Connect with us

ಶ್ರೀ ರಾಜಾ ಉತ್ಸವಾಂಭ ಉಚ್ಚಂಗೆಲ್ಲಮ್ಮ ದೇವಿಗೆ ಬಂಗಾರದ ಮುಖಪದ್ಮ

ಶ್ರೀ ರಾಜಾ ಉತ್ಸವಾಂಭ ಉಚ್ಚಂಗೆಮ್ಮಲ್ಲ ದೇವಿ

ಮುಖ್ಯ ಸುದ್ದಿ

ಶ್ರೀ ರಾಜಾ ಉತ್ಸವಾಂಭ ಉಚ್ಚಂಗೆಲ್ಲಮ್ಮ ದೇವಿಗೆ ಬಂಗಾರದ ಮುಖಪದ್ಮ

CHITRADURGA NEWS | 14 MAY 2014

ಚಿತ್ರದುರ್ಗ: ಕೋಟೆನಾಡಿನ ಪ್ರಮುಖ ಶಕ್ತಿ ದೇವತೆ ನಗರದ ದೊಡ್ಡಪೇಟೆಯಲ್ಲಿರುವ ಶ್ರೀ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯ ಬಂಗಾರ ಲೇಪಿತ ನೂತನ ಬೆಳ್ಳಿಯ ಮುಖಪದ್ಮವನ್ನು ಮಂಗಳವಾರ ಲೋಕಾರ್ಪಣೆ ಮಾಡಲಾಯಿತು.

ಮಂಗಳವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ 4 ಗಂಟೆಯಿಂದ ನೂತನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ಮಂತ್ರ, ಘೋಷಗಳೊಂದಿಗೆ ಶಾಸ್ತ್ರೋಕ್ತವಾಗಿ ನೂತನ ವಿಗ್ರಹಕ್ಕೆ ಜೀವ ತುಂಬಲಾಯಿತು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ವಧು-ವರರ ಸಮಾವೇಶ | ಸರ್ವಧರ್ಮಿಯ ವಧು, ವರರು ಭಾಗವಹಿಸಲು ಅವಕಾಶ

ನೂತನ ವಿಗ್ರಹಕ್ಕೆ ಹೊಂಬಾಳೆ, ಗುಲಾಬಿ, ಮಲ್ಲಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬಳಿಕ ಅಲಂಕೃತ ಪಲ್ಲಕ್ಕಿಯನ್ನು ನೂತನ ವಿಗ್ರಹವನ್ನು ಪ್ರತಿಷ್ಠಾಪಿಸಿ, ಮೆರವಣಿಗೆ ಮೂಲಕ ಬುರುಜನಹಟ್ಟಿಯಲ್ಲಿನ ಉಚ್ಚಂಗಿ ಹೊಂಡ ಎಂದೇ ಕರೆಯುವ ಸಿಹಿ ನೀರು ಹೊಂಡಕ್ಕೆ ಕರೆದೊಯ್ದು ಗಂಗಾ ಪೂಜೆ ನೆರವೇರಿಸಲಾಯಿತು.

ನೆರೆದಿದ್ದ ಭಕ್ತರಿಂದ ಉದೋ ಉದೋ ಎಂಬ ಉದ್ಘಾರ ಘೋಷಗಳು ಮೊಳಗಿದವು. ಅಲ್ಲಿಂದ ಉರುಮೆ, ಡೊಳ್ಳು ವಾದ್ಯಗಳೊಂದಿಗೆ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಸಲಾಯಿತು.

ಇದನ್ನೂ ಓದಿ: ತಪ್ಪಿದ ಭಾರೀ ಅನಾಹುತ | 49 ಪ್ರಯಾಣಿಕರ ಜೀವ ಉಳಿಸಿದ ಐರಾವತ ಬಸ್ ಚಾಲಕ 

ಸುಮಾರು 25 ಮಹಿಳೆಯರು ಕುಂಭ ಹೊತ್ತು ಸಾಗಿದರು. ಮಾಳಪ್ಪನಹಟ್ಟಿ, ಬುರುಜನಹಟ್ಟಿ ಸೇರಿದಂತೆ ಮತ್ತಿತರ ಭಾಗಗಳಿಂದ ಭಕ್ತರು ಪಾಲ್ಗೊಂಡಿದ್ದರು.

ಬಂಗಾರ ಲೇಪಿತ ನೂತನ ಬೆಳ್ಳಿ ಮುಖಪದ್ಮ, ಆಭರಣಗಳು:

ಭಕ್ತರ ಸಹಕಾರದಿಂದ ದೇವಿಯ ಬೆಳ್ಳಿಯ ಹೊಸ ಮುಖ ಪದ್ಮ, ಕಿರೀಟ, ಕತ್ತಿ, ಛತ್ರಿ, ಸೊಂಟದ ಪಟ್ಟಿ, ದೇವಿಯ ತಲೆಯ ಮೇಲಿನ ಏಳು ಹೆಡೆಯ ಸರ್ಪ, ದೇವಿಯ ಕೊರಳಿನ ರುಂಡ ಮಾಲೆಗಳು ಸೇರಿದಂತೆ ಮತ್ತಿತರ ಬೆಳ್ಳಿಯ ಆಭರಣಗಳನ್ನು ಹೊಸದಾಗಿ ಮಾಡಿಸಲಾಗಿದ್ದು, ಆಭರಣಗಳ ತಯಾರಿಕೆ ಜವಾಬ್ದಾರಿ ಹೊತ್ತಿದ್ದ ಶಿಲ್ಪಿಗಳು ಸೋಮವಾರ ದೇವಸ್ಥಾನಕ್ಕೆ ಹಸ್ತಾಂತರಿಸಿದರು.

ಇದನ್ನೂ ಓದಿ: ಕೋಟೆನಾಡಲ್ಲಿ ಮದಕರಿ ನಾಯಕರ ಪುಣ್ಯ ಸ್ಮರಣೆ | ಸರಳ ಆಚರಣೆಗೆ ತೀರ್ಮಾನ ಬಿ.ಕಾಂತರಾಜ್

ಮಂಗಳವಾರ ತಡರಾತ್ರಿ ದೇವಿಯ ಜಾತ್ರಾ ಮಹೋತ್ಸವದ ಸಾರು ಹಾಕಲಾಗಿದ್ದು, ಮೇ.28 ರವರೆಗೆ ಜಾತ್ರೆ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಗರ್ಭಗುಡಿಯ ಮೂರ್ತಿಗೆ ಮಂಗಳವಾರ ವಿಶೇಷ ಅಲಂಕಾರ ಮಾಡಲಾಗಿತ್ತು.

ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯಲ್ಲಿ ನಿನ್ನೆ ಸುರಿದ ಮಳೆ ವಿವರ | ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ ನೋಡಿ..

ಭಕ್ತರು ತನು, ಮನ, ಧನದೊಂದಿಗೆ ದೇವಿಯ ಜಾತ್ರಾ ಮಹೋತ್ಸವಕ್ಕೆ ಸಹಕರಿಸಬೇಕು ಎಂದು ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version