ಮುಖ್ಯ ಸುದ್ದಿ
CT ರವಿ ಮೇಲೆ ಹಲ್ಲೆ | ಇದು ಹೇಡಿಗಳ ಕೃತ್ಯ | BJP ವಕ್ತಾರ ನಾಗರಾಜ್ ಬೇಂದ್ರೆ

CHITRADURGA NEWS | 20 DECEMBER 2024
ಚಿತ್ರದುರ್ಗ: ಬೆಳಗಾವಿ ಸುವರ್ಣಸೌಧದಲ್ಲಿ ಬಿಜೆಪಿ ಮುಖಂಡ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ರವರ ಮೇಲೆ ಕಾಂಗ್ರೆಸ್ ಗುಂಡಾಗಳು ಹಲ್ಲೆಗೆ ಯತ್ನ ನಡೆಸಿ, ಕೊಲೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದು ಹೇಡಿಗಳ ಕೃತ್ಯ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್ ಬೇಂದ್ರೆ ಖಂಡಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಭದ್ರಾ ಮೇಲ್ದಂಡೆ ಅನುದಾನಕ್ಕೆ | ಸಂಸದರ ನಿಯೋಗದಿಂದ ಮನವಿ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರ ಗುಂಡಾ ವರ್ತನೆ ಬಿಜೆಪಿ ಪಕ್ಷ ಸಹಿಸಲ್ಲ, ಅಂಥವರನ್ನು ಒದ್ದು ಒಳಗೆ ಹಾಕಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ನಾಗರಾಜ್ ಬೇಂದ್ರೆ ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಸಂಪೂರ್ಣ ಹದಗೆಟ್ಟು ಹೋಗಿದೆ, ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದ ಮೇಲೆ ಸಾರ್ವಜನಿಕರಿಗೆ ಎಲ್ಲಿ ರಕ್ಷಣೆ ನೀಡುತ್ತದೆ ಕಾಂಗ್ರೆಸ್ ಸರ್ಕಾರ.
ನಿನ್ನೆ ರಾತ್ರಿ ಬಂಧಿಸಿ ಖಾನಾಪುರ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವುದನ್ನು ಬಿಟ್ಟು, ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ ಪೊಲೀಸರು, ಸಿಟಿ ರವಿಯವರನ್ನು ಭಯೋತ್ಪಾದಕರ ರೀತಿಯಲ್ಲಿ ಬಂಧಿಸಿಡಂತೆ ಪೊಲೀಸರು ವರ್ತಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ
ಅದನ್ನು ಬಿಟ್ಟು ಮೂರ್ನಾಲ್ಕು ಜಿಲ್ಲೆಗಳ ಠಾಣೆಗಳನ್ನು ರಾತ್ರಿ ಇಡೀ ಸುತ್ತಾಡಿಸಿ, ಪೊಲೀಸರು ಮಾನಸಿಕ ಹಿಂಸೆ ನೀಡಿ ಹಲ್ಲೆ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸರ್ಕಾರದ ಆಣತಿಯಂತೆ ಪೊಲೀಸರು ಕಾರ್ಯನಿರ್ವಹಿಸಿದ್ದು, ಈ ಸರ್ಕಾರವನ್ನು ನಾವು ಯಾವ ದೇಶದಲ್ಲಿದ್ದೇವೆ ಎಂದು ಪ್ರಶ್ನಿಸಬೇಕಾಗುತ್ತದೆ, ಪೊಲೀಸರು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ, ಇದರ ವಿರುದ್ದ ರಾಜಾದ್ಯಂತ ಭಾರತೀಯ ಜನತಾ ಪಾರ್ಟಿ ಸರ್ಕಾರ ಧೋರಣೆಯನ್ನು ಖಂಡಿಸಿ ಹೋರಾಟ ಮಾಡಲಿದೆ ಎಂದು ಹೇಳಿದ್ದಾರೆ.
