Connect with us

    SJM ಡೆಂಟಲ್ ಕಾಲೇಜಿಗೆ 30 ರ್ಯಾಂಕ್

    ಮುಖ್ಯ ಸುದ್ದಿ

    SJM ಡೆಂಟಲ್ ಕಾಲೇಜಿಗೆ 30 ರ್ಯಾಂಕ್

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 04 MARCH 2025

    ಚಿತ್ರದುರ್ಗ: ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ದಂತವೈದ್ಯ ಸ್ನಾತಕ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳು 30 ರ‍್ಯಾಂಕ್ ಪಡೆದಿದ್ದಾರೆ ಎಂದು ಪ್ರಾಚಾರ್ಯ ಡಾ.ರಘುನಾಥರೆಡ್ಡಿ ತಿಳಿಸಿದ್ದಾರೆ.

    Also Read: ನನ್ನ ವಿರುದ್ಧ ಅಪಪ್ರಚಾರ ಮಾಡೋರಿಗೆ ಸಾಮಾನ್ಯ ಸಭೆಯಲ್ಲಿ ಉತ್ತರ ಕೊಡ್ತಿನಿ | ಮೀಸೆ ಮಹಾಲಿಂಗಪ್ಪ

    ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಡಾ.ಐಶ್ವರ್ಯ ಕೊಟ್ಟೂರು 6ನೇ ರ‍್ಯಾಂಕ್ ಪಡೆದಿದ್ದಾರೆ. ಸ್ನಾತಕ ವಿಭಾಗದಲ್ಲಿ ಡಾ.ವೈಷ್ಣವಿ ಕುಪ್ಪಲ – 3ನೇ ರ‍್ಯಾಂಕ್, ಡಾ.ರಚನಾ ಎಂ. – 5ನೇ ರ‍್ಯಾಂಕ್ ಸೇರಿದಂತೆ ಡಾ.ತನು ಬಾಲಕೃಷ್ಣ, ಡಾ.ಶ್ವೇತಾ ಟಿ., ಡಾ.ಹರ್ಷಿತಾ ಎಸ್.ಡಿ, ಡಾ. ಶ್ರೀಶಾ ಡಿ.ಎಂ., ಡಾ.ಚಿನ್ಮಯಿ ಚಿದಂಬರ್ ಕಂಬಾರ್, ಡಾ.ಶಿವಮೋಹನ್ ಎಸ್.ಎಂ., ಡಾ.ಸೈಯದಾ ಮಿಜ್ಬಾ ಮತ್ತು ಡಾ.ರೀತು ವೆಂಕಟೇಶ್ ಮುರುಡೇಶ್ವರ ಬಿ.ಡಿ.ಎಸ್. ಪರೀಕ್ಷೆಗಳ 2 ಮತ್ತು 4ನೇ ಸೆಮ್‌ಗಳ ವಿವಿಧ ವಿಷಯಗಳಲ್ಲಿ ಒಟ್ಟು 30 ರ‍್ಯಾಂಕ್‌ಗಳನ್ನು ಪಡೆದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top