ಮುಖ್ಯ ಸುದ್ದಿ
ನನ್ನ ವಿರುದ್ಧ ಅಪಪ್ರಚಾರ ಮಾಡೋರಿಗೆ ಸಾಮಾನ್ಯ ಸಭೆಯಲ್ಲಿ ಉತ್ತರ ಕೊಡ್ತಿನಿ | ಮೀಸೆ ಮಹಾಲಿಂಗಪ್ಪ

CHITRADURGA NEWS | 03 MARCH 2025
ಚಿತ್ರದುರ್ಗ: ಜಿಲ್ಲಾ ಯಾದವ ಸಂಘದಲ್ಲಿ ಯಾವುದೇ ಅನುದಾನ ದುರ್ಬಳಕೆ ಆಗಿಲ್ಲ. ನನ್ನ ವಿರುದ್ಧ ಕೆಲವರು ಅನಗತ್ಯ ಅಪಪ್ರಚಾರ ಮಾಡುತ್ತಿದ್ದು, ಸಾಮಾನ್ಯ ಸಭೆಯಲ್ಲಿ ಉತ್ತರ ಕೊಡುತ್ತೇವೆ ಎಂದು ಜಿಲ್ಲಾ ಯಾದವ(ಗೊಲ್ಲ) ಸಂಘದ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಸದಸ್ಯರು ಹಾಗೂ ಅಲ್ಲದವರು ಸುಖಾಸುಮ್ಮನೆ ನಮ್ಮ ಸಂಘದ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡುತ್ತಿದ್ದೇವೆ ಎಂದರು.

ಇದನ್ನೂ ಓದಿ: ಚನ್ನಗಿರಿ ಮಾರುಕಟ್ಟೆ ಅಡಿಕೆ ರೇಟ್
ಹೊಸದುರ್ಗದ ನಂದೀಶ ಇತರರು ನಮ್ಮ ಮೇಲೆ ಅನುದಾನ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಎಲ್ಲಿಯೂ ಇಂತಹ ದುರ್ಬಳಕೆ ಆಗಿಲ್ಲ. ಸಂಘಕ್ಕೆ ಸರ್ಕಾರದ ಅನುದಾನ ಬಂದಿಲ್ಲ ಎಂದರು.

ನಾನು ಹಣ ತಿಂದಿದ್ದರೆ ನನ್ನ ಮೇಲೆ ಪ್ರಕರಣ ದಾಖಲಿಸಬಹುದು. ಏಪ್ರಿಲ್ ಕೊನೆ ವೇಳೆಗೆ ಸರ್ವ ಸದಸ್ಯರ ಸಭೆ ಕರೆಯಲಿದ್ದು, ಅದಕ್ಕೆ ಸಂಘದ ಸದಸ್ಯರು ಬರಬಹುದು. ಅಲ್ಲಿ ಲೆಕ್ಕ ಕೊಡಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ನರೇಗಾ ಕೆಲಸಕ್ಕೆ ಹಾಜರಾತಿ ಕಡ್ಡಾಯ | ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ
ಕಟ್ಟಡ ಕಾಮಗಾರಿಗೆ ಎ.ನಾರಾಯಣಸ್ವಾಮಿ, ರಾಜ್ಯಸಭೆ ಸದಸ್ಯರಾದ ಚಂದ್ರಶೇಖರ ಅವರು ಅನುದಾನ ಕೊಟ್ಟಿದ್ದು, ನಿರ್ಮಿತಿ ಕೇಂದ್ರದ ಮೂಡಲಗಿರಿಯಪ್ಪ ಹಣ ಬಿಡಿಸಿದ್ದರು. ಅದನ್ನು ಜಿಲ್ಲಾಡಳಿತ ನೋಡಿಕೊಂಡು ಕೆಲಸ ಮಾಡಿಸಲಿದೆ. ಸಮುದಾಯ ಭವನಕ್ಕೆ ಇನ್ನೂ 6 ಕೋಟಿ ಹಣ ಬೇಕು. ಇದು ಸರ್ಕಾರದ ಜವಾಬ್ದಾರಿ ಆಗಿರುತ್ತದೆ. ಕಟ್ಟಡ ಕಾಮಗಾರಿ ಮುಗಿಯಲಿ ಎನ್ನುವ ಕಾರಣಕ್ಕೆ ಸಾಮಾನ್ಯ ಸಭೆ ಕರೆಯುವುದು ವಿಳಂಭ ಆಗಿತ್ತು ಎಂದು ಸ್ಪಷ್ಟಪಡಿಸಿದರು.
ನನಗೆ ಗೊತ್ತಿರುವ ಮಾಜಿ ಸಂಸದ ಎ.ನಾರಾಯಣಸ್ವಾಮಿ, ಹಾಲಿ ಸಂಸದ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ವೀರೇಂದ್ರ (ಪಪ್ಪಿ) ಅವರ ಬಳಿ ನನ್ನ ವಿರುದ್ಧ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಎಲ್ಲ ಆರೋಪಗಳಿಗೆ ಸಾಮಾನ್ಯ ಸಭೆಯಲ್ಲಿ ಉತ್ತರ ಕೊಡುತ್ತೇವೆ ಎಂದರು.
ಇದನ್ನೂ ಓದಿ: ಬೆಲ್ಟ್, ಪರ್ಸ್, ವ್ಯಾನಿಟಿ ಬ್ಯಾಗ್ ಸೇರಿ ಚರ್ಮದ ಉತ್ಪನ್ನಗಳಿಗೆ ರಿಯಾಯಿತಿ
ಸಭೆಯಲ್ಲಿ ಜಿಲ್ಲಾ ಯಾದವ (ಗೊಲ್ಲ) ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಆನಂದ, ಖಜಾಂಚಿ ಎಸ್.ಟಿ. ಫಲ್ಗುಣೇಶ್ವರ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಯಾದವ್, ನಿರ್ದೇಶಕರಾದ ಡಿ.ಜೆ.ಗೋವಿಂದಪ್ಪ, ರಂಗಸ್ವಾಮಿ, ಡಿ.ಪಿ.ಪ್ರಕಾಶ್, ಚಂದ್ರಪ್ಪ, ಟಿ.ತಿಮ್ಮಪ್ಪ ಇದ್ದರು.
