Connect with us

    ಕಳಚಿಬಿತ್ತು ಆಸ್ಪತ್ರೆ ಸೀಲಿಂಗ್ | ಬೆಡ್ ಮೇಲಿದ್ದ ರೋಗಿ ಜಸ್ಟ್ ಮಿಸ್

    Hospital seeling drop

    ಮುಖ್ಯ ಸುದ್ದಿ

    ಕಳಚಿಬಿತ್ತು ಆಸ್ಪತ್ರೆ ಸೀಲಿಂಗ್ | ಬೆಡ್ ಮೇಲಿದ್ದ ರೋಗಿ ಜಸ್ಟ್ ಮಿಸ್

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 26 JANUARY 2025

    ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಯಲ್ಲಿ ಈ ಹಿಂದೆ ಹಲವು ಸಲ RCC ಸೀಲಿಂಗ್ ಕುಸಿದು ಬಿದ್ದರೂ, ಆಸ್ಪತ್ರೆಯ ಆಡಳಿತ ವ್ಯವಸ್ಥೆ ಎಚ್ಚೆತ್ತಿಲ್ಲ ಎನ್ನುವುದಕ್ಕೆ ಇಂದು ಮತ್ತೊಂದು ಘಟನೆ ಉದಾಹರಣೆಯಾಗಿದೆ.

    ಈ ಘಟನೆಯಿಂದಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಜೀವದ ಜೊತೆಗಿನ ಚೆಲ್ಲಾಟ ಮುಂದುವರೆದಿದೆ ಎನ್ನುವುದು ಸ್ಪಷ್ಟವಾಗಿದೆ. ಇದು ಆಸ್ಪತ್ರೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯದ ಪರಮಾವಧಿ ಎಂದು ರೋಗಿಗಳು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.

    ಇದನ್ನೂ ಓದಿ: MLC ಕೆ.ಎಸ್.ನವೀನ್ ಮನೆಯಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಸಹಪಂಕ್ತಿ ಭೋಜನ 

    ಜ.26 ಭಾನುವಾರ ಮಧ್ಯಾಹ್ನ ಜಿಲ್ಲಾ ಆಸ್ಪತ್ರೆಯ IPP ವಾರ್ಡ್‍ನಲ್ಲಿ ಕಟ್ಟಡದ ಸೀಲಿಂಗ್ ಬೆಡ್ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ.

    IPP ವಾರ್ಡ್‍ನ ಸೀಲಿಂಗ್ ಬೀಳುವ ಅರೆಕ್ಷಣ ಮೊದಲು ಆ ಬೆಡ್ ಮೇಲಿದ್ದ ರೋಗಿ ಶೌಚಕ್ಕೆಂದು ಎದ್ದು ಹೋಗುತ್ತಿದ್ದಾಗಲೇ ಕಟ್ಟಡದ ಮೇಲಿನ ಸೀಲಿಂಗ್ ದೊಪ್ಪನೆ ಬಿದ್ದಿದೆ.

    ಇದನ್ನೂ ಓದಿ: ಗಣರಾಜ್ಯೋತ್ಸವ ಸಂಭ್ರಮ | ಮೇಟಿಕುರ್ಕೆ ಬಳಿ ಕೈಗಾರಿಕಾ ಕಾರಿಡಾರ್ | ಸಚಿವ ಡಿ.ಸುಧಾಕರ್

    ಅಲ್ಲಿದ್ದ ಮೂರು ಬೆಡ್‍ಗಳ ರೋಗಿಗಳು ಅಚ್ಚರಿ ಎಂಬಂತೆ ಅಲ್ಲಿರಲಿಲ್ಲ. ಈ ಕಾರಣಕ್ಕೆ, ಯಾರಿಗೂ ತೊಂದರೆ ಆಗಿಲ್ಲ.

    ಇನ್ನಾದರೂ ರೋಗಿಗಳ ಜೀವದ ಜೊತೆಗೆ ಚೆಲ್ಲಾಟ ಆಡುವುದನ್ನು ಬಿಟ್ಟು, ಹಳೆಯ ಕಟ್ಟಡವಾಗಿರುವುದರಿಂದ ಅಗತ್ಯ ರಿಪೇರಿ ಕಾರ್ಯಗಳನ್ನು ಮಾಡಿ ಮುಂದೆ ಆಗುವ ಅನಾಹುತ ತಪ್ಪಿಸಬೇಕಾಗಿದೆ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪದೇ ಪದೇ ಈ ರೀತಿಯ ಘಟನೆ ನಡೆಯುತ್ತಿದ್ದರೂ ನಿರ್ಲಕ್ಷಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ, ಇದನ್ನು ಖಂಡಿಸುತ್ತೇವೆ. ಆಸ್ಪತ್ರೆ ಕಟ್ಟಡ ಹಳೆಯದಾಗಿದ್ದು, ತಕ್ಷಣ ಎಚ್ಚೆತ್ತು ಅಗತ್ಯ ರಿಪೇರಿ ಮಾಡಿಸಬೇಕು.

    | ಕೆ.ಟಿ.ಶಿವಕುಮಾರ್, ಜಿಲ್ಲಾಧ್ಯಕ್ಷರು, ಕರುನಾಡ ವಿಜಯಸೇನೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top