Connect with us

    ಮುರುಘಾ ಮಠದಲ್ಲಿ ಹರ್ಡೇಕರ್ ಮಂಜಪ್ಪ ಜಯಂತಿ ಆಚರಣೆ 

    ಮುಖ್ಯ ಸುದ್ದಿ

    ಮುರುಘಾ ಮಠದಲ್ಲಿ ಹರ್ಡೇಕರ್ ಮಂಜಪ್ಪ ಜಯಂತಿ ಆಚರಣೆ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 18 FEBRUARY 2025

    ಚಿತ್ರದುರ್ಗ: ಮುರುಘಾ ಮಠದ ಶ್ರೀ ಮುರುಗಿ ಶಾಂತವೀರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಆವರಣದಲ್ಲಿ ಹರ್ಡೇಕರ್ ಮಂಜಪ್ಪನವರ ಜಯಂತಿ ಆಚರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಪುಷ್ಪನಮನ ಸಲ್ಲಿಸಿದರು.

    Also Read: ರಾತ್ರಿ ಸಿಂಗಲ್ ಫೇಸ್ ಕರೆಂಟ್ | ಕೃಷಿ ಪಂಪ್ ಸೆಟ್ ಬಳಸದಂತೆ ಬೆಸ್ಕಾಂ ಮನವಿ 

    ನಂತರ ಮಾತನಾಡಿದ ಶ್ರೀಗಳು, ಶೋಷಣೆಗೆ ಒಳಗಾದರು ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಮಹಾತ್ಮಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಕರ್ನಾಟಕದ ಗಾಂಧಿ ಎಂದೇ ಪ್ರಸಿದ್ಧರಾದವರು ಹರ್ಡೇಕರ್ ಮಂಜಪ್ಪನವರು ಎಂದು ಸ್ಮರಿಸಿದರು.

    ಮಂಜಪ್ಪನವರು ಆರ್ಯ ಸಮಾಜದಿಂದ ಬಸವ ಸಮಾಜತ್ತ ಮುಖ ಮಾಡುವಂತಾಯಿತು. ದಾವಣಗೆರೆ ಎಸ್.ರುದ್ರಪ್ಪ ಮಾಸ್ತರರ ವಾಗ್ದೇವಿ ವಿಲಾಸ ಪ್ರೆಸ್ಸಿನಲ್ಲಿ 200 ರೂ. ಕರಾರಿನ ಮೇಲೆ ಮಾಗಾನಹಳ್ಳಿ ದೊಡ್ಡಪ್ಪನವರ ಸಹಾಯದಿಂದ 1905 ಸೆಪ್ಟೆಂಬರ್‌ನಲ್ಲಿ “ಧನುರ್ಧಾರಿ” ಪತ್ರಿಕೆ ಆರಂಭಿಸಿದರು.

    ದಾವಣಗೆರೆಯ ಹಿರಿಯರು ಬಸವಣ್ಣನವರ ತತ್ವಗಳ ಕುರಿತಾಗಿ ಅನೇಕ ವಿಷಯ ತಿಳಿಸಿದರು. ನಿಡಗುಂದಿ ಮಡಿವಾಳಪ್ಪ, ಕಂಚಿಕೇರಿ ಮಹಾಲಿಂಗಪ್ಪನವರ ಪ್ರೇರಣೆ ದೊರಕಿತು.

    ದಾವಣಗೆರೆ ವಿರಕ್ತಮಠದಲ್ಲಿ ಸೇವೆ ನಿರ್ವಹಿಸುತ್ತಿದ್ದ ಶ್ರೀ ಮೃತ್ಯುಂಜಯ ಸ್ವಾಮಿಗಳು (ಧಾರವಾಡ) ಅದಾಗಲೆ ಶಿವಾನುಭವ ಕಾರ್ಯಗಳ ಮೂಲಕ ದಾವಣಗೆರೆಯಲ್ಲಿ ಮನೆ ಮಾತಾಗಿದ್ದರು. ಇದನ್ನರಿತ ಮಂಜಪ್ಪನವರು ಶ್ರೀಗಳನ್ನು ಭೇಟಿ ಮಾಡಿ 26-6-1911 ರಂದು ಭಜನಾ ಸಂಘ ಸ್ಥಾಪಿಸಿದರು.

