ಹೊಸದುರ್ಗ
ವಿಜಯರಾಯ ಸಂಗಮೇಶ್ವರ ಪತ್ತಿನ ಸಹಕಾರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ | ಶಾಂತವೀರ ಶ್ರೀಗಳಿಂದ ಸನ್ಮಾನ

CHITRADURGA NEWS | 06 FERBUARY 2025
ಹೊಸದುರ್ಗ: ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆದ ಶ್ರೀ ವಿಜಯರಾಯ ಸಂಗಮೇಶ್ವರ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭ ನಿರ್ಗಮಿತ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
Also Read: ಗಂಡನ ಮೇಲಿನ ದ್ವೇಷಕ್ಕೆ ಮಗುವಿಗೆ ಬರೆಹಾಕಿದ ಮಹಾತಾಯಿ

ಸಹಕಾರ ತತ್ವವೇ ಬಡವರಿಗೆ, ಅಸಹಾಯಕರಿಗೆ, ಅಬಲರಿಗೆ, ಆರ್ಥಿಕ ಚೈತನ್ಯ ನೀಡುವ ಸಬಲೀಕರಣ ಮಾಡುವ ಮೂಲಕ ಆರ್ಥಿಕ ಪ್ರಗತಿಗೆ ಸಹಕಾರಿ ಸಂಘಗಳು ಮುಂದಾಗಬೇಕು. ಕೇವಲ ಹಣವಂತರಿಗೆ, ಸಬಲರಿಗೆ, ವ್ಯಾಪಾರಿಗಳಿಗೆ ಸಾಲ ನೀಡುವುದಾದರೆ ಬಡವ ಬಲ್ಲಿದರ ಆರ್ಥಿಕ ಪ್ರಗತಿ ಯಾವಾಗ ಸಹಕಾರ ತತ್ವ ಹುಟ್ಟಿಕೊಂಡಿದ್ದೆ.
ಬಡತನ ಮುಕ್ತ ಸಮಾಜವನ್ನು ಕಟ್ಟುವ ಆಶಯ ಆದರೆ ಇಂದಿನ ಪತ್ತಿನ ಸಹಕಾರ ಸಂಘಗಳು ಕೇವಲ ಉಳ್ಳವರಿಗೆ, ರಿಯಲ್ ಎಸ್ಟೇಟ್ ಮಾಡುವ ಉದ್ಯಮಿಗಳಿಗೆ ಸಾಲ ನೀಡುವ ಮೂಲಕ ಲಾಭಾಂಶವನ್ನು ಹೆಚ್ಚಿಸಿಕೊಳ್ಳುತ್ತಿವೆ. ಆದರೆ ಸಾಕಾರತತ್ವದ ಆಶಯವನ್ನು ಮರೆತಿವೆ. ಸಹಕಾರ ತತ್ವಕ್ಕೆ ರಾಜಕೀಯ ಲೇಪನವಾಗುತ್ತಿರುವುದು ಮತ್ತು ರಾಜಕೀಯ ವ್ಯಕ್ತಿಗಳು ಸಾಕಾರ ತತ್ವದಲ್ಲಿ ಆಯ್ಕೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.
Also Read: ಸಮಾಧಿಯಿಂದ ದೇಹ ಹೊರ ತೆಗೆದು ತನಿಖೆ | ನಾಲ್ಕು ತಿಂಗಳ ಹಿಂದೆ ಅಂತ್ಯಕ್ರಿಯೆ
ಪ್ರಾಮಾಣಿಕರು ಮಾನವೀಯತೆ ಉಳ್ಳ ಉತ್ತಮ ವ್ಯಕ್ತಿಗಳು ಸಹಕಾರದ ಸಂಘಗಳಲ್ಲಿ ಕರ್ತವ್ಯ ನಿರ್ವಹಿಸಿದರೆ ಬಡವರ ಕಣ್ಣೀರು ಒರೆಸಲು ಸಾಧ್ಯ, ಇಲ್ಲವಾದರೆ ತಮ್ಮ ಹಿಂಬಾಲಕರಿಗೆ ಕುಟುಂಬದವರಿಗೆ ತಮ್ಮ ಪಕ್ಷದವರಿಗೆ ಸಾಲ ನೀಡಿದರೆ ಅದು ಸಹಕಾರಿ ತತ್ವಕ್ಕೆ ಮಾಡಿದ ಅಪಚಾರ.
ಸಹಕಾರಿ ಸಂಘಗಳ ಲಾಭಾಂಶಕ್ಕಿಂತ ಎಷ್ಟು ಬಡವರಿಗೆ ಸಹಾಯ ಮಾಡಿದ್ದೇವೆ ಎಂಬ ಆತ್ಮವಲೋಕನ ಅತ್ಯವಶ್ಯಕ. ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಸಹಕಾರಿಗಳ ಸಮಸ್ಯೆಗಳನ್ನು ಅರಿತು ಅವರ ಸಂಕಷ್ಟಕ್ಕೆ ದಾರಿದೀಪವಾಗುವ ಕೆಲಸವನ್ನು ಮಾಡಲಿ ಎಂದರು.
ಶ್ರೀ ವಿಜಯರಾಯ ಸಂಗಮೇಶ್ವರ ಪತ್ತಿನ ಸಹಕಾರ ಸಂಘದ ನಿರ್ಗಮಿತ ಅಧ್ಯಕ್ಷರಾದ ಬಿ.ಎಸ್. ದ್ಯಾಮಪ್ಪ ಡಿ.ಗುರುಸ್ವಾಮಿ ಹಾಗೂ ಮಾಜಿ ನಿರ್ದೇಶಕನನ್ನು ಸನ್ಮಾನಿಸಲಾಯಿತು ತಿಮ್ಮಪ್ಪ ಶ್ರೀನಿವಾಸ್ ರಾಮಚಂದ್ರಪ್ಪ ಮಂಜುನಾಥ್ ತಿಪ್ಪಣ್ಣ ಸಿದ್ದಪ್ಪ ವಿರೂಪಾಕ್ಷ ರಾಜೇಶ್ವರಿ ಹನುಮಂತಪ್ಪ ಇವರನ್ನು ಅಭಿನಂದಿಸಲಾಯಿತು.
Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ನೂತನವಾಗಿ ಶ್ರೀ ವಿಜಯರಾಯ ಸಂಗಮೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಆರ್. ಚಂದ್ರಪ್ಪ, ಉಪಾಧ್ಯಕ್ಷರಾಗಿ ಆಯ್ಕೆಯಾದ ಕೋಡಿಹಳ್ಳಿ ಧರಣಪ್ಪ, ನಿರ್ದೇಶಕರಾಗಿ ಆಯ್ಕೆಯಾಗಿರುವ ಗುಳಿಹಟ್ಟಿ ಹಾಲಸಿದ್ದಪ್ಪ, ದೇವರಾಜ್, ಮಾಚೇನಹಳ್ಳಿ ಬಸಣ್ಣ, ಕಲ್ಲಪ್ಪ, ಮಣಿಕಂಠ, ಮಂಜುನಾಥ್, ಶ್ರೀನಿವಾಸ್ ರವಿಕುಮಾರ್, ನರಸಿಂಹರಾಜು, ಜಯಲಕ್ಷ್ಮಮ್ಮ, ಪದ್ಮಾವತಿ ಇವರನ್ನು ಸನ್ಮಾನಿಸಲಾಯಿತು.
