Connect with us

    ಕೊಲೆ ಆರೋಪಿಗಳ ಬಂಧನ | ಪೊಲೀಸರ ಭರ್ಜರಿ ಕಾರ್ಯಾಚರಣೆ

    murder accused arrest

    ಕ್ರೈಂ ಸುದ್ದಿ

    ಕೊಲೆ ಆರೋಪಿಗಳ ಬಂಧನ | ಪೊಲೀಸರ ಭರ್ಜರಿ ಕಾರ್ಯಾಚರಣೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 22 DECEMBER 2024

    ಚಿತ್ರದುರ್ಗ: ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭೀಕರವಾಗಿ ಕೊಲೆಯಾಗಿದ್ದ ಆಂಧ್ರ ಮೂಲದ ಯುವಕನ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಘಟನೆ ನಡೆದ 48 ಗಂಟೆ ಅಂದರೆ ಎರಡೇ ದಿನಗಳಲ್ಲಿ ಪರಶುರಾಂಪುರ ಹಾಗೂ ನಾಯಕನಹಟ್ಟಿ ಪೊಲೀಸರು ಕೊಲೆಗಾರರ ಎಡೆಮುರಿ ಕಟ್ಟಿದ್ದಾರೆ.

    ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

    ಡಿಸೆಂಬರ್ 19 ರಾತ್ರಿ ವೇಳೆ ನಾಗಪ್ಪನಹಳ್ಳಿ ಗೇಟ್‍ನಲ್ಲಿ ಆಂಧ್ರ ಮೂಲದ ವಡ್ಡೇಂ ಪಾಳ್ಯದ ಗಿತ್ತರಾಜು ಕೊಲೆ ಮಾಡಿ ಪಕ್ಕದ ಜಮೀನಿನಲ್ಲಿ ದೇಹ ಎಸೆಯಲಾಗಿತ್ತು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಆಂದ್ರಪ್ರದೇಶ ಅನಂತಪುರ ಜಿಲ್ಲೆಯ ಮಲಯನೂರು ಗ್ರಾಮದ ರಾಮಣ್ಣ, ಕೊಟ್ರೇಶ್, ಬಸವರಾಜ ಮತ್ತು ಸುಧಮ್ಮ ಎಂಬುವವರನ್ನು ಬಂದಿಸಿದ್ದಾರೆ.

    ಇದನ್ನೂ ಓದಿ: ದಿನ ಭವಿಷ್ಯ | ಡಿಸೆಂಬರ್ 22 | ಈ ರಾಶಿಯವರಿಗೆ ಆದಾಯ ಸಾಕಾಗುವುದಿಲ್ಲ

    ಗಿತ್ತರಾಜು ಕೊಲೆ ಪ್ರಕರಣ ಸಂಬಂಧ ಅವರ ತಮ್ಮ ನಾಗರಾಜ ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಈ ಹಿನ್ನೆಲೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ನಾಯಕನಹಟ್ಟಿ ಹಾಗೂ ಪರಶುರಾಂಪುರ ಪೊಲೀಸರು ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂದಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top