ಮುಖ್ಯ ಸುದ್ದಿ
ಅಂಬೇಡ್ಕರ್ ಬಗ್ಗೆ ಲೇಖಕ ಅರುಣ್ ಜೋಳದಕೂಡ್ಲಿಗಿ ಮಾತುಗಳು…
CHITRADURGA NEWS | 14 APRIL 2024
ಕಳೆದ ಹತ್ತು ವರ್ಷಗಳಿಂದ ಜಾಗತಿಕ ವಲಯದಲ್ಲಿ ಅಂಬೇಡ್ಕರ್ ಕುರಿತ ಚರ್ಚೆ, ಸಂವಾದ ಕಾರ್ಯಕ್ರಮಗಳು ಹೆಚ್ಚಾಗುತ್ತಿವೆ ಎಂದು ಲೇಖಕ ಅರುಣ್ ಜೋಳದಕೂಡ್ಲಿಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ 133ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನೂ ಓದಿ: ಅಂಬೇಡ್ಕರರನ್ನು ಪ್ರಧಾನಿ ಮಾಡಬಹುದಿತ್ತು | ಎಂಎಲ್ಸಿ ರವಿಕುಮಾರ್
ಇಂದು ಜಾಗತಿಕ ಮಟ್ಟದ ವಿದ್ವತ್ ವಲಯ ಅಂಬೇಡ್ಕರ್ ಕಣ್ಣೋಟದ ಮೂಲಕ ಭಾರತವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಮಹತ್ವದ ಬೆಳವಣಿಗೆ ಎಂದರು.
ಇಷ್ಟು ದಿನ ವೇದ ಉಪನಿಷತ್ತುಗಳ ಮೂಲಕ ಭಾರತವನ್ನು ಅರ್ಥ ಮಾಡಿಕೊಳ್ಳಲಾಗುತ್ತಿತ್ತು. ಆನಂತರ ವಿವೇಕಾನಂದರ ಭಾಷಣ, ಗಾಂಧೀಜಿಯ ಕಣ್ಣೋಟದಲ್ಲಿ ಭಾರತವನ್ನು ನೋಡಲಾಗುತ್ತಿತ್ತು. ಆದರೆ, ಈಗ ಅಂಬೇಡ್ಕರ್ ಕಣ್ಣೋಟದಲ್ಲಿ ಭಾರತವನ್ನು ನೋಡುವ ಮೂಲಕ ನಿಜವಾದ ಭಾರತವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದರು.
ಇದನ್ನೂ ಓದಿ: ಕೋಟೆನಾಡಿಗೆ ಮೊದಲ ಮಳೆಯ ಸಿಂಚನ | ಶನಿವಾರ ಎಲ್ಲೆಲ್ಲಿ ಮಳೆ ಸುರಿದಿದೆ ನೋಡಿ..
ಅಂಬೇಡ್ಕರರನ್ನು ಆಯ್ದ ಬರಹಗಳು, ಹೇಳಿಕೆಗಳು, ಕೋಟ್‍ಗಳ ಮೂಲಕ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಬಾಬಾ ಸಾಹೇಬರು ಪ್ರತಿ ಕ್ಷಣವೂ ಬದಲಾವಣೆ ಬಯಸುತ್ತಿದ್ದರು. ಅವರ ಚಿಂತನೆ, ಆಲೋಚನೆಗಳು ನಿರಂತರ ಪ್ರಯಾಣದಲ್ಲಿರುತ್ತಿದ್ದವು. ಒಮ್ಮೆ ಅವರು ಹೇಳಿದ ಹೇಳಿಕೆಗೆ ಕೆಲ ಆನಂತರ ಅವರೇ ಉಲ್ಟಾ ಆಗಿರುತ್ತಿದ್ದರು. ಅವರ ವಿಚಾರಗಳ ಪಲ್ಲಟವಾಗುತ್ತಿದ್ದವು. ಒಮ್ಮೆ ಹಿಂದೂ ಧರ್ಮದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದರು. ಗೋ ಹತ್ಯೆ ಬಗ್ಗೆ ಮಾತನಾಡಿದ್ದರು. ಈಗ ಆರೆಸ್ಸೆಸ್ಸ್ ಅದನ್ನೇ ಇಟ್ಟುಕೊಂಡು ಮಾತನಾಡುತ್ತಿದೆ. ಆದರೆ, ಆನಂತರ ಅವರ ಅಭಿಪ್ರಾಯಗಳು ಪಲ್ಲಟವಾಗುತ್ತಿದ್ದವು.
