By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ನಗರಸಭೆಯಲ್ಲಿ ಅಧ್ಯಕ್ಷರೇ ಸುಪ್ರೀಂ, ಇನ್ಯಾರೋ ಅಲ್ಲ | ನಗರಸಭೆ ಸದಸ್ಯರ ಗುಡುಗು
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ನಗರಸಭೆಯಲ್ಲಿ ಅಧ್ಯಕ್ಷರೇ ಸುಪ್ರೀಂ, ಇನ್ಯಾರೋ ಅಲ್ಲ | ನಗರಸಭೆ ಸದಸ್ಯರ ಗುಡುಗು

ಮುಖ್ಯ ಸುದ್ದಿ

ನಗರಸಭೆಯಲ್ಲಿ ಅಧ್ಯಕ್ಷರೇ ಸುಪ್ರೀಂ, ಇನ್ಯಾರೋ ಅಲ್ಲ | ನಗರಸಭೆ ಸದಸ್ಯರ ಗುಡುಗು

chitradurganews.com
Last updated: 18 February 2025 19:56
chitradurganews.com
4 months ago
Share
Nagarasabhe meating
ನಗರಸಭೆ ಸದಸ್ಯರ ಗುಡುಗು
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 18 FEBRUARY 2025

ಚಿತ್ರದುರ್ಗ: ನಗರದಲ್ಲಿ ರಸ್ತೆ ಅಗಲೀಕರಣ ಕುರಿತಂತೆ ಕಳೆದ ಮೂರ್ನಾಲ್ಕು ತಿಂಗಳಿಂದ ಆಗುತ್ತಿರುವ ಚರ್ಚೆ ನಗರಸಭೆ ಸದಸ್ಯರನ್ನು ಕೆರಳಿಸಿತ್ತು.

ನಗರದ ರಸ್ತೆ ಅಗಲೀಕರಣದಂತಹ ವಿಚಾರ ನಗರಸಭೆ ಸದಸ್ಯರ ಗಮನಕ್ಕೆ ಬಾರದೆ ಅಧಿಕಾರಿಗಳು, ಶಾಸಕರು ತೀರ್ಮಾಣ ತೆಗೆದುಕೊಳ್ಳುವ ಬಗ್ಗೆ ತೀವ್ರ ಅಸಮಧಾನ ವ್ಯಕ್ತವಾಯಿತು.

ಇದನ್ನೂ ಓದಿ: ಚಿತ್ರದುರ್ಗ ನಗರಸಭೆ ಬಜೆಟ್ | ಯಾವ ಕೆಲಸಕ್ಕೆ ಎಷ್ಟು ಅನುದಾನ ಮೀಸಲು | ಇಲ್ಲಿದೆ ಪೂರ್ಣ ವಿವರ

ಶಾಸಕರು, ಪೌರಾಯುಕ್ತರೇ ಸಭೆ ನಡೆಸುವುದಾದರೆ ಸಾಮಾನ್ಯ ಸಭೆಯಲ್ಲಿ ರಸ್ತೆ ಅಗಲೀಕರಣದ ವಿಚಾರ ಯಾಕೆ ತಂದಿದ್ದೀರಿ. ನಾವೇನು ರಸ್ತೆ ಅಗಲೀಕರಣ, ನಗರದ ಅಭಿವೃದ್ಧಿಗೆ ವಿರೋಧಿಗಳೇ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದರು.

ನಗರದ ಅಭಿವೃದ್ಧಿ ಆಗಬೇಕು. ರಸ್ತೆ ಅಗಲೀಕರಣ ಆಗಬೇಕು. ಇದು ನಮ್ಮೆಲ್ಲರ ಅಪೇಕ್ಷೆ. ಆದರೆ, ಈ ವಿಚಾರದಲ್ಲಿ ಪ್ರಚಾರ ಪಡೆಯುವ ಬೂಟಾಟಿಕೆ ಬೇಡ ಎಂದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಟೋಲ್ ಶುಲ್ಕ ರದ್ದುಗೊಳಿಸುವಂತೆ ಕರುನಾಡ ವಿಜಯಸೇನೆ ಒತ್ತಾಯ 

ಸದಸ್ಯ ಶ್ರೀನಿವಾಸ್ ಮಾತನಾಡಿ, ನಗರದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮಾರ್ಕ್ ಮಾಡಲಾಗಿದೆ. ಇದು ವಸೂಲಿ ತಂತ್ರ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದರ ಹಿಂದಿನ ಹುನ್ನಾರ ಏನು, ರಸ್ತೆ ಅಗಲೀಕರಣಕ್ಕೆ ಕಟ್ಟಡ ತೆರವು ಮಾಡಿದರೆ 300-400 ಕೋಟಿ ಪರಿಹಾರ ಕೊಡಬೇಕಾಗುತ್ತದೆ ಇಷ್ಟು ದುಡ್ಡು ನಗರಸಭೆಯಲ್ಲಿ ಇದೆಯೇ ಎಂದು ಪ್ರಶ್ನಿಸಿದರು.

