ಚಳ್ಳಕೆರೆ
ತೋಟಕ್ಕೆ ಆಕಸ್ಮಿಕ ಬೆಂಕಿ | ಹಲವು ಮರ, ಗಿಡ ಬೆಂಕಿಗಾಹುತಿ
CHITRADURGA NEWS | 03 MAY 2024
ಚಳ್ಳಕೆರೆ: ಚಳ್ಳಕೆರೆ ತಾಲೂಕು ಪರಶುರಾಮಪುರ ಗ್ರಾಮದ ಹೊರವಲಯದ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದು, ಅಪಾರ ಪ್ರಮಾಣದ ಗಿಡ, ಮರಗಳು ಸುಟ್ಟು ನಷ್ಟವಾಗಿದೆ.
ಪರಶುರಾಮಪುರ-ಪಾವಗಡ ಮಾರ್ಗದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ರೈತ ಕೊಂಡ್ಲೇರ ಪರಮೇಶ್ವರಪ್ಪ ಅವರ ತೋಟಕ್ಕೆ ಶುಕ್ರವಾರ ಮಧ್ಯಾಹ್ನ ಬೆಂಕಿ ತಗುಲಿದ್ದು ಅಡಕೆ, ತೆಂಗು, ಮಾವಿನ ಮರಗಳು ಸುಟ್ಟಿವೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ ಬೆನ್ನಲ್ಲೆ ಮತ್ತೊಂದು ಚುನಾವಣೆ | ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ವೇಳಾಪಟ್ಟಿ ಪ್ರಕಟ
ಫಸಲಿಗೆ ಬಂದಿದ್ದ 14 ಹುಣಸೆ ಮರಗಳು, 8 ಮಾವಿನ ಮರಗಳು, 2 ನಿಂಬೆ ಮರ, 2 ತೆಂಗಿನ ಮರ ಸೇರಿದಂತೆ ಹಲವು ಸಸ್ಯಗಳಿಗೆ ಬೆಂಕಿ ತಗುಲಿ ಸುಮಾರು 2 ಲಕ್ಷ ರೂ. ನಷ್ಟವಾಗಿದೆ.
ಬೆಂಕಿ ತಗುಲಿದ್ದನ್ನು ಗಮನಿಸಿದ ಸ್ಥಳೀಯರು ಚಳ್ಳಕೆರೆ ಅಗ್ನಿಶಾಮಕ ಠಾಣೆಗೆ ತಕ್ಷಣ ಮಾಹಿತಿ ನೀಡಿದ್ದು, ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವಾಹನದೊಂದಿಗೆ ಸಕಾಲಕ್ಕೆ ಬಂದು ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಹೆಚ್ಚಿನ ಅನಾಹುತ ಹಾಗೂ ಹಾನಿ ತಪ್ಪಿದಂತಾಗಿದೆ.