ಮುಖ್ಯ ಸುದ್ದಿ
ನವರಾತ್ರಿ ವಿಶೇಷ | ಉಚ್ಚೆಂಗೆಲ್ಲಮ್ಮ ದೇವಸ್ಥಾನದಲ್ಲಿ ಸೃಷ್ಟಿಯಾಗಿದೆ ಕಲ್ಪನೆಗೆ ಮೀರಿದ ಲೋಕ | ದೃಶ್ಯ ವೈಭವವನ್ನು ಇಂದೇ ಕಣ್ತುಂಬಿಕೊಳ್ಳಿ..

ಚಿತ್ರದುರ್ಗ ನ್ಯೂಸ್.ಕಾಂ: ನೀವೇನಾದರೂ ಈ ನವರಾತ್ರಿಯ ದಸರಾ ಮಹೋತ್ಸವದಲ್ಲಿ ಚಿತ್ರದುರ್ಗ ನಗರದಲ್ಲಿರುವ ರಾಜಾ ಉತ್ಸವಾಂಭ ಉಚ್ಚೆಂಗೆಲ್ಲಮ್ಮ ದೇವಸ್ಥಾನಕ್ಕೆ ಹೋಗಿಲ್ಲ ಅಂದ್ರೆ ಅದ್ಬುತವಾದ ದೃಶ್ಯ ವೈಭವವನ್ನೇ ಮಿಸ್ ಮಾಡಿಕೊಳ್ಳುತ್ತೀರಿ.
ತಡ ಯಾಕೆ, ಇವತ್ತು ಹೇಗಿದ್ರು ಶುಕ್ರವಾರ, ತಾಯಿ ಉಚ್ಚೆಂಗೆಲ್ಲಮ್ಮನಿಗೆ ವಿಶೇಷ ಅಲಂಕಾರ ಮಾಡಿದ್ದಾರೆ. ಸ್ನಾನ ಮುಗಿಸಿ ಸೀದಾ ದೇವಸ್ಥಾನಕ್ಕೆ ಹೊರಡಿ.

ತಾಯಿ ಉಚ್ಚೆಂಗೆಲ್ಲಮ್ಮನಿಗೆ ವಿಶೇಷ ಅಲಂಕಾರ
ಯಾಕೆ, ಅಂಥಾ ವಿಶೇಷ ಏನು ಅಂತಿರಾ. ಮೊದಲೇ ಐತಿಹಾಸಿಕವಾಗಿರುವ ಶ್ರೀ ರಾಜಾ ಉತ್ಸವಾಂಭ ಉಚ್ಚೆಂಗೆಲ್ಲಮ್ಮ ದೇವಿಯ ದೇವಸ್ಥಾನ ಈಗ ದಟ್ಟ ಕಾಡಾಗಿ ಪರಿವರ್ತನೆಯಾಗಿದೆ. ಈ ಕಾಡಿನೊಳಗೆ ಪಾಳುಬಿದ್ದ ಗುಹೆ, ಆಲದ ಮರದ ಬಿಳಲುಗಳು ನೇರವಾಗಿ ದೇವಸ್ಥಾನಕ್ಕೆ ಇಳಿದಿರುವುದು, ಬಣ್ಣ ಬಣ್ಣದ ಗಿಳಿ, ಮೊಲದ ಮರಿಗಳು, ದೊಡ್ಡ ಗಾತ್ರದ ಓತಿ ಅಬ್ಬಾ ಅದೆಂಥಾ ಪ್ಯಾಂಟಸಿ ಇದೆ ಗೊತ್ತಾ, ಇದನ್ನೆಲ್ಲಾ ನೋಡಿಯೇ ಕಣ್ತುಂಬಿಕೊಳ್ಳಬೇಕು.
ಇದನ್ನೂ ಓದಿ: ಮೈಸೂರು ದಸರಾಕ್ಕೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲದ ಟ್ಯಾಬ್ಲೋ
ಚಿತ್ರದುರ್ಗ ಜಿಲ್ಲೆ, ಬಯಲು ಸೀಮೆ, ಜೊತೆಗೆ ಕೋಟೆನಾಡು ಇಂಥದ್ದೊಂದು ನಗರದ ಒಂದು ಬದಿಯಲ್ಲಿ ಉಚ್ಚೆಂಗೆಲ್ಲಮ್ಮನ ದೇವಸ್ಥಾನವಿದೆ. ಈ ದೇಗುಲದಲ್ಲಿ ದಟ್ಟ ಕಾಡು, ಪಾಳುಬಿದ್ದ ಗುಹೆಯ ಆಕಾರದಲ್ಲಿರುವ ಗುಡಿ, ಬೃಹದಾಕಾರವಾಗಿ ಬೆಳೆದು ನಿಂತಿರುವ ಆಲದ ಮರ, ಮರದ ಬಿಳಲುಗಳ ತುಂಬೆಲ್ಲಾ ಹಕ್ಕಿ ಪಕ್ಷಿಗಳು ಕಲ್ಪನೆಗೆ ಮೀರಿದ ಲೋಕವೇ ಇಲ್ಲಿ ಸೃಷ್ಟಿಯಾಗಿದೆ.
ನವರಾತ್ರಿ ದಸರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿದ್ದು, ದೇವಸ್ಥಾನ ಪ್ರವೇಶಿಸಿದಾಕ್ಷಣ ಯಾವುದೇ ದಟ್ಟ ಕಾಡು, ಕಾಡಿನಲ್ಲಿ ಪಾಳು ಬಿದ್ದ ಗುಡಿಯನ್ನು ಪ್ರವೇಶಿಸಿದ ಅನುಭವವಾಗುತ್ತಿದೆ.