    Also Read: ಐಮಂಗಲ ಪೊಲೀಸರಿಂದ ಅಂತಾರಾಜ್ಯ ಕಳ್ಳನ ಬಂಧನ | 351 ಗ್ರಾಂ ಚಿನ್ನಾಭರಣ ವಶಕ್ಕೆ

    ಬಡಾವಣೆ, ಗಲ್ಲಿ-ಹಳ್ಳಿಗಳ ಸಂಚರಿಸಿ ವಚನಗಳು ಮತ್ತು ತತ್ವಪದಗಳನ್ನು ಹಾಡಿ ಜನಮನದಲ್ಲಿ ಪ್ರೇರಣೆ ತುಂಬಿದರು. ಲಿಂಗಾಯತ ಧರ್ಮೀಯರಾದ ನಾವುಗಳು ಕೂಡ ನಮ್ಮ ಧರ್ಮ ಗುರು ಬಸವಣ್ಣನವರ ಜಯಂತಿ ಆಚರಿಸೋಣವೆಂದು ಮಂಜಪ್ಪನವರು, ಮೃತ್ಯುಂಜಯ ಶ್ರೀಗಳೊಂದಿಗೆ ಚರ್ಚಿಸಿದರು.

    ಹಿರಿಯರಾದ ಮೈಸೂರಿನ ಎನ್.ಆರ್ ಕರಿಬಸವಶಾಸ್ತಿçಗಳು, ಹರಪನಹಳ್ಳಿಯ ಆರ್. ಶಾಂತಪ್ಪಾಜಿಯವರ ಸಲಹೆಯ ಮೇರೆಗೆ ದಾವಣಗೆರೆಯ ಶರಣ ಬಂಧುಗಳ ಸಹಕಾರದಲ್ಲಿ 1913ರಲ್ಲಿ ಮೊದಲ ಬಸವ ಜಯಂತಿಯನ್ನು ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಬಸವ ಜಯಂತಿ ಆಚರಣೆಗೆ ತಂದ ಹರಿಕಾರರಾಗಿದ್ದಾರೆ ಎಂದರು.

    ಬಸವಣ್ಣನವರ ತತ್ವಗಳಿಂದ ಪ್ರಭಾವಿತರಾದ ಮಂಜಪ್ಪನವರು ಇಷ್ಟಲಿಂಗ ದೀಕ್ಷೆ ಪಡೆಯಬೇಕೆನ್ನುವ ಹಂಬಲವನ್ನು ಶ್ರೀ ಮೃತ್ಯುಂಜಯಪ್ಪಗಳ ಮುಂದೆ ವ್ಯಕ್ತಪಡಿಸಿದರು. ಹಾಗೇ ಆಗಲಿ ನಮ್ಮೆಲ್ಲರ ಪರಮಾರಾಧ್ಯ ಗುರುಗಳಿಂದಲೇ ನಿಮಗೆ ದೀಕ್ಷೆ ಆಗಲಿ ಎಂದು ಇಚ್ಚಿಸಿ ಶ್ರೀಗಳು ಮಂಜಪ್ಪನವರನ್ನು ನೇರವಾಗಿ ಅಥಣಿಗೆ ಕರೆದುಕೊಂಡು ಬಂದರು.

    ಅಪ್ಪನ ವಚನವನ್ನು ಆದರ್ಶವಾಗಿರಿಸಿಕೊಂಡಿದ್ದ ಶಿವಯೋಗಿಗಳು ಮೃತ್ಯುಂಜಯ ಶ್ರೀಗಳ ಮನೋಭಿಲಾಶೆ ಅರಿತು ಸುಪ್ರಭಾತ ಸಮಯದಲ್ಲಿ ವಚನ ಮಂತ್ರ ಪಠಣದೊಂದಿಗೆ 1914ರಲ್ಲಿ ಅಥಣಿ ಶಿವಯೋಗಿಗಳು ಲಿಂಗದೀಕ್ಷೆ ಅನುಗ್ರಹಿಸಿದರು. ಮಹಾತ್ಮಾ ಗಾಂಧೀಜಿಯವರ ಆದರ್ಶ ಮಾರ್ಗವನ್ನು ಅನುಸರಿಸುತ್ತಿರುವ ನೀವು ಕರ್ನಾಟಕದ ಗಾಂಧಿಯಾಗಿ ಬೆಳಗಿರಿ ಎಂದು ಆಶೀರ್ವದಿಸುತ್ತಾರೆ ಎಂದು ಹೇಳಿದರು.

    ಸಾಧಕರಾದ ಲಂಕೇಶ್ ದೇವರು ಮತ್ತು ಪರಶುರಾಮ ದೇವರು ಮಾತನಾಡಿದರು.

    Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?

    ಕಾರ್ಯಕ್ರಮದಲ್ಲಿ ನವೀನ್ ಮಸ್ಕಲ್, ಬಸವರಾಜ ಕಟ್ಟಿ, ಎಸ್.ಜೆ.ಎಂ. ಬ್ಯಾಂಕ್‌ನ ವ್ಯವಸ್ಥಾಪಕ ಟಿ.ಕೆ. ರಾಜಶೇಖರ್, ಸುಮ ರಾಜಶೇಖರ್ ಸೇರಿದಂತೆ ವಿದ್ಯಾರ್ಥಿಗಳು, ಸಾಧಕರು, ಎಸ್.ಜೆ.ಎಂ. ಮುದ್ರಣಾಲಯದ ಸಿಬ್ಬಂದಿ ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top