Connect with us

    ಪೊಲೀಸ್ ಕ್ರಿಕೆಟ್ ಕಪ್ | ಸಚಿವ ಡಿ.ಸುಧಾಕರ್ ಚಾಲನೆ

    Officials Police Cricket Cup

    ಮುಖ್ಯ ಸುದ್ದಿ

    ಪೊಲೀಸ್ ಕ್ರಿಕೆಟ್ ಕಪ್ | ಸಚಿವ ಡಿ.ಸುಧಾಕರ್ ಚಾಲನೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 11 JANUARY 2025

    ಚಿತ್ರದುರ್ಗ: ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಆಫಿಷಿಯಲ್ಸ್ ಪೊಲೀಸ್ ಕ್ರಿಕೆಟ್ ಕಪ್ ಗೆ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಚಾಲನೆ ನೀಡಿದರು.

    Also Read: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಹತ್ತಿ ರೇಟ್ ಎಷ್ಟಿದೆ?

    ನಂತರ ಮಾತನಾಡಿದ ಸಚಿವರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ಉಲ್ಲಾಸ ದೊರೆಯವುದು. ಜತೆಗೆ ಕೆಲಸ ಮಾಡಲು ಚೈತನ್ಯವೂ ಬರಲಿದೆ ಎಂದು ಹೇಳಿದರು.

    ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ವಿವಿಧ ಇಲಾಖೆಯ ಸರ್ಕಾರಿ ನೌಕರರು ಸೇರಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಕ್ರೀಡೆಯು ಮನಸ್ಸುನ್ನು ಮುದಗೊಳಿಸುವ ಜತೆಗೆ ನಮ್ಮ ಕೆಲಸಗಳ ಕಡೆ ಹೆಚ್ಚು ಮಗ್ನರಾಗಲು, ಆಸಕ್ತಿವಹಿಸಲು ಸಾಧ್ಯವಾಗಲಿದೆ. ಕ್ರೀಡೆ ಇರುವ ಕಡೆ ಯಶಸ್ಸು ಇರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಕ್ರೀಡೆಯಲ್ಲಿ ಸೋಲು-ಗೆಲವು ಸಹಜ. ಇದಕ್ಕಿಂತ ಮುಖ್ಯವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ ಎಂದು ತಿಳಿಸಿದ ಅವರು ಎಲ್ಲ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

    Also Read: ಆರ್ಥಿಕ ಸಂಕಷ್ಟದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯ | ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಯಾವುದೇ ಇಲಾಖೆ ಇರಲಿ ಪ್ರತಿಯೊಬ್ಬರಿಗೂ ದೈಹಿಕ ಸಾಮಾಥ್ರ್ಯ ಬಹಳ ಮುಖ್ಯ. ಎಲ್ಲರಿಗೂ ದೈಹಿಕ ಸಾಮಾಥ್ರ್ಯದ ಬಗ್ಗೆ ಅರಿವು ಹಾಗೂ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕ್ರೀಡಾಕೂಟ ಆಯೋಜಿಲಾಗಿದ್ದು, ಕ್ರೀಡಾಕೂಟಗಳಿಂದ ಉತ್ತಮ ಗೆಳೆತನ, ಬಾಂಧವ್ಯ ವೃದ್ಧಿಯಾಗಲಿದೆ ಎಂದು ತಿಳಿಸಿದರು.

    ಆಫಿಷಿಯಲ್ಸ್ ಪೊಲೀಸ್ ಕ್ರಿಕೆಟ್ ಕಪ್ ಪಂದ್ಯಾವಳಿಯಲ್ಲಿ ಪೊಲೀಸ್ ಇಲಾಖೆ, ನ್ಯಾಯಾಂಗ ಇಲಾಖೆ, ಬೆಸ್ಕಾಂ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ, ಭದ್ರಾ ಮೇಲ್ದಂಡೆ ಯೋಜನೆ, ನಗರಸಭೆ, ಅಂಚೆ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪತ್ರಕರ್ತರ ತಂಡ ಸೇರಿದಂತೆ 16 ವಿವಿಧ ಇಲಾಖೆಯ ತಂಡಗಳು ಭಾಗವಹಿಸಿದ್ದವು.

    ಪೊಲೀಸ್ ಇಲಾಖೆಗೆ ಹೊಸ ವಾಹನಗಳ ಹಸ್ತಾಂತರ: 

    ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ 4 ಬೊಲೆರೋ ನಿಯೋ ಹೊಸ ಮಾದರಿಯ ವಾಹನಗಳನ್ನು ಪೊಲೀಸ್ ಇಲಾಖೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹಸ್ತಾಂತರಿಸಿದರು.

    Handover of new vehicles to Police Department

    ಹೊಸ ವಾಹನಗಳ ಹಸ್ತಾಂತರ

    ಮೊದಲ ಹಂತದಲ್ಲಿ 4 ಬೊಲೆರೋ ವಾಹನಗಳು ಹಾಗೂ ಎರಡನೇ ಹಂತದಲ್ಲಿ 4 ಬೊಲೆರೋ ನಿಯೋ ವಾಹನಗಳು ಸೇರಿದಂತೆ ಒಟ್ಟು 8 ಬೊಲೆರೋ ವಾಹನಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಶಾಸಕರ ಅನುದಾನದಲ್ಲಿ ಪೊಲೀಸ್ ಇಲಾಖೆಗೆ ನೀಡಿದ್ದಾರೆ.

    Also Read: ಕೋಡಿ ಬಿತ್ತು ವಿವಿ ಸಾಗರ‌ | 118 ವರ್ಷಗಳ ಇತಿಹಾಸದಲ್ಲಿ 3ನೇ ಬಾರಿ‌ ದಾಖಲೆ

    ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್ ಉಪಾಧೀಕ್ಷಕ ಗಣೇಶ್, ಸೈಬರ್ ಕ್ರೈಂ ವಿಭಾಗದ ಪೊಲೀಸ್ ಉಪಾಧೀಕ್ಷಕ ಉಮೇಶ್ ಈಶ್ವರ್ ನಾಯ್ಕ್, ಚಿತ್ರದುರ್ಗ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ದಿನಕರ್ ಸೇರಿದಂತೆ ಮತ್ತಿತರರು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top