ಕ್ರೈಂ ಸುದ್ದಿ
ಗಂಡನ ಮೇಲಿನ ದ್ವೇಷಕ್ಕೆ ಮಗುವಿಗೆ ಬರೆಹಾಕಿದ ಮಹಾತಾಯಿ
CHITRADURGA NEWS | 05 FEBRUARY 2025
ಚಿತ್ರದುರ್ಗ: ಗಂಡನ ಮೇಲಿನ ದ್ವೇಷದ ಕಾರಣಕ್ಕೆ 7 ವರ್ಷದ ಬಾಲಕನಿಗೆ ತಾಯಿಯೇ ಬರೆ ಹಾಕಿರುವ ಘಟನೆ ನಡೆದಿದೆ.
ನಗರದ ಕಾವಾಡಿಗರಹಟ್ಟಿ ಬಳಿಯ ಆಶ್ರಯ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಮೊಮ್ಮಗನಿಗೆ ನ್ಯಾಯ ಕೊಡಿಸಿ ಎಂದು ಅಜ್ಜ ಶಮ್ಶಾದ್ ಪೊಲೀಸರ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಸಮಾಧಿಯಿಂದ ದೇಹ ಹೊರ ತೆಗೆದು ತನಿಖೆ | ನಾಲ್ಕು ತಿಂಗಳ ಹಿಂದೆ ಅಂತ್ಯಕ್ರಿಯೆ
ಅನೀಲ್ ಹಾಗೂ ಉಮ್ಮೆಸಲ್ಮಾ 10 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ದಾಂಪತ್ಯದಲ್ಲಿ ಬಿರುಕು ಮೂಡಿ 2 ವರ್ಷಗಳ ಹಿಂದೆ ತಲಾಖ್ ಪಡೆದು ಬೇರೆಯಾಗಿದ್ದಾರೆ.
ಅಜ್ಜಿ ಮನೆಗೆ ಹೋಗಬಾರದು ಹಾಗೂ ತಂದೆಯ ಜೊತೆ ಮಾತನಾಡಬಾರದು ಎಂದು ಬಾಲಕನಿಗೆ ಕೂಡಿ ಹಾಕಿ, ಊಟ ಕೊಡದೆ, ಕೈ ಕಾಲಿಗೆ ಬರೆ ಹಾಕಲಾಗಿದೆ ಎಂದು ದೂರಲಾಗಿದೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಸಭೆ | ನಿಯಮ ಮೀರಿದರೆ ಕ್ರಮದ ಎಚ್ಚರಿಕೆ
ಈ ಸಂಬಂಧ ಪೊಲೀಸ್ ಠಾಣೆ ಬಳಿಯೇ ಎರಡೂ ಕುಟುಂಬಗಳ ನಡುವೆ ವಾಗ್ವಾದ ನಡೆದಿದ್ದು, ಮಗು ತಮ್ಮ ಬಳಿ ಇರಬೇಕು ಎಂದು ಎರಡೂ ಕುಟುಂಬಗಳ ವಾದಿಸಿವೆ.
ಮಗುವನ್ನು ಸಾಕಲು ಆಗದಿದ್ದರೆ ನನಗೆ ಕೊಡಿ ಎಂದು ಅಜ್ಜ ಶಮ್ಶಾದ್ ಮನವಿ ಮಾಡಿದ್ದು, ಮಾಧ್ಯಮಗಳ ಮುಂದೆಯೇ ಅಂಗಲಾಚಿ ಬೇಡಿಕೊಂಡಿದ್ದಾರೆ.
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್ ಎಷ್ಟಿದೆ?
ಮಗುವಿನ ಕೌನ್ಸಿಲಿಂಗ್ ನಡೆಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಅಜ್ಜಿಯ ಜೊತೆಗೆ ಕಳಿಸಿದ್ದಾರೆ. ಮಗವಿನ ಪರವಾಗಿ ಅಜ್ಜಿಯ ಜೊತೆಗೆ ಕರವೇ ಕಾರ್ಯಕರ್ತರು ಸಾಥ್ ನೀಡಿದ್ದರು.