ಮುಖ್ಯ ಸುದ್ದಿ
Achievement; ಕೋಟೆ ವಾಯುವಿಹಾರಿಗಳ ಸಂಘದಿಂದ ಸಾಧಕರಿಗೆ ಸನ್ಮಾನ
CHITRADURGA NEWS | 25 AUGUST 2024
ಚಿತ್ರದುರ್ಗ: ಚಿತ್ರದುರ್ಗ ಕೋಟೆ ವಾಯುವಿಹಾರಿಗಳ ಸಂಘದ ವತಿಯಿಂದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸಾಧಕರಿಗೆ(Achievement) ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕ್ಲಿಕ್ ಮಾಡಿ ಓದಿ: Commitee: ಶರಣ ಸಂಸ್ಕøತಿ ಉತ್ಸವ ಸಮಿತಿ – 2024 | ಯಾರಿದ್ದಾರೆ ಈ ವರ್ಷದ ಕಮಿಟಿಯಲ್ಲಿ
ಈ ವೇಳೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ, ನಗರಸಭಾ ಸದಸ್ಯ ಹಾಗೂ ರಾಘವೇಂದ್ರ ವಿಧ್ಯಾ ಸಂಸ್ಥೆ ಕಾರ್ಯದರ್ಶಿ ಹೆಚ್.ಶ್ರೀನಿವಾಸ, ನಿವೃತ್ತ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನಚಾರ್, ಯೋಗ ಗುರು ರವಿ ಕೆ.ಅಂಬೇಕರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆರ್.ಸತ್ಯಣ್ಣ, ಸನ್ಮಾನ, ಗೌರವಗಳು ಸಾಧಕನಿಗೆ ಸ್ಪೂರ್ತಿ ಪ್ರೇರಣೆ ನೀಡುವುದರ ಜೊತೆಗೆ ಸನ್ಮಾನಿತ ವ್ಯಕ್ತಿಯ ವೈಯಕ್ತಿಕ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಹೆಚ್ಚಿಸುತ್ತವೆ, ಸಾಧಕರ ಸೇವೆ ನಿಂತ ನೀರಾಗಬಾರದು ಸೇವೆ ಹರಿಯುವ ನದಿಯಂತೆ ಸಾಗುತ್ತಿರಬೇಕು ಎಂದರು.
ತಾವು ಮಾಡಿರುವ ಅಲ್ಪಸೇವೆಗೆ ಚಿತ್ರದುರ್ಗದ ನಾಗರೀಕರು ತೋರಿಸುತ್ತಿರುವ ಪ್ರೀತಿಗೆ ನಾನು ಎಂದಿಗೂ ಚಿರ ಋಣಿಯಾಗಿದ್ದು ಇನ್ನು ಮುಂದೆಯೂ ಸಹ ಚಿತ್ರದುರ್ಗ ಕೋಟೆ ಅಭಿವೃದ್ಧಿ ಸೇರಿದಂತೆ ಸಮಾಜದ ಏಳಿಗೆಗಾಗಿ ತಮ್ಮಿಂದಾಗುವ ಹೆಚ್ಚಿನ ಸಾಮಾಜಿಕ ಸೇವೆಯನ್ನು ಮಾಡುವುದಾಗಿ ತಿಳಿಸಿದರು.
ಕ್ಲಿಕ್ ಮಾಡಿ ಓದಿ: Donation: ಶರಣ ಸಂಸ್ಕøತಿ ಉತ್ಸವಕ್ಕೆ ಯಾರು ಎಷ್ಟು ವಾಗ್ದಾನ ಮಾಡಿದ್ರು..?
ಶ್ರೀ ರಾಘವೇಂದ್ರ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಶ್ರೀನಿವಾಸ ಹೆಚ್ ಮಾತನಾಡಿ, ಚಿತ್ರದುರ್ಗ ಕೋಟೆ ಪ್ರವೇಶ ದ್ವಾರದಿಂದ ಕರವರ್ಥೇಶ್ವರ ದೇವಾಲಯದ ಕಡೆಗೆ ಹೋಗುವ ದಾರಿ ಮೊದಲು ಗಿಡಗಂಟೆಗಳು ಬೆಳೆದು ಯಾರೂ ಓಡಾಡದಂತಹ ಪರಿಸ್ಥಿತಿ ಇತ್ತು, ಯಾರೇ ಆಗಲಿ ಈ ರಸ್ತೆಯಲ್ಲಿ ಓಡಾಡಲು ಭಯಪಡುವಂತಿತ್ತು.
ಕೋಟೆ ವಾಯುವಿಹಾರಿಗಳ ಸಂಘ ಸ್ಥಾಪನೆಯಾದ ಬಳಿಕ ಹಲವಾರು ಮಹನೀಯರ ಹೋರಾಟದಿಂದ ಸರ್ಕಾರದ ಮೇಲೆ ಒತ್ತಡ ಹಾಕಿ ಈಗ ಉತ್ತಮ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡಿದ್ದು ಈಗ ಇಲ್ಲಿ ಬರುವ ಪ್ರವಾಸಿಗರೂ ಸೇರಿದಂತೆ ವಾಯು ವಿಹಾರಕ್ಕೆ ಬರುವವರು ರಾತ್ರಿ 10 ಗಂಟೆಯವರೆಗೂ ನಿರ್ಭಯವಾಗಿ ಓಡಾಡುವಂತಾಗಿದೆ, ಇದಕ್ಕೆ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷರಾದ ಆರ್. ಸತ್ಯಣ್ಣನವರು ಹೋರಾಟ ಪ್ರಮುಖವಾಗಿದೆ ಎಂದು ತಿಳಿಸಿದರು.
ಹಿರಿಯ ನಾಗರೀಕರಾದ ಕೂಬನಾಯಕ್ ಮಾತನಾಡಿದರು.
ಕನ್ನಡ ಉಪನ್ಯಾಸಕ ಚನ್ನಬಸಪ್ಪ ನಿರೂಪಿಸಿದರು, ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ನಾಗರಾಜ್ ಸ್ವಾಗತಿಸಿ ವಂದಿಸಿದರು.