ಕ್ರೈಂ ಸುದ್ದಿ
ಪೊಲೀಸ್ ಪೆಟ್ರೋಲಿಂಗ್ ವಾಹನಕ್ಕೆ ಬೈಕ್ ಡಿಕ್ಕಿ

Published on
ಚಿತ್ರದುರ್ಗ ನ್ಯೂಸ್.ಕಾಂ: ಪೊಲೀಸ್ ಇಲಾಖೆ ಹೈವೇ ಪೆಟ್ರೋಲಿಂಗ್ ಮಾಡಲು ನೇಮಿಸಿರುವ ವಾಹನಕ್ಕೆ ಹಿಂಬದಿಯಿಂದ ಬೈಕ್ ಡಿಕ್ಕಿಯಾದ ಘಟನೆ ಚಿತ್ರದುರ್ಗ ಹೊರವಲಯದಲ್ಲಿ ನಡೆದಿದೆ.
ಚಿತ್ರದುರ್ಗ-ಕುಂಚಿಗನಾಳು ಸೇವಾ ರಸ್ತೆ(SIRVICE)ಯಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬೈಕ್ ಸವಾರ ಹಿರಿಯೂರು ತಾಲೂಕಿನ ಮದ್ದನಕುಂಟೆ ನಿವಾಸಿ ವೀರಣ್ಣ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಸಚಿವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಇನ್ನೋವಾ ಕಾರಿನ ಹಿಂಬದಿಗೆ ಬೈಕ್ ಡಿಕ್ಕಿಯಾಗಿದ್ದು, ಹಿಂದಿನ ಗ್ಲಾಸ್ ಹೊಡೆದು ಹೋಗಿದೆ. ಬಂಪರ್, ಡೋರ್ ಸಹ ಬೆಂಡ್ ಆಗಿದೆ. ಬೈಕಿನ ಮುಂಭಾಗವೂ ಜಖಂ ಆಗಿದೆ.
ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Continue Reading
Related Topics:Bike, Car accident, Chitradurga, Highway Patrolling, Service Road, ಕಾರು ಅಪಘಾತ, ಚಿತ್ರದುರ್ಗ, ಬೈಕ್, ಸೇವಾ ರಸ್ತೆ, ಹೈವೇ ಪೆಟ್ರೋಲಿಂಗ್

Click to comment