ಮುಖ್ಯ ಸುದ್ದಿ
ಮೊಮ್ಮಗನ ನಾಮಕರಣದಲ್ಲಿ ಬಿಕ್ಕಿ ಬಿಕ್ಕಿ ಅತ್ತ ರೇಣುಕಸ್ವಾಮಿ ತಾಯಿ | ಮತ್ತೆ ಮಗ ಮನೆಗೆ ಬಂದಿದ್ದಾನೆ ಎಂದ ರತ್ನಪ್ರಭ

CHITRADURGA NEWS | 23 FEBRUARY 2025
ಚಿತ್ರದುರ್ಗ: ರೇಣುಕಸ್ವಾಮಿ ಕೊಲೆಯಾದ ನಾಲ್ಕು ತಿಂಗಳಲ್ಲೇ ಪುತ್ರನ ಜನನವಾಗಿದ್ದು, ಇಂದು ನಾಮಕರಣ ಕಾರ್ಯಕ್ರಮ ಮುಗಿದಿದೆ.
ರೇಣುಕಸ್ವಾಮಿ ಪುತ್ರನಿಗೆ ಶಶಿಧರಸ್ವಾಮಿ ಎಂದು ಹೆಸರಿಟ್ಟಿದ್ದು, ಈ ವೇಳೆ ಮಾಧ್ಯಮದವರ ಜೊತೆ ಮಾತನಾಡುವಾಗ ತಾಯಿ ರತ್ನಪ್ರಭ ಮಗನ ನೆನೆದು ಬಿಕ್ಕಿ ಬಿಕ್ಕಿ ಅತ್ತರು.

ಇದನ್ನೂ ಓದಿ: ರೇಣುಕಸ್ವಾಮಿ ಪುತ್ರನಿಗೆ ನಾಮಕರಣ | ಹೆಸರೇನು ಗೊತ್ತಾ ?
ದುಃಖದಲ್ಲೇ ಮಾತನಾಡಿದ ಅವರು, gನನ್ನ ಮಗ ಇದ್ದಿದ್ದರೆ ಈ ನಾಮಕರಣ ಕಾರ್ಯಕ್ರಮವನ್ನು ಇನ್ನೂ ಅದ್ದೂರಿಯಾಗಿ ಮಾಡುತ್ತಿದ್ದೆವು ಎಂದರು.
ಮೊಮ್ಮಗನ ರೂಪದಲ್ಲಿ ನಮ್ಮ ಮಗ ಮತ್ತೆ ಮನೆಗೆ ಬಂದಿದ್ದಾನೆ ಎಂದು ಭಾವಿಸಿದ್ದೇವೆ. ಈಗ ನಮ್ಮ ಮನೆಯಲ್ಲಿ ಅದೇ ಸಂತೋಷ ಎಂದು ತಿಳಿಸಿದರು.
ಇದನ್ನೂ ಓದಿ: ಅಭಾಸಪ ಉದ್ಘಾಟನೆ | ಓದುಗರ ಮನಸ್ಸು ಅರಳಿಸದ ಸಾಹಿತ್ಯದ ಪ್ರಯೋಜನವೇನು | ಡಾ.ಸಿಬಂತಿ ಪದ್ಮನಾಭ
ಇನ್ನೂ ರೇಣುಕಸ್ವಾಮಿ ತಂದೆ ಕಾಶಿನಾಥ ಶಿವನಗೌಡರು ಮಾತನಾಡುತ್ತಾ, ನಮ್ಮ ಸಮಾಜದ ಸಂಪ್ರದಾಯದಂತೆ ಹಾಗೂ ಕಣ್ವಕುಪ್ಪೆ ಗವಿಮಠದ ಶ್ರೀಗಳು ಹಾಗೂ ರಂಭಾಪುರಿ ಶ್ರೀಗಳ ಸಲಹೆಯಂತೆ ನಾಮಕರಣ ಶಾಸ್ತ್ರ ಪೂರೈಸಿದ್ದೇವೆ ಎಂದರು.
ಮಗು ಮನೆಗೆ ಬಂದಾಗಿನಿಂದ ಸಂತೋಷವಾಗಿದೆ. ಸರ್ಕಾರ ನಮ್ಮ ಮೇಲೆ ಸಹಾನುಭೂತಿ ತೋರಿಸಬೇಕು. ನಮ್ಮ ಸೊಸೆಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಇದನ್ನೂ ಓದಿ: ಮೇ.10ರ ಒಳಗಾಗಿ ಇ-ಖಾತೆ ಪಡೆಯಿರಿ | ಜಿಲ್ಲಾಧಿಕಾರಿ ವೆಂಕಟೇಶ್
ಮಾಧ್ಯಮ, ಪೊಲೀಸರು, ಕಾನೂನು ವ್ಯವಸ್ಥೆ ನಮಗೆ ಸಾಕಷ್ಟು ಸಹಕಾರ ನೀಡಿದೆ. ಆದರೆ, ನಮ್ಮ ಮಗನ ಕೊಲೆ ಮಾಡಿದವರಿಗೆ ಶಿಕ್ಷೆ ಆಗಲೇಬೇಕು.
ಮಗುವನ್ನು ನೋಡಿದಾಗ ಸಂತೋಷವಾದರೂ, ಮಗನನ್ನು ನನೆದಾಗ ದುಃಖವಾಗುತ್ತದೆ. ಅವನ ಸಾವಿಗೆ ನ್ಯಾಯ ದೊರೆಯಬೇಕು ಎಂದರು.