ತಾಯಿ ಉಚ್ಚೆಂಗೆಲ್ಲಮ್ಮನಿಗೆ ವಿಶೇಷ ಅಲಂಕಾರ
ದೇವಸ್ಥಾನದ ಅರ್ಚಕ ಪಿ.ಎಸ್.ಅಭಿಷೇಕ್ ಇಂಥದ್ದೊಂದು ವಿಶೇಷ ಪ್ರಯತ್ನ ಮಾಡಿದ್ದು, ಪಾಳುಬಿದ್ದ ಗುಡಿಯ ಸುತ್ತಾಮುತ್ತಾ ಆಲದ ಬಿಳಲುಗಳಲ್ಲಿ ವಿದೇಶಿ ಹಕ್ಕಿಗಳ ಚಿಲಿಪಿಲಿ ಕೇಳಿ ಬರುತ್ತಿದೆ. ವಿದೇಶಿ ಹಕ್ಕಿಗಳನ್ನು ಸಾಕುವ ಹವ್ಯಾಸ ಹೊಂದಿರುವ ಅಭಿಷೇಕ್ ನವರಾತ್ರಿ ಉತ್ಸವಕ್ಕೆ ಬೇರೆಯದ್ದೇ ಮೆರುಗು ನೀಡಿದ್ದಾರೆ.
ವಿದೇಶಿ ತಳಿಯ ಪಾರಿವಾಳ, ವಿದೇಶಿ ಗಿಳಿ ತಳಿಗಳಾದ ಇಗ್ವಾನ್, ಕ್ಯಾನ್ಯುರ್ಸ್, ಲಾರಿಕೇಡ್ಸ್ ಪಕ್ಷಿಗಳು ವಿಶೇಷ ಆಕರ್ಷಣೆಯಾಗಿವೆ. ಇದರೊಟ್ಟಿಗೆ ಮೊಲದ ಮರಿಗಳು ವಿಶೇಷ ಆಕರ್ಷಣೆಯಾಗಿವೆ.
ಇನ್ನೂ ಕಾಡಿನಲ್ಲಿ ಕತ್ತು ಹಾಕುತ್ತಿರುವ ಓತಿಯ ಮಾದರಿ ಆಕರ್ಷಕವಾಗಿದೆ. ದೇವಿಯ ಮುಂಭಾಗದಲ್ಲಿ ಬಾಯ್ತೆರೆದು ಕುಳಿತಿರುವ ಸಿಂಹಗಳು, ಅತ್ತಿಂದಿತ್ತ ಬಿಳಲುಗಳಿಂದ ಬಿಳುಗಳಿಗೆ ಹಾರುವ ಪಕ್ಷಿಗಳು ಗಮನ ಸೆಳೆಯುತ್ತವೆ.

ರಾಜಾ ಉತ್ಸವಾಂಭ ಉಚ್ಚೆಂಗೆಲ್ಲಮ್ಮ
ಒಟ್ಟಾರೆ ನಗರ ಪ್ರದೇಶದಲ್ಲಿ ಮಲೆನಾಡಿನ ಮಾದರಿಯ ಕಾಡು, ಪಾಳು ಗುಡಿ ಈ ವರ್ಷದ ದಸರೆಗೆ ವಿಶೇಷ ಆಕರ್ಷಣೆಯಾಗಿದ್ದು, ಅ.24 ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ.

ರಾಜಾ ಉತ್ಸವಾಂಭ ಉಚ್ಚೆಂಗೆಲ್ಲಮ್ಮ ದೇವಸ್ಥಾನ
ನಮ್ಮದೊಂದು ಮನವಿಯಿದೆ. ಯಾರೆಲ್ಲಾ ಈ ಸುದ್ದಿ ಓದಿ, ದೇವಸ್ಥಾನಕ್ಕೆ ಹೋಗಿ ತಾಯಿಯ ದರ್ಶನ ಮಾಡುತ್ತೀರೋ, ಸುದ್ದಿಯ ಕೆಳಗಿರುವ ಕಮೆಂಟ್ ಬಾಕ್ಸ್ ಹಾಗೂ ಚಿತ್ರದುರ್ಗ ನ್ಯೂಸ್ ಫೇಸ್‍ಬುಕ್ ಪೇಜ್‍ನ (https://www.facebook.com/chitradurganews?mibextid=ZbWKwL) ಸುದ್ದಿಯ ಕೆಳಗಿರುವ ಕಮೆಂಟ್ ವಿಭಾಗದಲ್ಲಿ ನಿಮ್ಮ ಅಲ್ಲಿ ತೆಗೆದ ಸೆಲ್ಫಿ ಅಪ್ಲೋಡ್ ಮಾಡೋದನ್ನು ಮರೆಯಬೇಡಿ..