ಇದನ್ನೂ ಓದಿ: ಕೋಟೆನಾಡಿನಲ್ಲಿ ರಾಜಾಹುಲಿ ಮತ ಶಿಖಾರಿ | ಒಂದೇ ದಿನ ಮೂರು ಸಮಾವೇಶಗಳಲ್ಲಿ ಭಾಗವಹಿಸಿದ ಬಿಎಸ್‍ವೈ
ಇಸ್ಲಾಂನಲ್ಲಿ ಸಮಾನತೆ ಇದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಈ ಹಂತದಲ್ಲಿ ಮಹಾರಾಷ್ಟ್ರದಲ್ಲಿ ಸುಮಾರು 500 ಕುಟುಂಬಗಳು ಇಸ್ಲಾಂಗೆ ಮತಾಂತರ ಆಗಿದ್ದವು. ಆನಂತರ ಅಲ್ಲಿ ಸಮಸ್ಯೆ ಇದೆ ಎಂದು ಹೇಳಿದ್ದರು. ಬುದ್ಧನ ಬಳಿ ಹೋದಾಗ ಮಾತ್ರ ಪ್ರಬುದ್ಧರಾಗುತ್ತೇವೆ ಎಂದು ಬಾಬಾ ಸಾಹೇಬರು ಹೇಳಿದ್ದರು ಎಂದು ಅರುಣ್ ವಿವರಿಸಿದರು.
ವಿಚಾರಗಳನ್ನು ತರ್ಕ, ಪ್ರಯೋಗಗಳ ಮೂಲಕ ಗಮನಿಸುತ್ತಿದ್ದರು. ಶಿಕ್ಷಣದ ವಿಚಾರದಲ್ಲಿ ಪ್ರಯೋಗ ನಡೆಸಿದ್ದರು. ಇದರ ಭಾಗವೇ ರೆಸಿಡೆನ್ಶಿಯಲ್ ಶಾಲೆಗಳ ಪ್ರಾರಂಭ. ಧಾರವಾಡದಲ್ಲಿ ಕೂಡಾ ಒಂದು ಶಾಲೆ ತೆರೆದಿದ್ದರು. ದಲಿತ ಮಕ್ಕಳು ಮನೆಯ ಸಮಸ್ಯೆಯಲ್ಲಿ ಕಳೆದು ಹೋಗಿ ಶಿಕ್ಷಣದಲ್ಲಿ ಹಿಂದೆ ಬೀಳುತ್ತಾರೆ. ಆದ್ದರಿಂದ ಮನೆಯಿಂದ ಹೊರಗೆ ಇದ್ದು ಕಲಿಯಲಿ ಎನ್ನುವ ಭಾವನೆ ಅವರಲ್ಲಿತ್ತು ಎಂದರು.
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಗೂಳಿಹಟ್ಟಿ ಶೇಖರ್
ಭಾರತದ ಪತ್ರಿಕೋದ್ಯಮ ಇತಿಹಾಸದಲ್ಲಿ ಅಂಬೇಡ್ಕರ್ ಎಲ್ಲಿಯೂ ದಾಖಲಾಗಿಲ್ಲ. ಆದರೆ, ಅವರು 36 ವರ್ಷ ಪತ್ರಕರ್ತರಾಗಿದ್ದರು. ಮೂಕನಾಯಕ, ಬಹಿಷ್ಕøತ ಭಾರತ ಹೀಗೆ ಹಲವು ಪತ್ರಿಕೆಗಳನ್ನು ನಡೆಸಿದ್ದರು. ಆಗಲೇ ಅಂಬೇಡ್ಕರ್ ವಿರುದ್ಧ ಇತರೆ ಪತ್ರಿಕೆಗಳಲ್ಲಿ ಸುಳ್ಳು ಸುದ್ದಿಗಳು ಪ್ರಕಟವಾಗಿದ್ದವು. ಭಾರತದ ಪತ್ರಿಕೋದ್ಯಮ ಬ್ರಾಹ್ಮಣರ ಹಿಡಿತದಲ್ಲಿದೆ ಎಂದು ಹಿಂದೆಯೇ ಹೇಳಿದ್ದರು. ಪತ್ರಿಕೋದ್ಯಮ ಕಾಂಗ್ರೆಸ್ ಪರವಾಗಿದೆ ಎನ್ನುವ ಮಾತನ್ನು ಹೇಳಿದ್ದರು. ಈಗ ಪರಿಸ್ಥಿತಿ ಭಿನ್ನವಾಗಿದೆ ಎಂದು ಅರುಣ್ ಜೋಳದಕೂಡ್ಲಿಗಿ ಹೇಳಿದರು.
