Connect with us

    ಬಸವ ಜಯಂತ್ಯೋತ್ಸವ | ಮುರುಘಾಮಠದಿಂದ ಗೋನೂರಿನ ನಿರಾಶ್ರಿತರ ಕೇಂದ್ರದಲ್ಲಿ ಆಚರಣೆ

    ಮುಖ್ಯ ಸುದ್ದಿ

    ಬಸವ ಜಯಂತ್ಯೋತ್ಸವ | ಮುರುಘಾಮಠದಿಂದ ಗೋನೂರಿನ ನಿರಾಶ್ರಿತರ ಕೇಂದ್ರದಲ್ಲಿ ಆಚರಣೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 30 APRIL 2025

    ಚಿತ್ರದುರ್ಗ: ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ವತಿಯಿಂದ ಆಯೋಜಿಸಿದ್ದ ಬಸವ ಜಯಂತ್ಯೋತ್ಸವದ ಕೊನೆಯ ದಿನ ಇಂದು ನಗರದ ಹೊರವಲಯದಲ್ಲಿರುವ ಗೋನೂರಿನ ನಿರಾಶ್ರಿತರ ಕೇಂದ್ರದಲ್ಲಿ ಬಸವ ಜಯಂತಿ ಆಚರಿಸಲಾಯಿತು.

    Also Read: SSLC ಪರೀಕ್ಷೆ ಅಕ್ರಮ | ಹತ್ತು ಜನ ಶಿಕ್ಷಕರ ಅಮಾನತು | ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಾ ?

    ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಸಾನಿದ್ಯ ವಹಿಸಿ ಮಾತನಾಡಿ, ನಿಜವಾದ ಬಸವಣ್ಣನವರ ಆಶಯವೆಂದರೆ ಇಂತಹ ಅನೇಕ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಮಾಡುವುದಾಗಿದೆ. ಆದುದರಿಂದ ಈ ಕಾರ್ಯಕ್ರಮವನ್ನು ನಿಮ್ಮಗಳ ಸನ್ನಿಧಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು.

    ಈ ಕೇಂದ್ರದಲ್ಲಿ 282 ನಿರಾಶ್ರಿತರಿದ್ದಾರೆ, ಇವರಿಗೆ ನಮ್ಮ ಬಸವೇಶ್ವರ ಆಸ್ಪತ್ರೆಯಲ್ಲಿ ಪ್ರತಿದಿನ 25 ಜನರಿಗೆ ಆರೋಗ್ಯ ತಪಾಸಣೆ ಮಾಡಿಸಲಾಗುವುದು ಮತ್ತು ಉಚಿತ ದಾಖಲಾತಿ ಸಹ ಕಲ್ಪಿಸಿ ಕೊಡಲಾಗುವುದು. ದುರಾಸೆಯ ಸ್ವಾರ್ಥಜಗತ್ತು ಇಂದಿನ ದಿನ ಸೃಷ್ಟಿಯಾಗುತ್ತಿದೆ. ಮುಂದಿನ ದಿನಮಾನಗಳಲ್ಲಾದರೂ ಬಸವಾದಿ ಶರಣರ ತತ್ವಗಳನ್ನು ಅನುಸರಿಸಿ ನಿಸ್ವಾರ್ಥ ಜಗತ್ತು ಸೃಷ್ಟಿಯಾಗಲಿ ಎಂದು ನುಡಿದರು.

    ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ ಸ್ವಾಮಿಗಳು, ನಿರಾಶ್ರಿತರೆಲ್ಲರೂ ಬಸವಣ್ಣನವರ ಮಕ್ಕಳು, 12ನೇ ಶತಮಾನದಲ್ಲಿ ಬಸವಣ್ಣನವರು ನಮ್ಮ ನಾಡಿನಲ್ಲಿ ಹುಟ್ಟಿರದಿದ್ದರೆ ನಾವೆಲ್ಲ ಸಮಾನತೆಯಿಂದ ಕೂಡಿರಲು ಸಾಧ್ಯವಿರಲಿಲ್ಲ.

