ಮುಖ್ಯ ಸುದ್ದಿ
Sirigere Matha: ಸಿರಿಗೆರೆ ಮಠದ ಟ್ರಸ್ಟ್ ಸಲಹಾ ಸಮಿತಿ ಪಟ್ಟಿ ಬಹಿರಂಗ | 20 ವರ್ಷಗಳ ಹಿಂದಿನ ದಾಖಲೆ ಮಠದ ವೆಬ್‍ಸೈಟ್‍ನಲ್ಲಿ ಪ್ರಕಟ
CHITRADURGA NEWS | 11 AUGUST 2024
ಚಿತ್ರದುರ್ಗ: ಸಿರಿಗೆರೆ ತರಳಬಾಳು ಬೃಹನ್ಮಠದ ಟ್ರಸ್ಟ್ ಡೀಡ್ ಅನ್ನು ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಯಾರಿಗೂ ಗೊತ್ತಾಗದಂತೆ ಏಕವ್ಯಕ್ತಿ ಟ್ರಸ್ಟ್ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಮಠದ ವೆಬ್‍ಸೈಟ್‍ನಲ್ಲಿ ದಾಖಲೆ ಸಮೇತ ಸ್ಪಷ್ಟನೆ ನೀಡಲಾಗಿದೆ.
ಭಾನುವಾರ ತಡರಾತ್ರಿವರೆಗೆ ತರಳಬಾಳು ಶ್ರೀಗಳು ಮಠದ ಆದಾಯ ತೆರಿಗೆಯ ಸಂಬಂಧವಾಗಿ ಹಲವು ಹಳೆಯ ದಾಖಲೆಗಳನ್ನು ಸುಧೀರ್ಘ ಅವಧಿವರೆಗೆ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಸಿರಿಗೆರೆ ತರಳಬಾಳು ಮಠಕ್ಕೆ ಬೈಲಾ ಇಲ್ಲ | ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಈ ವೇಳೆ 2004 ನವೆಂಬರ್ 5 ರಂದು ಅಂದರೆ 20 ವರ್ಷಗಳ ಹಿಂದೆ ತೆರಿಗೆ ವಿನಾಯಿತಿ ನವೀಕರಿಸಲು ಕೋಲ್ಕತ್ತಾದ ಡೈರಕ್ಟರ್ ಜನರಲ್ ಅವರಿಗೆ ಶ್ರೀಗಳು ಬರೆದಿರುವ ಅಧಿಕೃತ ಪತ್ರ ಲಭ್ಯವಾಗಿದೆ. ಪತ್ರದ ಜೊತೆಗೆ ಅನೇಕ ಅಡಕಗಳನು ಲಗತ್ತಿಸಿದ್ದಾರೆ.
ಈ ಕಡತದಲ್ಲಿ ಮಠದ ಸೋಲೋ ಟ್ರಸ್ಟೀ ಆಗಿರುವ ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಲಹೆ ನೀಡಲು ಹತ್ತು ಜನರ ಸಲಹಾ ಸಮಿತಿಯ ಪಟ್ಟಿಯೂ ಲಭ್ಯವಾಗಿದೆ.
ಇದನ್ನೂ ಓದಿ: ದಾವಣಗೆರೆ ಸಭೆಯಲ್ಲಿದ್ದ ಸ್ವಾರ್ಥಿಗಳನ್ನು ಮಠದಿಂದ ಬಹಿಷ್ಕರಿಸಿ | ಸಿರಿಗೆರೆ ಮಠದ ಭಕ್ತರ ಒಕ್ಕೊರಲ ಒತ್ತಾಯ
ಈ ಹತ್ತು ಜನರಲ್ಲಿ ದಾವಣಗೆರೆಯ ಅಪೂರ್ವ ಹೋಟೆಲ್ ಮಾಲಿಕರಾದ ಅಣಬೇರು ರಾಜಣ್ಣ, ಹಿರೇಕೆರೂರಿನ ಎಸ್.ಎಸ್.ಪಾಟೀಲ್, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ದಾವಣಗೆರೆಯ ಕೆ.ಆರ್.ಜಯದೇವಪ್ಪ ಸೇರಿದಂತೆ ಹಲವರ ಹೆಸರುಗಳಿವೆ ಎನ್ನುವ ದಾಖಲೆ ವೆಬ್‍ಸೈಟಿನಲ್ಲಿದೆ.
ಮಠದ ಟ್ರಸ್ಟ್ ಡೀಡ್ ಅನ್ನು ಯಾರಿಗೂ ಗೊತ್ತಾಗದಂತೆ ರಿಜಿಸ್ಟರ್ ಮಾಡಿಸಿಕೊಂಡು ಕಳೆದ 35 ವರ್ಷಗಳಿಂದ ಬಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಮಠ, ಸಂಘ ಮತ್ತು ವಿದ್ಯಾಸಂಸ್ಥೆಯ ವಿರುದ್ಧ ಚಿತ್ರದುರ್ಗ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಘನತೆಗೆ ಧಕ್ಕೆ ಬರುವಂತೆ ಮಾಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಪುರಾವೆ ಬೇಕೆ ಎಂದು ಬೃಹನ್ಮಠದ ಕಾರ್ಯದರ್ಶಿ ಪ್ರಶ್ನಿಸಿದ್ದಾರೆ.
ಶ್ರೀಗಳ ವೈಯಕ್ತಿಕ ಆಸ್ತಿಯೂ ಮಠಕ್ಕೆ ಸೇರಿದ್ದು
ಶ್ರೀಗಳು ಲಗತ್ತಿಸಿರುವ ದಾಖಲೆಗಳಲ್ಲಿ ಜಗದ್ಗುರುಗಳವರು ತಮ್ಮ ವೈಯಕ್ತಿಕ ಹೆಸರಿನಲ್ಲಿರುವ ಆಸ್ತಿಪಾಸ್ತಿ, ಹಣ ಎಲ್ಲವೂ ಮಠಕ್ಕೆ ಸೇರಿದ್ದು ಎಂದು, ತಮ್ಮ ಸ್ವಂತದ್ದು ಅಲ್ಲವೆಂದು ಲೆಟರ್‍ಹೆಡ್‍ನಲ್ಲಿ ಬರೆದು ಸಹಿ ಮಾಡಿರುವ ಘೋಷಣಾ ಪತ್ರವನ್ನೂ ಸಾರ್ವಜನಿಕಗೊಳಿಸಿದ್ದು, ಇದನ್ನೂ ಭಕ್ತರು ಮನಗಾಬಹುದಾಗಿದೆ ಎಂದಿದ್ದಾರೆ.
ಮಠದ ವೆಬ್‍ಸೈಟ್ ಲಿಂಕ್ ಇಲ್ಲಿದೆ: https://news.taralabalu.in/news.php?tp=2605