ಮುಖ್ಯ ಸುದ್ದಿ
RCB ಗೆಲುವಿಗಾಗಿ ಅಭಿಮಾನಿಯಿಂದ ಸೈಕಲ್ ಯಾತ್ರೆ


CHITRADURGA NEWS | 22 MAY 2025
ಚಿತ್ರದುರ್ಗ: ಈ ಸಲ ಕಪ್ ನಮ್ದೆ ಎನ್ನುತ್ತಾ ಐಪಿಎಲ್ ನಲ್ಲಿ ಆರ್‌ಸಿಬಿ ಪ್ರತಿ ಟೂರ್ನಿಯಲ್ಲೂ ಅಭಿಮಾನಿಗಳನ್ನು ಸಂಪಾದಿಸುತ್ತಾ ಬರುತ್ತಿದೆ. ಈ ಬಾರಿ ಆರ್‌ಸಿಬಿ ಫೈನಲ್ ತಲುಪಿದ್ದು, ಕಪ್ ಗೆಲ್ಲಲಿ ಎಂಬ ಉದ್ದೇಶದಿಂದ ಅಭಿಮಾನಿಯೊಬ್ಬ ಬೆಂಗಳೂರಿನಿಂದ ಅಂಜನಾದ್ರಿಗೆ ಸೈಕಲ್ ಯಾತ್ರೆ ಹೊರಟಿದ್ದಾನೆ.
Also Read: ಖಾಸಗಿ ಶಾಲೆ ಸಂಸ್ಥೆಗಳು ಸರ್ಕಾರದ ನಿಯಮ ಪಾಲನೆ ಕಡ್ಡಾಯ | ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ | ಡಿಸಿ
ಬೆಂಗಳೂರಿನಿಂದ ಬರೋಬ್ಬರಿ 430 ಕಿ.ಮೀ ದೂರದಲ್ಲಿರುವ ಹನುಮಂತನ ಜನ್ಮಸ್ಥಾನ ಅಂಜನಾದ್ರಿ ಪರ್ವತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿ ವೈಟ್‌ಫೀಲ್ಡ್‌ನ ನಾಗರಾಜ್ ಸೈಕಲ್ ಯಾತ್ರೆ ಹೊರಟಿದ್ದಾನೆ.
ಕಳೆದ ನಾಲ್ಕು ದಿನಗಳಲ್ಲಿ 260 ಕಿ.ಮೀ ಸಂಚರಿಸಿ ಚಿತ್ರದುರ್ಗ ತಲುಪಿದ್ದು, ಇನ್ನೂ 170 ಕಿ.ಮೀ ಕ್ರಮಿಸಿದರೆ ಅಂಜನಾದ್ರಿ ತಲುಪಲಿದ್ದಾರೆ.
ಸೈಕಲ್‌ನ ಹಿಂಭಾಗಕ್ಕೆ ಆರ್‌ಸಿಬಿ ಧ್ವಜ ಕಟ್ಟಿಕೊಂಡು, ಆರ್‌ಸಿಬಿ ಟಿಶರ್ಟ್ ಧರಿಸಿ, ಹೆಗಲಿಗೊಂದು ಬ್ಯಾಗು ಹಾಕಿಕೊಂಡು ಹೈವೆ ಪಕ್ಕದಲ್ಲಿ ಸಾಗುತ್ತಿದ್ದರೆ ಆರ್‌ಸಿಬಿ ಹಾಗೂ ಕ್ರಿಕೇಟ್ ಅಭಿಮಾನಿಗಳೆಲ್ಲಾ ಶುಭ ಕೋರಿ ಮಾತಾಡಿಸಿ, ಸಿಲ್ಫಿ ತೆಗೆದುಕೊಂಡು ಕಳಸುತ್ತಿರುವ ದೃಶ್ಯ ಚಿತ್ರದುರ್ಗದಲ್ಲಿ ಕಂಡು ಬಂದಿತು.
Also Read: ಜನೌಷಧ ಕೇಂದ್ರ ಮುಚ್ಚುವುದು ರಾಜ್ಯ ಸರ್ಕಾರದ ಮೂರ್ಖತನ | ಗೋವಿಂದ ಕಾರಜೋಳ
ಈ ವೇಳೆ ಮಾತನಾಡಿರುವ ನಾಗರಾಜ್, ಆರ್‌ಸಿಬಿ ತಂಡ ಕಪ್ ಗೆಲ್ಲಲಿ ಎಂಬ ಕಾರಣಕ್ಕೆ ಬೆಂಗಳೂರಿನಿಂದ ಅಂಜನಾದ್ರಿಗೆ ಸೈಕಲ್ ಯಾತ್ರೆ ಹೊರಟಿದ್ದೇನೆ. ಆರ್‌ಸಿಬಿ ತಂಡದ ವಿರಾಟ್ ಕೋಹ್ಲಿ ಬಹಳ ಇಷ್ಟ. ಈ ಬಾರಿ ಕಪ್ ಗೆಲ್ಲಲೇಬೇಕು ಎಂದು ಆಂಜನೇಯ ದೇವರಿಗೆ ಪೂಜೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

