Connect with us

    SUCCESS; ಬದುಕಿನ ಯಶಸ್ಸಿಗೆ ಸ್ಪಷ್ಟ ಗುರಿ ಅಗತ್ಯ | ಎಂ.ಸಿ.ರಘುಚಂದನ್

    ಪರಿಣಿತ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭ ಉದ್ಘಾಟನೆ

    ಮುಖ್ಯ ಸುದ್ದಿ

    SUCCESS; ಬದುಕಿನ ಯಶಸ್ಸಿಗೆ ಸ್ಪಷ್ಟ ಗುರಿ ಅಗತ್ಯ | ಎಂ.ಸಿ.ರಘುಚಂದನ್

    CHITRADURGA NEWS | 31 JULY 2024

    ಚಿತ್ರದುರ್ಗ: ವಿದ್ಯಾರ್ಥಿಗಳು ತಮ್ಮ ಬದುಕಿನ ಯಶಸ್ಸಿಗೆ(SUCCESS) ಸ್ಪಷ್ಟ ಗುರಿಯನ್ನು ಇಟ್ಟುಕೊಂಡು, ಜೀವನದಲ್ಲಿ ಮುಂದೆ ಬರಬೇಕು ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಹೇಳಿದರು.

    ಕ್ಲಿಕ್ ಮಾಡಿ ಓದಿ: POSTS; ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ 215 ಹುದ್ದೆಗಳಿಗೆ ಅರ್ಜಿ ಆಹ್ವಾನ

    ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಎಸ್.ಎಲ್.ವಿ.ಪದವಿ ಪೂರ್ವ ಕಾಲೇಜು ವತಿಯಿಂದ ಪರಿಣಿತ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು.

    ಉತ್ತಮವಾದ ಶಿಕ್ಷಣ ಪಡೆದು ಗುರು-ಹಿರಿಯರಿಗೆ, ತಂದೆ ತಾಯಿಗಳಿಗೆ ಕೀರ್ತಿ ತರಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು.

    ವಿದ್ಯಾರ್ಥಿ ದೆಸೆಯಲ್ಲಿ ಶಿಸ್ತು ಬದ್ದ ಜೀವನವಿದ್ದರೆ ಎಂತಹ ಉನ್ನತ ಸ್ಥಾನವನ್ನಾದರೂ ಅಲಂಕರಿಸಬಹುದು. ಅಪ್ಪ ಅಮ್ಮನ ಆಸೆಗೆ ತಕ್ಕಂತೆ ಓದಿ ಹೆಚ್ಚು ಅಂಕಗಳನ್ನು ತೆಗೆಯುವತ್ತ ನಿಮ್ಮ ಚಿತ್ತವಿರಲಿ ಎಂದು ತಿಳಿಸಿದರು.

    ಕ್ಲಿಕ್ ಮಾಡಿ ಓದಿ: ಸೂರ್ಯಕಾಂತಿ ಬೆಳೆ ಇಳುವರಿ ಹೆಚ್ಚಿಸಬೇಕೆ.. ಇಲ್ಲಿದೆ ಸಲಹೆ

    ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಂಯೋಜಕರಾದ ರಾಜು ಆರ್.ಎಸ್. ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದು ಇತರೆಯವರಿಗೆ ಪ್ರೇರಣೆಯಿದ್ದಂತೆ. ದ್ವಿತೀಯ ಪಿ.ಯು.ಸಿ. ಜೀವನದ ಅತ್ಯಂತ ಮಹತ್ವವಾದ ತಿರುವಿನ ಘಟ್ಟ. ಕಠಿಣ ಪರಿಶ್ರಮ ಸತತ ಅಧ್ಯಯನವಿರಬೇಕು. ಅಂಕಗಳ ಕಡೆ ಗಮನಕೊಟ್ಟು ಓದಿ. ಯಾವುದೇ ಕಾರಣಕ್ಕೂ ನಿರ್ಲಕ್ಷೆ ಮಾಡಬಾರದು ಎಂದರು.

    ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಅನಂತರಾಮ್ ಬಿ.ಸಿ. ಮಾತನಾಡಿ, ಮನಸ್ಸನ್ನು ಬೇರೆ ಕಡೆ ಹೋಗಲು ಬಿಡದೆ ಶಿಕ್ಷಣಕ್ಕೆ ಹೆಚ್ಚಿನ ಹೊತ್ತು ಕೊಟ್ಟು ತಂದೆ ತಾಯಿಗಳು ನಿಮ್ಮ ಮೇಲೆ ಇಟ್ಟುಕೊಂಡಿರುವ ನಿರೀಕ್ಷೆಗೆ ತಕ್ಕಂತೆ ಓದಬೇಕು. ಆಗ ಮಾತ್ರ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸಾಧ್ಯ ಎಂದರು.

    ಈ ಸಂದರ್ಭದಲ್ಲಿ ವೆಂಕಟೇಶ್ವರ ಕಾಲೇಜ್ ಆಫ್ ಎಜುಕೇಷನ್‌ನ ಸಹಾಯಕ ಪ್ರಧ್ಯಾಪಕ ವಿ.ಪ್ರಕಾಶ್, ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ಸಿಬಿಎಸ್‌ಸಿ ಪ್ರಾಂಶುಪಾಲ ಆಂಟೋನಿ ಮ್ಯಾಥ್ಯೂ, ಎಸ್.ಎಲ್.ವಿ.ಪದವಿ ಪೂರ್ವ ಕಾಲೇಜಿನ ಕೇಶವಮೂರ್ತಿ, ಇಂಡಿಯನ್ ಇಂಟರ್ ನ್ಯಾಷನಲ್ ಸ್ಟೇಟ್ ಶಾಲೆಯ ಪ್ರಾಂಶುಪಾಲ ತಿಪ್ಪೇಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top