Connect with us

    ಆರೋಗ್ಯಕರ ಋತುಚಕ್ರಕ್ಕಾಗಿ ಈ ಗಿಡಮೂಲಿಕೆ ಚಹಾ ಕುಡಿಯಿರಿ

    ಮುಖ್ಯ ಸುದ್ದಿ

    ಆರೋಗ್ಯಕರ ಋತುಚಕ್ರಕ್ಕಾಗಿ ಈ ಗಿಡಮೂಲಿಕೆ ಚಹಾ ಕುಡಿಯಿರಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 10 APRIL 2025

    ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುತ್ತದೆ. ಆದರೆ ಕೆಲವೊಂದು ಮಹಿಳೆಯರಿಗೆ ಇದು ಸರಿಯಾದ ಸಮಯಕ್ಕೆ ಆಗುವುದಿಲ್ಲ. ಇದರಿಂದ ಅವರು ತೀವ್ರವಾದ ಕಿಬ್ಬೊಟ್ಟೆಯ ಸೆಳೆತ, ಕೆಳ ಬೆನ್ನು ನೋವು, ಆಯಾಸ, ವಾಕರಿಕೆ ಮತ್ತು ವಾಂತಿಯಂತಹ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ.

    ಹಾಗಾಗಿ ಅಂತವರು ಋತುಚಕ್ರ ಸರಿಯಾದ ರೀತಿಯಲ್ಲಿ ಆಗಲು ಔಷಧಿಗಳನ್ನು ತೆಗೆದುಕೊಳ್ಳುವ ಬದಲು ಈ ಗಿಡಮೂಲಿಕೆ ಚಹಾಗಳನ್ನು ಕುಡಿಯಿರಿ. ಇದು ನಿಯಮಿತವಾಗಿ ಮಹಿಳೆಯರಿಗೆ ಮುಟ್ಟಾಗುವಂತೆ ಮಾಡುತ್ತದೆ.

    ನಿಮ್ಮ ಋತುಚಕ್ರವನ್ನು ನೈಸರ್ಗಿಕವಾಗಿ ನಿಯಂತ್ರಿಸುವ 5 ಅತ್ಯುತ್ತಮ ಚಹಾಗಳು ಇಲ್ಲಿವೆ:

    ಪುದೀನಾ ಚಹಾ:

    ಪುದೀನಾ ಚಹಾ ಆಂಟಿ-ಆಂಡ್ರೊಜೆನಿಕ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಆಂಡ್ರೊಜೆನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಋತುಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪಿಸಿಒಎಸ್ ಸಮಸ್ಯೆ ಇರುವವರಿಗೆ ಇದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

    ದಾಲ್ಚಿನ್ನಿ ಚಹಾ:

    ದಾಲ್ಚಿನ್ನಿ ಉರಿಯೂತ ನಿವಾರಕ ಗುಣಲಕ್ಷಣಗಳಿಗೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಹಾಗಾಗಿ ಇದು ರಕ್ತದ ಹರಿವನ್ನು ಹೆಚ್ಚಿಸಿ ಋತುಚಕ್ರ ನಿಯಮಿತವಾಗಿ ಆಗುವಂತೆ ಮಾಡುತ್ತದೆ. ಮತ್ತು ಮುಟ್ಟಿನ ಸಮಯದಲ್ಲಿ ಕಾಡುವಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

    ಫೆನ್ನೆಲ್ ಚಹಾ:

    ಫೆನ್ನೆಲ್ ಆಂಟಿಸ್ಪಾಸ್ಮೋಡಿಕ್ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಮುಟ್ಟಿನ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಸಕ್ರಿಯ ಸಂಯುಕ್ತವಾದ ಅನೆಥೋಲ್ ಗರ್ಭಾಶಯವನ್ನು ಸಡಿಲಗೊಳಿಸಲು ಮತ್ತು ನೋವಿನ ಸಂಕೋಚನಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಶತಾವರಿ ಚಹಾ:

    ಶತಾವರಿ ಹೆಚ್ಚು ಬಳಸಲಾಗುವ ಆಯುರ್ವೇದ ಗಿಡಮೂಲಿಕೆಯಾಗಿದ್ದು, ಋತುಚಕ್ರದ ಆರೋಗ್ಯ ಮತ್ತು ಒಟ್ಟಾರೆ ಸಂತಾನೋತ್ಪತ್ತಿ ಯೋಗಕ್ಷೇಮವನ್ನು ಬೆಂಬಲಿಸಲು ಇದು ಸಹಕಾರಿಯಾಗಿದೆ. ಇದು ಹಾರ್ಮೋನ್ ಅಸಮತೋಲನವನ್ನು ನಿಯಂತ್ರಿಸುವಂತಹ ಗಿಡಮೂಲಿಕೆಯಾಗಿದೆ.

    ಹಾಗಾಗಿ ಇದು ಒತ್ತಡ ಮತ್ತು ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುವಂತಹ ಅನಿಯಮಿತ ಋತುಚಕ್ರ ಸಮಸ್ಯೆಯನ್ನು ಅನುಭವಿಸುವವರಿಗೆ ವಿಶೇಷವಾಗಿ ಉಪಯುಕ್ತವಾಗಿದೆ.

    ಶುಂಠಿ ಚಹಾ:

    ಶುಂಠಿಯಲ್ಲಿ ಸಕ್ರಿಯ ಸಂಯುಕ್ತ ಜಿಂಜರಾಲ್ ಇದೆ. ಇದು ಆ್ಯಂಟಿ ಆಕ್ಸಿಡೆಂಟ್‍ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಮುಟ್ಟಿನ ಸಮಯದಲ್ಲಿ ದೇಹದಲ್ಲಿ ಉರಿಯೂತ, ನೋವು ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಹಾಗಾಗಿ ಮಹಿಳೆಯರು ಮುಟ್ಟಿನ ಸಮಸ್ಯೆ ಇದ್ದಾಗ ಈ ಗಿಡಮೂಲಿಕೆ ಚಹಾಗಳನ್ನು ಕುಡಿಯುವ ಮೂಲಕ ನಿಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top