ಮುಖ್ಯ ಸುದ್ದಿ
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ | ಮೂರು ದಿನದ ಬಳಿಕ ಮತ್ತೆ ಹಾಜರಾದ ಮಳೆರಾಯ
CHITRADURGA NEWS | 25 MAY 2024
ಚಿತ್ರದುರ್ಗ: ಈ ವರ್ಷ ಉತ್ತಮ ಮಳೆಯಾಗುವ ಎಲ್ಲಾ ಸೂಚನೆಗಳು ಆರಂಭದಲ್ಲೇ ಗೋಚರಿಸುತ್ತಿವೆ.
ಕೃತಿಕಾ ಮಳೆ ಮನಸಾರೆ ಸುರಿದು ಜಿಲ್ಲೆಯನ್ನು ತಂಪಾಗಿಸಿದೆ. ಒಣಗಿ ಬಾಯಿ ಬಿಟ್ಟಿದ್ದ ಕೆರೆ, ಕಟ್ಟೆಗಳೆಲ್ಲಾ ನೀರು ತುಂಬಿವೆ. ವೇದಾವತಿ ನದಿ ಹರಿದಿದೆ. ವಾಣಿವಿಲಾಸ ಸಾಗರ ಜಲಾಶಯಕ್ಕೆ ಒಂದೂವರೆ ಟಿಎಂಸಿಗಿಂತ ಹೆಚ್ಚು ನೀರು ಬಂದಿದೆ.
ಇದನ್ನೂ ಓದಿ: ಬೆಸ್ಕಾ ಕಚೇರಿ ಸ್ಥಳಾಂತರ | ಇನ್ನೂ ವಿದ್ಯುತ್ ಬಿಲ್ ಕಟ್ಟಲು ಇಲ್ಲಿಗೆ ಬನ್ನಿ
ಅಡಿಕೆ ಬೆಳೆಗಾರರು ಟ್ಯಾಂಕರ್ ಮೂಲಕ ನೀರು ತಂದು ಸುರಿಯುತ್ತಿದ್ದರು. ಒಟ್ಟಾರೆ ಇಡೀ ಜಿಲ್ಲೆ ಭೀಕರ ಬರದ ದವಡೆಗೆ ಸಿಲುಕಿತ್ತು. ಜನ, ಜಾನುವಾರು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಆದರೆ, ಈಗ ಸುರಿದ ಒಂದೇ ಮಳೆ ಬರವನ್ನೇ ಮರೆಯಿಸಿದೆ. ಎಲ್ಲೆಲ್ಲೂ ನೀರು ಕಾಣಿಸುತ್ತಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಅನ್ನದಾತ ಸಂತಸದಿಂದ ಜಮೀನಿಗೆ ಕಾಲಿಟ್ಟಿದ್ದಾನೆ.
ಇದನ್ನೂ ಓದಿ: ಪೈ ಶೋ ರೂಂ ಬಳಿ ಕಾಣಿಸಿಕೊಂಡ ಪೈಥಾನ್ | ಮಾರುಕಟ್ಟೆಗೆ ಬಂದ 8 ಅಡಿ ಉದ್ದದ ಹೆಬ್ಬಾವು
ಮೇ.16 ರಿಂದ 22 ರವರೆಗೆ ಆರ್ಭಟಿಸಿದ ಮಳೆರಾಯ, ಮೂರು ದಿನ ಸಣ್ಣ ವಿರಾಮ ಕೊಟ್ಟು, ಮೇ.25 ರಾತ್ರಿ ವೇಳೆಗೆ ಆರ್ಭಟಿಸಿಕೊಂಡು ಬಂದಿದ್ದಾನೆ.
