Connect with us

    ಗೋಮೂತ್ರದ ಗುಂಡಿಯಲ್ಲಿ ತಂದೆ ಮಗನ ಧಾರುಣ ಅಂತ್ಯ

    ಮಹಾಲಿಂಗಪ್ಪ ಹಾಗೂ ಅವರ ಪುತ್ರ ಪೃಥ್ವಿ

    ಕ್ರೈಂ ಸುದ್ದಿ

    ಗೋಮೂತ್ರದ ಗುಂಡಿಯಲ್ಲಿ ತಂದೆ ಮಗನ ಧಾರುಣ ಅಂತ್ಯ

    ಚಿತ್ರದುರ್ಗ ನ್ಯೂಸ್.ಕಾಂ: ಗೋವುಗಳ ಗಂಜಲು ಸಂಗ್ರಹಿಸಲು ತೋಡಿದ್ದ ಗುಂಡಿಗೆ ಬಿದ್ದು ಅಪ್ಪ ಮಗ ಇಬ್ಬರೂ ಮೃತಪಟ್ಟಿರುವ ಧಾರುಣ ಘಟನೆ ಹಿರಿಯೂರು ತಾಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹಿರಿಯೂರು ತಾಲೂಕು ಗೌಡನಹಳ್ಳಿ ಗ್ರಾಮದ 52 ವರ್ಷದ ಮಹಾಲಿಂಗಪ್ಪ ಹಾಗೂ ಅವರ ಪುತ್ರ 23 ವರ್ಷದ ಪೃಥ್ವಿ ಗಂಜಳದ ಗುಂಡಿಗೆ ಸಿಲುಕಿ ಮೃತಪಟ್ಟವರು.

    ಅಡಿಕೆ ಗಿಡಗಳಿಗೆ ಸಿಂಪರಣೆ ಮಾಡುವ ಉದ್ದೇಶದಿಂದ ತೋಟದಲ್ಲಿ ಸುಮಾರು 8 ಅಡಿ ಆಳದ ಗುಂಡಿ ತೆಗೆದು, ಅದರಲ್ಲಿ ಪ್ರತಿ ದಿನ ಹಸುಗಳ ಗಂಜಳವನ್ನು ಸುರಿಯುತ್ತಿದ್ದರು.

    ಇದನ್ನೂ ಓದಿ: ಚಳ್ಳಕೆರೆ ತಾಲೂಕಿನಲ್ಲಿ ಬೆಳೆವಿಮೆ ಅವ್ಯವಹಾರ | ಸಿಓಡಿ ತನಿಖೆಗೆ ಶಾಸಕ ರಘುಮೂರ್ತಿ ಆಗ್ರಹ

    ಗುರುವಾರ ಮಧ್ಯಾಹ್ನ ಮಹಾಲಿಂಗಪ್ಪ ಆಕಸ್ಮಿಕವಾಗಿ ಈ ಗುಂಡಿಗೆ ಬಿದ್ದಿದ್ದಾರೆ. ಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಅಪ್ಪನನ್ನು ರಕ್ಷಣೆ ಮಾಡಲು ಮಗ ಪೃಥ್ವಿ ಕೂಡಾ ಗುಂಡಿಗೆ ಇಳಿದಿದ್ದಾನೆ. ಆದರೆ, ಗುಂಡಿಯಿಂದ ಹೊರಬರಲಾರದೆ ಇಬ್ಬರೂ ಮೃತಪಟ್ಟಿದ್ದಾರೆ.

    ಅಪ್ಪ ಮತ್ತು ಮಗ ಇಬ್ಬರೂ ಒಂದೇ ಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನೆಯನ್ನು ಕೇಳಿಯೇ ಹಿರಿಯೂರು ತಾಲೂಕು ಮುಮ್ಮಲ ಮರುಗಿದೆ. ಗೌಡನಹಳ್ಳಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

    ಘಟನೆ ನಡೆದ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹಗಳಿದ್ದ ಹಿರಿಯೂರಿನ ಸರ್ಕಾರ ಆಸ್ಪತ್ರೆಯ ಶವಾಗಾರಕ್ಕೆ ತಹಶೀಲ್ದಾರ್ ರಾಜೇಶ್‍ಕುಮಾರ್ ಭೇಟಿ ನೀಡಿದ್ದಾರೆ.

    ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top