ಮುಖ್ಯ ಸುದ್ದಿ
ವಿವಿ ಸಾಗರಕ್ಕೆ ಸಿಎಂ ಬಾಗೀನ | ಹೊಸದುರ್ಗ-ಹಿರಿಯೂರು ನಡುವೆ ಮಾರ್ಗ ಬದಲಾವಣೆ
Published on
CHITRADURGA NEWS | 22 JANUARY 2025
ಚಿತ್ರದುರ್ಗ: ಮೂರನೇ ಬಾರಿಗೆ ಕೋಡಿ ಬಿದ್ದಿರುವ ವಾಣಿವಿಲಾಸ ಸಾಗರ ಜಲಾಶಯಕ್ಕೆ ಜನವರಿ 23 ರಂದು ಮಧ್ಯಾಹ್ನ 3 ಗಂಟೆಗೆ ಬಾಗೀನ ಅರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಗೀನ ಅರ್ಪಿಸಲಿದ್ದು, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ವಾಹನ ಮಾರ್ಗ ಬದಲಾವಣೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಲ್ಲಾಪುರ ಕೆರೆ ನಿರ್ಲಕ್ಷ್ಯ | ಸುಮೋಟೊ ಕೇಸ್ | ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ
ಹೊಸದುರ್ಗ ಕಡೆಯಿಂದ ಹಿರಿಯೂರು ಕಡೆಗೆ ಬರುವ ವಾಹನಗಳು ವಿ.ವಿ.ಪುರ ಕಡೆಗೆ ಬಾರದೇ, ತಳವಾರಹಟ್ಟಿ ಮಾರ್ಗವಾಗಿ ಭರಮಗಿರಿ ಕ್ರಾಸ್ ಮೂಲಕ ಹಿರಿಯೂರು ಕಡೆಗೆ ತೆರಳಬೇಕು.
ಹಿರಿಯೂರು ಕಡೆಯಿಂದ ಹೊಸದುರ್ಗ ಕಡೆಗೆ ಸಂಚರಿಸುವ ವಾಹನಗಳು ಕೂಡಾ ತಳವಾರಹಟ್ಟಿ ಮಾರ್ಗವಾಗಿ ಸಂಚರಿಸಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
Continue Reading
Related Topics:Bagina, change of route, Chief Minister, Chitradurga, Chitradurga BJP, Chitradurga news, Hiriyur, Hosdurga, Kannada News, VV Sagar, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಬಿಜೆಪಿ, ಬಾಗೀನ, ಮಾರ್ಗ ಬದಲಾವಣೆ, ಮುಖ್ಯಮಂತ್ರಿ, ವಿವಿ ಸಾಗರ, ಹಿರಿಯೂರು, ಹೊಸದುರ್ಗ
Click to comment