ಭಾರೀ ಗುಡುಗು, ಮಿಂಚು, ಸಿಡಿಲಿನೊಂಡಿಗೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ರಾತ್ರಿ 10.30ಕ್ಕೆ ಆರಂಭವಾದ ಮಳೆ ಸುಮಾರು ಒಂದು ತಾಸು ಸುರಿದಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ನೋಡಿ:
ಹೊಳಲ್ಕೆರೆ ತಾಲೂಕಿನ ರಾಮಗಿರಿಯಲ್ಲಿ 68 ಮಿ.ಮೀ ಮಳೆಯಾಗಿದ್ದು ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಹೊಳಲ್ಕೆರೆಯಲ್ಲಿ 59.6 ಮಿ.ಮೀ, ಚಿಕ್ಕಜಾಜೂರಿನಲ್ಲಿ 28.4 ಮಿ.ಮೀ, ಬಿ.ದುರ್ಗದಲ್ಲಿ 18.4 ಮಿ.ಮೀ, ಎಚ್.ಡಿಪುರದಲ್ಲಿ 48.6 ಮಿ.ಮೀ, ತಾಳ್ಯದಲಿ 10.2 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ: ರಾತ್ರಿ ಮಳೆಗೆ ಕೊಚ್ಚಿ ಹೋದ ರಸ್ತೆ | ಒಂದೇ ಮಳೆಗೆ ತುಂಬಿ ಕೋಡಿ ಹರಿದ ಕೆರೆ
ಚಳ್ಳಕೆರೆಯಲ್ಲಿ 50 ಮಿ.ಮೀ, ಪರಶುರಾಂಪುರದಲ್ಲಿ 36 ಮಿ.ಮೀ, ನಾಯಕನಹಟ್ಟಿ 65.6 ಮಿ.ಮೀ, ತಳುಕಿನಲ್ಲಿ 51.2 ಮಿ.ಮೀ, ಡಿ.ಮರಿಕುಂಟೆಯಲ್ಲಿ 41.2 ಮಿ.ಮೀ ಮಳೆಯಾಗಿದೆ.
ಹಿರಿಯೂರಿನಲ್ಲಿ 34.6 ಮಿ.ಮೀ, ಸೂಗೂರಿನಲ್ಲಿ 40.2 ಮಿ.ಮೀ, ಬಬ್ಬೂರಿನಲ್ಲಿ 46.6 ಮಿ.ಮೀ, ಈಶ್ವರಗೆರೆಯಲ್ಲಿ 38 ಮಿ.ಮೀ, ಇಕ್ಕನೂರಿನಲ್ಲಿ 41.4 ಮಿ.ಮೀ ಮಳೆ ಸುರಿದಿದೆ.
ಇದನ್ನೂ ಓದಿ: ಓಮಿನಿ-ಲಾರಿ ನಡುವೆ ಭೀಕರ ಅಪಘಾತ | ಚಿತ್ರದುರ್ಗ ಜಿಲ್ಲೆಯ ನಾಲ್ವರ ದುರ್ಮರಣ
ಹೊಸದುರ್ಗದಲ್ಲಿ 26.4 ಮಿ.ಮೀ, ಬಾಗೂರಿನಲ್ಲಿ 4.5 ಮಿ.ಮೀ, ಮಾಡದಕೆರೆಯಲ್ಲಿ 34.2 ಮಿ.ಮೀ, ಮತ್ತೋಡಿನಲ್ಲಿ 8.4 ಮಿ.ಮೀ, ಶ್ರೀರಾಂಪುರದಲ್ಲಿ 20.2 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮೂರು ಪಟ್ಟಣದಲ್ಲಿ 34 ಮಿ.ಮೀ, ರಾಯಾಪುರದಲ್ಲಿ 45 ಮಿ.ಮೀ, ಬಿ.ಜಿ.ಕೆರೆಯಲ್ಲಿ 38.4 ಮಿ.ಮೀ, ರಾಂಪುರದಲ್ಲಿ 16 ಮಿ.ಮೀ, ದೇವಸಮುದ್ರದಲ್ಲಿ 20.2 ಮಿ.ಮೀ ಮಳೆ ಬಂದಿದೆ.
ಇದನ್ನೂ ಓದಿ: ಅತಿಥಿ ಶಿಕ್ಷಕರು, ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನ
ಇನ್ನೂ ಚಿತ್ರದುರ್ಗ ನಗರ-1 ಮಾಪಕದಲ್ಲಿ 38.8 ಮಿ.ಮೀ, ಚಿತ್ರದುರ್ಗ-2 ರಲ್ಲಿ 44.9 ಮಿ.ಮೀ, ತುರುವನೂರು 26.4 ಮಿ.ಮೀ, ಹಿರೇಗುಂಟನೂರು 15.5 ಮಿ.ಮೀ, ಐನಹಳ್ಳಿ 29.4 ಮಿ.ಮೀ, ಭರಮಸಾಗರ 25.2 ಮಿ.ಮೀ ಹಾಗೂ ಸಿರಿಗೆರೆಯಲ್ಲಿ 43 ಮಿ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.