ಶ್ರೀರಂಗ ಗ್ರಾನೈಟ್‌ನ ಚೇತನ್ ಬಾಬು, ಕಾರ್ಯದರ್ಶಿಗಳಾಗಿ ನಗರಸಭೆ ಸದಸ್ಯ ಶಶಿಧರ್, ಬಿವಿಕೆಎಸ್ ಕಾರ್ತಿಕ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಕೋಟೆನಾಡಿನಲ್ಲಿ ಹಿಂದೂ ಮಹಾ ಗಣಪತಿಯ ಘರ್ಜನೆ; ದುರ್ಗದ ತುಂಬಾ ಕೇಸರಿಯ ರಂಗು, ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ ನೋಡಿ
ಸಮಿತಿ ಸಂಚಾಲಕರಾಗಿ ಬಜರಂಗದಳ ಪ್ರಾಂತ ಸಂಯೋಜಕ ಪ್ರಭಂಜನ್, ಸಹ ಸಂಚಾಲಕರಾಗಿ ಬಜರಂಗದಳ ಜಿಲ್ಲಾ ಸಂಯಜಕ ಸಂದೀಪ್, ವಿಎಚ್‌ಪಿ ನಗರ ಉಪಾಧ್ಯಕ್ಷ ರಂಗಸ್ವಾಮಿ ಇದ್ದಾರೆ. ಇದರೊಟ್ಟಿಗೆ 40ಕ್ಕೂ ಹೆಚ್ಚು ಸದಸ್ಯರು ಸಮಿತಿಯಲ್ಲಿದ್ದಾರೆ.
ಇದಲ್ಲದೆ ಪೂಜಾ, ಪ್ರಸಾದ, ಸ್ವಚ್ಛತಾ, ಕಾರ್ಯಕ್ರಮ, ಪ್ರಚಾರ, ಶೋಭಾಯಾತ್ರೆ ಹೀಗೆ ಹಲವು ಉಪ ಸಮಿತಿಗಳನ್ನು ನೇಮಕ ಮಾಡಲಾಗಿದೆ.
ಸೆಪ್ಟಂಬರ್ 7ಕ್ಕೆ ಗಣಪತಿ ಪ್ರತಿಷ್ಠಾಪನೆ:
ಸೆಪ್ಟಂಬರ್ 7 ರಂದು ಗಣೇಶ ಚೌತಿ ಬಂದಿದ್ದು, ಅಂದು ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಯಾಗಲಿದೆ. 21 ದಿನಗಳ ಕಾಲ ಹಿಂದೂ ಮಹಾಗಣಪತಿ ರಾರಾಜಿಸಲಿದ್ದು, ಇಷ್ಟೂ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಣಪತಿ ಪೆಂಡಾಲ್ ಬಳಿ ನಿರ್ಮಾಣವಾಗುವ ವೇದಿಕೆಯಲ್ಲಿ ಜರುಗಲಿವೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಅಂಬಿ ಪುತ್ರ ಅಭಿಷೇಕ್
ಸೆಪ್ಟಂಬರ್ 28 ಶನಿವಾರ ಬೃಹತ್ ಶೋಭಾಯಾತ್ರೆ ಜೊತೆಗೆ ಹಿಂದೂ ಮಹಾಗಣಪನ ವಿಸರ್ಜನೆ ನಡೆಯಲಿದೆ.
