Connect with us

Lidkar; ಚರ್ಮ ಕುಶಲಕರ್ಮಿಗಳಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಮುಖ್ಯ ಸುದ್ದಿ

Lidkar; ಚರ್ಮ ಕುಶಲಕರ್ಮಿಗಳಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

CHITRADURGA NEWS | 07 OCTOBER 2024

ಚಿತ್ರದುರ್ಗ: ಡಾ.ಬಾಬು ಜಗಜೀವನ ರಾಂ(Dr. Babu Jagjivan Ram) ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ 2024-25ನೇ ಸಾಲಿಗೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅರ್ಹ ಚರ್ಮ ಕುಶಲಕರ್ಮಿಗಳಿಂದ ಅರ್ಜಿ(application) ಆಹ್ವಾನಿಸಲಾಗಿದೆ.

ಕ್ಲಿಕ್ ಮಾಡಿ ಓದಿ: Murugha shree Release: ಮುರುಘೇಶನ ಆಶೀರ್ವಾದದಿಂದ ಬಿಡುಗಡೆ | ಮುರುಘಾ ಶರಣರು

ಅಕ್ಟೋಬರ್ 06 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅ.30ರೊಳಗೆ ಸೇವಾ ಸಿಂಧು ಪೋರ್ಟಲ್, ಕರ್ನಾಟಕ ಒನ್, ಗ್ರಾಮ ಒನ್‍ನ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆನ್‍ಲೈನ್ ಮೂಲಕ ಸಲ್ಲಿಸಿದ ಅವಶ್ಯ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಜಿಲ್ಲಾ ಸಂಯೋಜಕರ ಕಚೇರಿಗೆ ಸಲ್ಲಿಸಬೇಕಾಗಿದೆ.

ಕಾಯಕ ಸ್ಪೂರ್ತಿ ಯೋಜನೆ (ಮಹಿಳೆಯರಿಗೆ), ಪಾದುಕೆ ಕುಟೀರ ಯೋಜನೆ, ಮಾರುಕಟ್ಟೆ ಸಹಾಯ ಯೋಜನೆ, ಚರ್ಮಶಿಲ್ಪಿ ಯೋಜನೆ, ವಸತಿ ಕಾರ್ಯಾಗಾರ ಯೋಜನೆ, ಸ್ವಾವಲಂಬಿ/ಸಂಚಾರಿ ಮಾರಾಟ ಮಳಿಗೆ ಯೋಜನೆ, ನೇರಸಾಲ ಯೋಜನೆ ಹಾಗೂ ಕೌಶಲ್ಯ ಉನ್ನತೀಕರಣ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕ್ಲಿಕ್ ಮಾಡಿ ಓದಿ: APMC; ಚಿತ್ರದುರ್ಗ ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ಧಾರಣೆ ಎಷ್ಟಿದೆ?

ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ನಗರದ ಬಿ.ಡಿ.ರಸ್ತೆಯ ಪ್ರವಾಸಿ ಮಂದಿರ ಹತ್ತಿರದ ಲಿಡ್‍ಕರ್ ನಿಗಮ ಜಿಲ್ಲಾ ಸಂಯೋಜಕರು 94449181136 ಗೆ ಸಂಪರ್ಕಿಸಬಹುದು ಎಂದು ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version