ಕ್ರೈಂ ಸುದ್ದಿ
ಹೆದ್ದಾರಿಯಲ್ಲಿ ಭೀಕರ ಅಪಘಾತ | ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

CHITRADURGA NEWS | 24 FEBRUARY 2025
ಚಿತ್ರದುರ್ಗ: ಕೂಲಿ ಕೆಲಸಕ್ಕೆ ಕಾಪಿ ಎಸ್ಟೇಟ್ ಗೆ ಹೋಗಿದ್ದ ಕುಟುಂಬ ಶಿವರಾತ್ರಿ ಹಬ್ಬಕ್ಕಾಗಿ ಊರಿಗೆ ಬರುವಾಗಲೇ ಭೀಕರ ಅಪಘಾತ ಸಂಭವಿಸಿದೆ.
Also Read: Kannada Novel: 21. ದುಷ್ಟನಿಂದ ದೂರ ಹೋದವರು

ಹೆದ್ದಾರಿಯ ಒಂದು ಬದಿಯಿಂದ ಮತ್ತೊಂದು ಕಡೆಗೆ ದಾಟುತ್ತಿದ್ದ ಗುಂಪಿನ ನಡುವೆಯೇ ಕಾರೊಂದು ರಭಸವಾಗಿ ನುಗ್ಗಿದ್ದು, ಕಾರಿನ ರಭಸಕ್ಕೆ ಮಹಿಳೆ ಸುಮಾರು ಹತ್ತು ಅಡಿ ಮೇಲಕ್ಕೆ ಹಾರಿ, ಐವತ್ತು ಅಡಿಯಷ್ಟು ದೂರಕ್ಕೆ ಬಿದ್ದಿದ್ದಾರೆ.
ಭೀಕರ ಅಪಘಾತ ಮಾಡಿದ ವಾಹನದ ಚಾಲಕ ಸ್ವಲ್ಪವೂ ಮಾನವೀಯತೆ ತೋರದೆ, ಕಾರು ನಿಲ್ಲಿಸದೆ ಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನು ಕೂಡ್ಲಿಗಿ ತಾಲೂಕಿನ ಕೆ.ರಾಯಾಪುರ ಗ್ರಾಮದ ಅನಂತಮ್ಮ ಎಂದು ಗುರುತಿಸಲಾಗಿದೆ.
Also Read: ದಿನ ಭವಿಷ್ಯ | ಫೆಬ್ರವರಿ 24 | ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನುಕೂಲಕರ ವಾತಾವರಣ, ನಿರುದ್ಯೋಗಿಗಳಿಗೆ ಶುಭ ಸುದ್ದಿ
ಮೃತ ಮಹಿಳೆಯು ಕಳೆದ 10 ವರ್ಷಗಳಿಂದ ಕುಟುಂಬ ಸಮೇತರಾಗಿ ಸಕಲೇಶಪುರದ ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಶಿವರಾತ್ರಿ ಹಬ್ಬಕ್ಕಾಗಿ ಸ್ವಗ್ರಾಮ ರಾಯಾಪುರಕ್ಕೆ ತೆರಳುವಾಗ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ ಬಳಿ ಈ ರಸ್ತೆ ಅಪಘಾತ ನಡೆದಿದೆ.
ಭೀಕರ ಅಪಘಾತದ ವೀಡಿಯೋ ಇಲ್ಲಿದೆ👇
ಹೈವೇ ಬ್ರಿಡ್ಜ್ ಬಳಿ ಕೆಎಸ್ಆರ್ಟಿಸಿ ಬಸ್ ಇಳಿದು ರಾಂಪುರ ಗ್ರಾಮಕ್ಕೆ ಹೋಗಲು ಹೆದ್ದಾರಿ ದಾಟುತ್ತಿರುವಾಗ ಬಳ್ಳಾರಿಯಿಂದ ಚಳ್ಳಕೆರೆ ಕಡೆಗೆ ಹೋಗುತ್ತಿದ್ದ ಅಪರಿಚಿತ ಕಾರು ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಮಹಿಳೆಯ ತಲೆಗೆ ಮತ್ತು ಕಾಲಿಗೆ ತಿವ್ರು ಪೆಟ್ಟಾಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ರಾಂಪುರ ಪಿಎಸ್ಐ ಮಹೇಶ ಲಕ್ಷ್ಮಣ್ ಹೊಸಪೇಟೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Also Read: ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರ ಹಲ್ಲೆ ಖಂಡಿಸಿ ಕರುನಾಡ ವಿಜಯಸೇನೆ ಪ್ರತಿಭಟನೆ
ಹೆದ್ದಾರಿಗಳಲ್ಲಿ ವಾಹನಗಳು ವಿಪರೀತ ವೇಗದಲ್ಲಿ ಸಂಚರಿಸುತ್ತವೆ. ರಾತ್ರಿ ಅಥವಾ ನಸುಕಿನಲ್ಲಿ ಜನ ಸಂಚಾರ ಮಾಡುವುದು ತಕ್ಷಣಕ್ಕೆ ಚಾಲಕನಿಗೆ ಕಾಣಿಸದೆ ಅಮಾಯಕ ಜೀವಗಳು ಬಲಿಯಾಗುತ್ತವೆ. ಈ ನಿಟ್ಟಿನಲ್ಲಿ ಹೆದ್ದಾರಿ ಅಕ್ಕಪಕ್ಕದ ಉರುಗಳವರು, ಪ್ರಯಾಣಿಕರು ಎಚ್ಚರಿಕೆ ವಹಿಸಬೇಕಿದೆ.