ಇದನ್ನೂ ಓದಿ: ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಗೆಲ್ಲಬೇಕಿದೆ | ಸಚಿವ ಕೆ. ಹೆಚ್. ಮುನಿಯಪ್ಪ
ಮೂಕ ನಾಯಕ ಪತ್ರಿಕೆ ಆರಂಭವಾದಾಗ ಮುಂಬೈ ಕ್ರಾನಿಕಲ್ ಹಾಗೂ ಕೇಸರಿ ಪತ್ರಿಕೆಗಳಲ್ಲಿ ಜಾಹೀರಾತು ಹಾಕಿಸಲು ಮನವಿ ಮಾಡಿದ್ದರು. ಆದರೆ, ಜಾಹೀರಾತು ಹಾಕಿರಲಿಲ್ಲ. ಬಾಬಾ ಸಾಹೇಬರು ಪ್ರತಿ ಹೋರಾಟ, ಚಳುವಳಿ ಕಟ್ಟುವಾಗಲೂ ಒಂದೊಂದು ಪತ್ರಿಕೆ ಆರಂಭವಾಗಿದೆ. ಜಾಹೀರಾತುಗಳಿಲ್ಲದೆ ಪತ್ರಿಕೆ ನಡೆಸುತ್ತಿದ್ದರು. ಇದು ಆರ್ಥಿಕ ಮುಗ್ಗಟ್ಟಿಗೂ ಕಾರಣವಾಗಿರಬಹುದು. ಬಹಿಷ್ಕøತ ಭಾರತ್ ಪತ್ರಿಕೆಗೆ ಅಂಬೇಡ್ಕರರೇ 18 ಅಂಕಣಗಳನ್ನು ಬರೆಯುತ್ತಿದ್ದರು. ಇತರೆ ಪತ್ರಿಕೆಗಳಲ್ಲಿ ಬರುತ್ತಿದ್ದ ಸುಳ್ಳು ವರದಿಗಳಿಗೆ ಫ್ಯಾಕ್ಟ್ ಚೆಕ್ ರೀತಿಯಲ್ಲಿ ಬಾಬಾ ಸಾಹೇಬರ ಪತ್ರಿಕೆಗಳಲ್ಲಿ ವರದಿಗಳು ಬರುತ್ತಿದ್ದವು ಎಂದು ಅರುಣ್ ಜೋಳದಕೂಡ್ಲಿಗಿ ವಿವರಿಸಿದರು.
ವಾರ್ತಾಧಿಕಾರಿ ಮಾರುತಿ ಮಾತನಾಡಿ, ಭಾರತದಲ್ಲಿ ಅಂಬೇಡ್ಕರರು ಇರದೆ ಹೋಗಿದ್ದರೆ, ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗೆ ಅವರು ಧ್ವನಿ ಎತ್ತದಿದ್ದರೆ ಭಾರತದ ಪರಿಸ್ಥಿತಿ ಹೇಗಿರುತ್ತಿತ್ತು ಎನ್ನುವುದು ಊಹೆಗೆ ನಿಲುಕದು. ಜಗತ್ತಿನ ಅತೀ ಹಿಂದುಳಿದ ದೇಶಗಳ ಸಾಲಿನನಲಿ ಭಾರತ ಇರುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಆದ್ಯತೆ | ಗೋವಿಂದ ಕಾರಜೋಳ
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು ವೇದಿಕೆಯಲ್ಲಿದ್ದರು.