ಸದಸ್ಯ ಗೊಪ್ಪೆ ಮಂಜುನಾಥ್ ಮಾತನಾಡಿ, ಅಜೆಂಡಾ ಪುಸ್ತಕದಲ್ಲಿ ರಸ್ತೆ ಅಗಲೀಕರಣ ಎಂದು ನಮೂದಿಸಿ, ಒತ್ತುವರಿ ತೆರವು ಎಂದಲ್ಲ. ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ, ಜನರಿಂದ ಆಯ್ಕೆಯಾದ ಸದಸ್ಯರ ಗಮನಕ್ಕೆ ತನ್ನಿ. ನಾವು ರಸ್ತೆಯಲ್ಲಿ ಓಡಾಡುವಾಗ ಜನ ನಮ್ಮನ್ನು ಕೇಳುತ್ತಾರೆ. ಏನೆಂದು ಉತ್ತರ ಕೊಡಲಿ ಎಂದು ಪೌರಾಯುಕ್ತರನ್ನು ಪ್ರಶ್ನಿಸಿದರು.

ಇದನ್ನೂ ಓದಿ: ಐಮಂಗಲ ಪೊಲೀಸರಿಂದ ಅಂತಾರಾಜ್ಯ ಕಳ್ಳನ ಬಂಧನ | 351 ಗ್ರಾಂ ಚಿನ್ನಾಭರಣ ವಶಕ್ಕೆ

ಸದಸ್ಯ ದೀಪಕ್ ಮಾತನಾಡಿ, ನಗರಸಭೆಗೆ ಅಧ್ಯಕ್ಷರೇ ಸುಪ್ರೀಂ, ಇನ್ಯಾರೋ ಅಲ್ಲ. ರಸ್ತೆ ಅಗಲೀಕರಣಕ್ಕೆ ಅನುಮೋದನೆ ನೀಡಬೇಕಾಗಿರುವುದು ಈ ಸಭೆ, ಇಲ್ಲಿರುವ ಸದಸ್ಯರು, ಅಧ್ಯಕ್ಷರು ಎನ್ನುವುದು ತಿಳಿದಿರಲಿ ಎಂದು ಹೇಳಿದರು.

ಪೌರಾಯುಕ್ತೆ ಎಂ.ರೇಣುಕಾ ಮಾತನಾಡಿ, ಕಟ್ಟಡ ತೆರವು ಸಂಬಂಧ ಎಲ್ಲಿಯೂ ಹೊಡೆದಿಲ್ಲ. ನೋಟೀಸ್ ಕೊಟ್ಟಿಲ್ಲ. ಶಾಸಕರು, ಸಚಿವರ ಸೂಚನೆ ಮೇರೆಗೆ ಸಭೆ ನಡೆದಿದೆ. ಅಳತೆ ಮಾಡಲಷ್ಟೇ ಹೇಳಿದ್ದರಿಂದ ಅದನ್ನು ಮಾಡಿದ್ದೇವೆ. ಯಾವುದೂ ಉದ್ದೇಶಪೂರ್ವಕ ಅಲ್ಲ. ದಿಢೀರನೇ ಶಾಸಕರು ನಗರಸಭೆ ಕಚೇರಿಗೆ ಬಂದು ಅಧಿಕಾರಿ, ಸಿಬ್ಬಂದಿ ಕರೆಯಿರಿ ಎಂದಾಗ ಕರೆದಿದ್ದೇವೆ ಎಂದು ಸ್ಪಷ್ಟೀಕರಣ ನೀಡುವ ಪ್ರಯತ್ನ ಮಾಡಿದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Chitradurga LatestChitradurga newsCity CouncilKannada NewsMembersRoad Wideningಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಲೇಟೆಸ್ಟ್ನಗರಸಭೆರಸ್ತೆ ಅಗಲೀಕರಣಸದಸ್ಯರು
Share This Article
Facebook Email Print
Previous Article ಟೋಲ್ ಶುಲ್ಕ ರದ್ದುಗೊಳಿಸುವಂತೆ ಕರುನಾಡ ವಿಜಯಸೇನೆ ಒತ್ತಾಯ 
Next Article Nagarasabhe vice president shreedevi ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಸಭಾತ್ಯಾಗ
Leave a Comment

Leave a Reply Cancel reply

Your email address will not be published. Required fields are marked *

Sadguru Pradeep participate hosadurga bandh
ಹೊಸದುರ್ಗ ಬಂದ್‌ | ಇಂದು ಅಂತ್ಯವಲ್ಲ, ಆರಂಭ | ಸದ್ಗುರು ಪ್ರದೀಪ್‌
ಹೊಸದುರ್ಗ
ಹೊಸದುರ್ಗ ಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ | ಕೆ.ಎಸ್.ನವೀನ್
ಹೊಸದುರ್ಗ
ಹೊಸದುರ್ಗ ಬಂದ್ | ನೀರಿಗೆ ಅಡ್ಡಿ ಕಿಡಿಗೇಡಿ ಕೃತ್ಯ | ಎಸ್.ಲಿಂಗಮೂರ್ತಿ
ಹೊಸದುರ್ಗ
ಹೊಸದುರ್ಗ ಬಂದ್ | ಶಾಸಕ ಬಿ.ಜಿ.ಗೋವಿಂದಪ್ಪ ನೇತೃತ್ವದಲ್ಲಿ ಹೋರಾಟ
ಹೊಸದುರ್ಗ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up