ಮುಖ್ಯ ಸುದ್ದಿ
ಸೇನೆಯಿಂದ ನಿವೃತ್ತಿ ಹೊಂದಿದ ಎಸ್.ಮಲ್ಲಿಕಾರ್ಜುನಗೆ ಸ್ವಗ್ರಾಮದಲ್ಲಿ ಅದ್ದೂರಿ ಸ್ವಾಗತ
Published on
CHITRADURGA NEWS | 03 FEBRUARY 2025
ಚಿತ್ರದುರ್ಗ: ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ದೇಶದ ವಿವಿಧ ರಾಜ್ಯಗಳಲ್ಲಿ ಮತ್ತು ಭಾರತದ ಗಡಿಭಾಗಗಳಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮವಾದ ಕುಂಚಗನಾಳ್ ಗ್ರಾಮಕ್ಕೆ ಆಗಮಿಸಿದ ಎಸ್.ಮಲ್ಲಿಕಾರ್ಜುನ್ ಮತ್ತು ವೇಣುಗೋಪಾಲ್ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
Also Read: ರೆಡ್ಡಿ ಜನಸಂಘದ ವ್ಯವಸ್ಥಾಪಕ ಜಿ.ಎನ್.ಹನುಮಂತರೆಡ್ಡಿ ಇನ್ನಿಲ್ಲ
ಚಿತ್ರದುರ್ಗ ನಗರದ ರಾಜ ಬೀದಿಗಳಲ್ಲಿ ವಾದ್ಯಗೋಷ್ಟಿಯೊಂದಿಗೆ ಮೆರವಣಿಗೆ ಮಾಡಿ, ಅಂಬೇಡ್ಕರ್, ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕುಂಚಿಗನಾಳು ಗ್ರಾಮದ ಉಪನ್ಯಾಸಕ ಎಸ್.ಲಕ್ಷೀಕಾಂತ್, ವಕೀಲರಾದ ಅಶೋಕ್ ಕುಮಾರ್ ಸಿರಿವೆಲ್ಲಪ್ಪ, ತಮ್ಮಣ್ಣ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಕುಟುಂಬ ವರ್ಗದವರ, ಗ್ರಾಮಸ್ಥರು, ಭಾರತೀಯ ನಿವೃತ್ತ ಅರೇ ಸೇನಾ ಸೈನಿಕರ ಸಂಘ ಅಧ್ಯಕ್ಷರು, ಕಾರ್ಯದರ್ಶಿಗಳು ಪ್ರವಾಸಿ ಮಂದಿರದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.
Continue Reading
Related Topics:Army, Chitradurga, Chitradurga news, Chitradurga Updates, India, Kannada Latest News, Kannada News, Retirement, Soldier, Welcome, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ನಿವೃತ್ತಿ, ಭಾರತ, ಮೆರವಣಿಗೆ, ಸೇನೆ, ಸೈನಿಕ, ಸ್ವಾಗತ
Click to comment