ಕ್ರೈಂ ಸುದ್ದಿ
ಪತ್ನಿಯನ್ನೇ ಹತ್ಯೆ ಮಾಡಿದ ಪತಿ | ಮೆದೇಹಳ್ಳಿಯಲ್ಲಿ ಘಟನೆ

CHITRADURGA NEWS | 08 FEBRUARY 2025
ಚಿತ್ರದುರ್ಗ: ನಗರದ ಒಂದು ಭಾಗವೇ ಆಗಿರುವ ಮೆದೇಹಳ್ಳಿಯಲ್ಲಿ ಘೋರ ದುರಂತ ಸಂಭವಿಸಿದ್ದು, ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಮೆದೇಹಳ್ಳಿಯ ಶ್ರೀದೇವಿ(48) ಕೊಲೆಯಾದ ಮಹಿಳೆ. ಇವರ ಪತಿ ಉಮಾಪತಿ ಮೇಲೆ ಕೊಲೆ ಆರೋಪ ಬಂದಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಬೈಕ್ ಲಾರಿ ಡಿಕ್ಕಿ | ಇಬ್ಬರು ಯುವಕರು ಮೃತ
ಉಮಾಪತಿ ತನ್ನ ಜಮೀನು ಮಾರಾಟ ಮಾಡಿ ಹಣ ಖರ್ಚು ಮಾಡುತ್ತಾನೆ ಎನ್ನುವ ಕಾರಣಕ್ಕೆ ಪತ್ನಿ ಶ್ರೀದೇವಿ ಜಮೀನನ್ನು ತನ್ನ ಹಾಗೂ ಮಗಳ ಹೆಸರಿಗೆ ಮಾಡಿಸಿಕೊಡಿ ಎಂದು ಒತ್ತಾಯ ಮಾಡುತ್ತಿದ್ದರು.
ಫೆಬ್ರವರಿ 7 ರಂದು ಬೆಳಗ್ಗೆ ಶ್ರೀದೇವಿ ಮನೆಯಲ್ಲಿ ಪೂಜೆ ಮಾಡುತ್ತಿದ್ದಾಗ ಉಮಾಪತಿ ಸೀರೆಯಿಂದ ಕೊರಳಿಗೆ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ದೂರಲಾಗಿದೆ.
ಇದನ್ನೂ ಓದಿ: ಚನ್ನಗಿರಿ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್
ಬಾಯಲ್ಲಿ ರಕ್ತ ಬಂದಿದ್ದು, ಪೂಜೆ ಮಾಡುವಾಗ ನೆಲಕ್ಕೆ ಬಿದ್ದಿದ್ದಾರೆ ಎಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಶ್ರೀದೇವಿ ಮೃತಪಟ್ಟಿದ್ದಾರೆ.
ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತರ ಅಣ್ಣ ಎಚ್.ರಂಗಸ್ವಾಮಿ ದೂರು ದಾಖಲಿಸಿದ್ದಾರೆ.