    Also Read: ವೀರಶೈವ ಸಮದಾಯ ಭವನಕ್ಕೆ ಭೂಮಿ ಪೂಜೆ | ವೀರಶೈವ ಅರ್ಬನ್‌ ಕೋ-ಆಪರೇಟಿವ್‌ ಸೊಸೈಟಿ ರಜತ ಮಹೋತ್ಸವದ ಸ್ಮರಣಾರ್ಥ

    ಸಮಾನತೆಯ ಆಶಯ ನೀಡಬೇಕೆಂದು ಬಯಸಿದವರು ಬಸವಣ್ಣನವರು. ಉಳ್ಳವರು ಬಡಾವಣೆಯಲ್ಲಿ ಕಾರ್ಯಕ್ರಮ ನಡೆಸುವ ಬದಲು ಇಂತಹ ನಿರಾಶ್ರಿತರ ಕೇಂದ್ರಗಳಲ್ಲಿ ಆಚರಿಸಿದರೆ ಅರ್ಥಪೂರ್ಣವಾಗಿರುತ್ತದೆ.

    ನಿರಾಶ್ರಿತರಾದ ತಮಗೆ ಯಾರು ಇಲ್ಲ ಎಂದ ಭಾವಿಸಬೇಡಿ, ನಿಮ್ಮ ಬಳಿ ಬಸವಣ್ಣನವರಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಈ ಆಶ್ರಮ ಇರುವುದು ನಿಮ್ಮಗಳ ಜೀವನದಲ್ಲಿ ಆಶಾದಾಯಕವಾದಂತಹದು. ಶ್ರೀಮಠವು ಬಸವಣ್ಣನವರ ಆಶಯದಂತೆ ಸಮಾಜದಲ್ಲಿ ಅನೇಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ನುಡಿದರು.

    ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಅಧ್ಯಕ್ಷರಾದ ಶಿವಯೋಗಿ ಸಿ ಕಳಸದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕಾರ್ಯಕ್ರಮದಲ್ಲಿ ಖ್ಯಾತ ವಕೀಲ ಉಮೇಶ್, ನಿರಾಶ್ರಿತ ಕೇಂದ್ರದ ಸಂಯೋಜಕರಾದ ಎಂ.ಮಹಾದೇವಯ್ಯ, ವಿಜಯ ಕುಮಾರ, ಎಸ್.ಜೆ.ಎಂ.ವಿದ್ಯಾಪೀಠದ ವಿವಿಧ ಸಂಸ್ಥೆಗಳ ಮುಖ್ಯಸ್ಥರುಗಳು, ಸಿಬ್ಬಂದಿ ವರ್ಗದವರು, ಹರಗುರುಚರ ಮೂರ್ತಿಗಳು ಉಪಸ್ಥಿತರಿದ್ದರು.

    Also Read: ರಾಜ್ಯ ಮಟ್ಟದ ತಾಂತ್ರಿಕ ಸ್ಪರ್ಧೆ | SRS ಕಾಲೇಜಿನ ಅನಿತಾ ದ್ವಿತೀಯ ಸ್ಥಾನ

    ಇದೇ ಸಂದರ್ಭದಲ್ಲಿ ಎಸ್.ಜೆ.ಎಂ.ಐ.ಟಿ ಕಾಲೇಜಿನ ವಿಶಾಲಾಕ್ಷಿಯವರು 26 ನಿರಾಶ್ರಿತ ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಿಸಿದರು.

    ಕಾರ್ಯಕ್ರಮದಲ್ಲಿ ಜಮುರಾ ಕಲಾಲೋಕದ ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಎಸ್.ಜೆ.ಎಂ.ಐ.ಟಿ ಕಾಲೇಜಿನ ಡಾ. ಹೆಚ್.ಜೆ.ಲೋಕೇಶ್ ಸ್ವಾಗತಿಸಿದರು. ಎಂ.ಪಲ್ಲವಿ ವಂದಿಸಿದರು. ಆಕಾಶವಾಣಿಯ ನವೀನ್ ಮಸ್ಕಲ್ ನಿರೂಪಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top